ಮಂಗಳೂರು ; ಕರ್ನಾಟಕ ರಾಜ್ಯದಲ್ಲಿ ಅನೇಕ ದಲಿತ ಮುಖಂಡರು ರಾಜಕೀಯ ಉನ್ನತ ಸ್ಥಾನದಲ್ಲಿದ್ದು ಸಂತೋಷದ ವಿಷಯ ಅವರೆಲ್ಲರೂ ತಮ್ಮ ಪರಿಶ್ರಮದ ಮೂಲಕ ರಾಜ್ಯ ಮಟ್ಟದಲ್ಲಿ ನಾಯಕರಾಗಿ ಬೆಳೆದಿದಾರೆ ಆದರೂ ಅವರೆಲ್ಲರೂ ಜೀವನದಲ್ಲಿ ಒಂದು ರೀತಿಯ ಅವಮಾನ ನಿಂದನೆ ಟೀಕೆಗಳಿಗೆ ಒಳಗಾಗಿದ್ದವರು ತಮ್ಮ ಜೀವನದಲ್ಲಿ ಎಲ್ಲ ನೋವುಗಳನ್ನು ಮೆಟ್ಟಿ ನಿಂತು ರಾಜ್ಯ ರಾಜಕೀಯದಲ್ಲಿ ತಮ್ಮ ಹೆಸರು ಉಳಿಯುವಂತೆ ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಹೋರಾಟ ಸಮಿತಿ ಜಿಲ್ಲಾ ಮುಖಂಡ ಅನಿಲ್ ಕುಮಾರ್ ಕಂಕನಾಡಿ ರವರು ತಿಳಿಸಿದ್ದಾರೆ.
ಅದರಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಖರ್ಗೆ, ಗೋವಿಂದ ಕಾರಜೋಳ, ಆಂಜನೇಯ, ಮಹಾದೇವಪ್ಪ, ಮುನಿಯಪ್ಪ, ಛಲವಾದಿ ನಾರಾಯಣಸ್ವಾಮಿ, ಪ್ರಿಯಾಂಕಾ ಖರ್ಗೆ,ಹೀಗೆ ಅನೇಕ ದಲಿತ ನಾಯಕರು ಮುಂಚೂಣಿಯಲ್ಲಿದ್ದಾರೆ. ಇವರೆಲ್ಲರೂ ಪಕ್ಷ ಬೇರೆ ಬೇರೆ ಆದರೂ ಕೂಡ ಅವರೆಲ್ಲರೂ ನಮ್ಮ ನಾಯಕರೇ ಅವರನ್ನು ರಾಜ್ಯದ ಎಲ್ಲ ದಲಿತ ಸಮುದಾಯದ ಜನರು ಅವರನ್ನು ಬೆಂಬಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಆದರೆ ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಕೋಮು ಗಲಭೆಯಲ್ಲಿ ಬಂಟ್ವಾಳದ ಕೊಳ್ತಮಜಲ್ ನಿವಾಸಿ ಅಬ್ದುಲ್ ರಹಿಮ್ ಕೊಲೆಯಾಗಿದ್ದು ಈ ಬಗ್ಗೆ ಕೆಲವು ಮುಸ್ಲಿಂ ಮುಖಂಡರು ದಲಿತ ಮುಖಂಡ ಹಾಗೂ ಕರ್ನಾಟಕ ರಾಜ್ಯದ ಗೃಹ ಸಚಿವ ಡಾ!! ಜಿ ಪರಮೇಶ್ವರ್ ಬಗ್ಗೆ ಕೆಟ್ಟದಾಗಿ ಬೈದು ನಿಂದನೆ ಮಾಡಿದಲ್ಲದೆ, ಅದನ್ನು ರೆಕಾರ್ಡ್ ಮಾಡಿ ಎಲ್ಲ ವಾಟ್ಸಪ್ ಗ್ರೂಪ್ ಗಳಿಗೆ ರವಾನಿಸಿದ್ದು ಜಿಲ್ಲೆಯಾದ್ಯಂತ ಈ ಧ್ವನಿ ಮುದ್ರಣ ಬಹಳ ವೈರಲ್ ಕೂಡ ಆಗಿತ್ತು. ಇದರಿಂದ ನಮಗೆಲ್ಲ ತುಂಬಾ ಬೇಸರವಾಗಿದೆ. ಇವರ ಬೇಜವಾಬ್ದಾರಿ ಕೃತ್ಯದಿಂದ ರಾಜ್ಯ ದಲಿತ ಸಮುದಾಯಕ್ಕೆ ತುಂಬಾ ನೋವಾಗಿದೆ. ರಾಜಕೀಯ ಉನ್ನತ ಹುದ್ದೆಯಲ್ಲಿರುವ ನಮ್ಮ ನಾಯಕರಾದ ಡಾ!! ಜಿ ಪರಮೇಶ್ವರ್ ಹಾಗೂ ಅವರ ಕುಟುಂಬದ ಬಗ್ಗೆ ಈ ರೀತಿ ನಿಂದನೆ ಮಾಡಿರುವುದು ಜಿಲ್ಲೆಗೂ ಕೆಟ್ಟ ಹೆಸರು ಹಾಗೂ ಮುಸ್ಲಿಂ ಸಮುದಾಯಕ್ಕೂ ಕೆಟ್ಟ ಹೆಸರು ಬಂದಂತ್ತಾಯಿತು. ನಮ್ಮ ದಲಿತ ನಾಯಕನ್ನು ನಿಂದಿಸಿ ಮಾನಹಾನಿ ಮಾಡಿದ್ದಾರೆ ಅಲ್ಲದ ಅವರ ಕುಟುಂಬದ ಬಗ್ಗೆ ಅವರ ಮಗಳ ಬಗ್ಗೆನೂ ಕೇವಲವಾಗಿ ಮಾತಾಡಿದ್ದು ಇದರಿಂದ ದಲಿತ ಸಮುದಾಯದ ಜನರಿಗೆ ತುಂಬಾ ಬೇಸರವಾಗಿದೆ ಇವರ ಈ ಕೃತ್ಯವನ್ನು ನಮ್ಮ ದಲಿತ ಸಂಘಟನೆ ತೀವ್ರವಾಗಿ ಖಂಡಿಸುತ್ತಿದ್ದು ಗೃಹ ಸಚಿವರ ಬಗ್ಗೆ ಲಘುವಾಗಿ ಮಾತನಾಡಿ ನಿಂದನೆ ಮಾಡಿದವರ ವಿರುದ್ಧ ಜಾತಿ ನಿಂದನೆ ಕೇಸು ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಎಸ್.ಪಿ ಆನಂದ್,ವಿಷುಕುಮಾರ್ ,ಸಿದ್ದಪ್ಪ ಬಸವನಗರ ,ದಶರಥ ದಡ್ಡಲ್ ಕಾಡ್,ಪ್ರಸಾದ್ ಕಂಕನಾಡಿ,ಆರ್.ಜೆ ಕರ್ಕೇರವರು ಉಪಸ್ಥಿತರಿದ್ದರು.