ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಭಾಷಣದ ವೇಳೆ ಮುಸ್ಲಿಮರ ಜೊತೆ ವ್ಯಾಪಾರ ವಹಿವಾಟು ನಡೆಸಬೇಡಿ, ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಿ ಅಂತಾ ಹೇಳಿದ್ದ ಗ್ರಾ.ಪಂ ಅಧ್ಯಕ್ಷೆ ಮೇಲೆ ಎಫ್.ಐ.ಆರ್ ದಾಖಲಾಗಿದೆ.
ಬಜ್ಪೆಯಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿ ನುಡಿನಮನ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಗ್ರಾ.ಪಂ ಅಧ್ಯಕ್ಷೆ ಭಾಗಿಯಾಗಿದ್ದು ಮೇ.12 ರಂದು ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಭಾರತಿ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಆಕ್ರೋಶಗೊಂಡು ಈ ರೀತಿ ಮಾತನಾಡಿದ್ದರು.
ಮುಸ್ಲಿಂ ವ್ಯಾಪಾರಿಗಳು, ಮುಸ್ಲಿಂ ಆಟೋ ಚಾಲಕರನ್ನು ಬಹಿಷ್ಕರಿಸಿ ಎಂದು ಭಾರತಿ ಶೆಟ್ಟಿ ಭಾಷಣ ಮಾಡಿದ್ದು ಇದರಿಂದ ಹರಿಪ್ರಸಾದ್ ಇರ್ವತ್ರಾಯ ಎಂಬುವರ ದೂರಿನ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ BNS 2023 U/S196(1) (a) ಅಡಿ ಪ್ರಕರಣ ದಾಖಲಾಗಿದೆ.