ಮಂಗಳೂರು : ಸಾಮಾಜಿಕ ಜಾಲತಾಣವಾದ ಇನ್ನಾ ಗ್ರಾಮ್ನ ಎಸ್ಡಿಪಿಎಲ್ 2025 ಐಡಿಯಲ್ಲಿ ಅನ್ಯಧರ್ಮದ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಾಕಾರಿ ಪೋಸ್ಟ್ ಹಾಕಿದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದ್ದು, ಆರೋಪಿ ಅಬ್ದುಲ್ ಖಾದರ್ ನೇಹಾದ್ (27) ಎಂಬಾತನನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ತಾಂತ್ರಿಕ ವಿಧಾನದ ಮೂಲಕ ತನಿಖೆ ನಡೆಸಿದಾಗ ಇನ್ನಾ ಗ್ರಾಮ್ ಪೇಜ್ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ವ್ಯಕ್ತಿಮಂಗಳೂರು ಮೂಲದ ಉಳಾಯಿಬೆಟ್ಟು ನಿವಾಸಿ, ಸೌದಿಅರೆಬಿಯಾದಲ್ಲಿರುವ ಅಬ್ದುಲ್ ಖಾದರ್ ನೇಹಾದ್ ಎಂದು ತಿಳಿದುಬಂದಿತ್ತು.
ಆರೋಪಿಯ ವಿರುದ್ಧ ಎಲ್ ಒಸಿ ಹೊರಡಿಸಲಾಗಿತ್ತು. ಆರೋಪಿ ಡಿಸೆಂಬರ್ 14ರ ಭಾನುವಾರ ಕಾಸರಗೋಡು ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಆಗಮಿಸುತ್ತಿದ್ದಂತೆ ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


