ಮಂಗಳೂರು ; ಸುರತ್ಕಲ್‌ನ NITK ಬೀಚ್‌ನಲ್ಲಿ ಮುಂಬೈನಿಂದ ಮಂಗಳೂರಿಗೆ ಮದುವೆಗೆಂದು ಕುಟುಂಬದಲ್ಲಿ 10 ಮಂದಿ ಬೀಚ್ ಗೆ ತೆರಳಿದ್ದ ಸಂದರ್ಭದಲ್ಲಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ.
ಮೃತರನ್ನು ಧ್ಯಾನ್ ಬಂಜನ್ (18 ವರ್ಷ) ಹಾಗೂ ಹನೀಶ್ ಕುಲಾಲ್ ಎಂದು ತಿಳಿದಿದೆ.
ಮಾಹಿತಿಯ ಪ್ರಕಾರ ಸೂರಿಂಜೆ ನಿವಾಸಿ ಶ್ರೀ ಪ್ರಖ್ಯಾತ್ ಅವರ ಕುಟುಂಬದ ಒಟ್ಟು 10 ಜನರು NITK ಬೀಚ್‌ಗೆ ಭೇಟಿ ನೀಡಲು ಬಂದಿದ್ದರು. ನೀರಿನಲ್ಲಿ ಈಜಾಡುತ್ತಿರುವಾಗ ಧ್ಯಾನ್ ಮತ್ತು ಅಪ್ರಾಪ್ತ ಬಾಲಕ ಅನೀಶ್ ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸ್ಥಳದಲ್ಲಿದ್ದ ಜೀವರಕ್ಷಕರು ಧ್ಯಾನ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು ಮತ್ತು ವೈದ್ಯಕೀಯ ಸಹಾಯಕ್ಕಾಗಿ ತಕ್ಷಣ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಿದ್ದರು ದುರದೃಷ್ಟವಶಾತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ತಿಳಿಸಿದ್ದಾರೆ.
15 ವರ್ಷದ ಅಪ್ರಾಪ್ತ ಬಾಲಕ ಇನ್ನೂ ಸಮುದ್ರದಲ್ಲಿ ನಾಪತ್ತೆಯಾಗಿದ್ದು ಸ್ಥಳೀಯ ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಜೀವರಕ್ಷಕರ ಸಹಾಯದಿಂದ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಮಾಹಿತಿ ದೊರೆತಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.