Tuesday, October 21, 2025
Flats for sale
Homeಸಿನಿಮಾಮಂಗಳೂರು : ಮೇ 23 ರಂದು "ಗಂಟ್ ಕಲ್ವೆರ್' ತುಳು ಚಿತ್ರ ತುಳುನಾಡಿನಾದ್ಯಂತ ತೆರೆಗೆ…!

ಮಂಗಳೂರು : ಮೇ 23 ರಂದು “ಗಂಟ್ ಕಲ್ವೆರ್’ ತುಳು ಚಿತ್ರ ತುಳುನಾಡಿನಾದ್ಯಂತ ತೆರೆಗೆ…!

ಮಂಗಳೂರು : ಸ್ನೇಹ ಕೃಪಾ ಮೂವೀಸ್ ಲಾಂಛನದಲ್ಲಿ ತಯಾರಾದ ಕಲಾಸಾರ್ವಭೌಮ ಸುಧಾಕರ ಬನ್ನಂಜೆ ಕತೆ ಚಿತ್ರಕತೆ ಸಂಭಾಷಣೆ ಹಾಡು ಬರೆದು ನಿರ್ಮಿಸಿ ನಿರ್ದೇಶಿಸಿರುವ “ಗಂಟ್ ಕಲ್ವೆರ್” ತುಳು ಚಿತ್ರ ಮೇ 23 ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಸುಧಾಕರ್ ಬನ್ನಂಜೆಯವರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಭಾರತ್ ಸಿನಿಮಾಸ್, ಸಿನಿಪೋಲಿಸ್ ಪಿವಿ ಆರ್ ,ರೂಪವಾಣಿ , ಉಡುಪಿಯಲ್ಲಿ ಭಾರತ್ ಸಿನಿಮಾಸ್, ಕಲ್ಪನಾ, ಮಣಿಪಾಲ, ಪಡುಬಿದ್ರೆ ಪುತ್ತೂರು, ದೇರಳಕಟ್ಟೆಯ ಭಾರತ್ ಸಿನಿಮಾಸ್, ನಣಿಪಾಲದ ಐನಾಕ್ಸ್ ಕಾರ್ಕಳದ ರಾಧಿಕಾ, ಪ್ಲಾನೆಟ್ ಬೆಳ್ತಂಗಡಿಯ ಭಾರತ್, ಸುರತ್ಕಲ್ ನ ನಟರಾಜ್ ಹಾಗೂ ಸಿನಿ ಗ್ಯಾಲಕ್ಸಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ನವೀನ್ ಡಿ ಪಡೀಲ್ ಅರವಿಂದ ಬೋಳಾರ್ , ಭೋಜರಾಜ್ ವಾಮಂಜೂರು ,ಆರ್ಯನ್ ಶೆಟ್ಟಿ, ಸ್ಮಿತಾ ಸುವರ್ಣ,ಉಮೇಶ್ ಮಿಜಾರು , ದಿಶಾ ಪುತ್ರನ್, ಸುಂದರ ರೈ ಮಂದಾರ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಯಾದವ ಮಣ್ಣಗುಡ್ಡೆ, ರವಿ ಸುರತ್ಕಲ್ , ವಸಂತ ಮುನಿಯಾಲು , ಪ್ರಶಾಂತ್ ಎಳ್ಳಂಪಳ್ಳಿ , ಗಿರೀಶ್ ಎಂ ಶೆಟ್ಟಿ ಕಟೀಲ್, ಸುಧೀರ್ ಕೊಠಾರಿ, ಕ್ಲಾಡಿ ಡಿಲಿಮಾ, ನಾಗೇಶ ಶೆಟ್ಟಿ, ಸಂಪತ್ , ಪ್ರದೀಪ್ ಆಳ್ವ ಕದ್ರಿ, ತಮ್ಮ ಲಕ್ಷ್ನಣ್, ಜೀವನ್ ಉಲ್ಲಾಳ್, ರಾಕೇಶ್ ಆಚಾರ್ಯ ,ಶೇಖರ ಪಾಂಗಾಳ ,ಸುರೇಶ್ ಯು ಪಿ,ಸತೀಶ್ ಕಲ್ಯಾಣಪುರ, ಮೋಹನ್ ಕೊಪ್ಪಳ, ಮಂಗೇಶ್ ಭಟ್ ವಿಟ್ಲ, ಚೇತಕ್ ಪೂಜಾರಿ ನಮಿತಾ ಕುಳೂರು, ಶಾಂತಿ ಶೆಣೈ, ಸಂಜಿತಾ , ಸಿಂಚನ, ಸುಮಾಲಿನಿ ಪೆರ್ಡೂರು, ನರೇಶ್ ಸಸಿಹಿತ್ಲು, ಶಶಿ ಬೆಳ್ಳಾಯರು, ಉದಯ ಆಳ್ವ, ದಿತೇಶ್, ಸುನೀಲ್, ಅರುಣ್, ರಾಮದಾಸ ಸಸಿಹಿತ್ಲು, ಹರೀಶ್ ಕಡಂದಲೆ, ಮುಂತಾದವರು ನಟಿಸಿದ್ದಾರೆ ವಿಶೇಷ ಪಾತ್ರದಲ್ಲಿ ಅಥರ್ವ ಪ್ರಕಾಶ್ , ಪ್ರಣವ್ ಹೆಗ್ಡೆ, ಶ್ರೀಕಾಂತ ರೈ, ಶೈಲೇಶ್ ಕೋಟ್ಯಾನ್ ನಟಿಸಿದ್ದಾರೆ.

ವಿ ಮನೋಹರ್ ಸಂಗೀತ ,ಶಂಕರ್ ರವಿಕಿಶೋರ್ ಛಾಯಾಗ್ರಹಣ ,ಕೆ ಗಿರೀಶ್ ಕುಮಾರ್ ಸಂಕಲನ,ತಮ್ಮ ಲಕ್ಷ್ಮಣ್ ಕಲೆ, ಕೌರವ ವೆಂಕಟೇಶ್ ಸಾಹಸ , ಪ್ರಶಾಂತ ಎಳ್ಳಂಪಳ್ಳಿ, ರಾಮದಾಸ ಸಸಿಹಿತ್ಲು ಸಹ ನಿರ್ದೇಶನ ಇರುವ ಈ ಚಿತ್ರದ ಸಹನಿರ್ಮಾಪಕರು ರಾಜಾರಾಂ ಶೆಟ್ಟಿ ಉಪ್ಪಳ, ಮಮತಾ ಎಸ್ ಬನ್ನಂಜೆ , ಗಿರೀಶ್ ಎಸ್ ಪೂಜಾರಿ, ಪ್ರಾರ್ಥನ್ ಬನ್ನಂಜೆ, ಪ್ರೇರಣ್ ಬನ್ನಂಜೆ , ಕೃತಿ ಆರ್ ಶೆಟ್ಟಿ , ಚೀಫ್ ಕೋ ಆರ್ಡಿನೇಟರ್ ಸುಧಾಕರ ಕುದ್ರೋಳಿ, ಸಹಾಯ ಸಂತೋಷ್ ಶೆಟ್ಟಿ ಅಳಿಕೆ ಮುಂತಾದವರು ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಲಕ್ಷಣ್ ,ಸುಧಾಕರ್ ಕುದ್ರೋಳಿ,ಉಮೇಶ್ ಆಚಾರ್ಯ, ಪ್ರಶಾಂತ್ ಆಚಾರ್ ರವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular