Saturday, March 14, 2026
Flats for sale
Homeಜಿಲ್ಲೆಮಂಗಳೂರು : ಮೀನುಗಾರಿಕ ಧಕ್ಕೆಯ ಲಾರಿ ಪಾರ್ಕಿಂಗ್ ಬಳಿ ವಿದ್ಯಾರ್ಥಿಗಳ ರೋಮ್ಯಾನ್ಸ್ : ವಿಡಿಯೋ ವೈರಲ್..!

ಮಂಗಳೂರು : ಮೀನುಗಾರಿಕ ಧಕ್ಕೆಯ ಲಾರಿ ಪಾರ್ಕಿಂಗ್ ಬಳಿ ವಿದ್ಯಾರ್ಥಿಗಳ ರೋಮ್ಯಾನ್ಸ್ : ವಿಡಿಯೋ ವೈರಲ್..!

ಮಂಗಳೂರು : ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಲೈಂಗಿಕ ಜ್ಞಾನದ ಕೊರತೆಯಿದ್ದು ರಸ್ತೆಯಲ್ಲಿ ಬಂದು ರೋಮ್ಯಾನ್ಸ್ ಮಾಡುವಂತಹ ಪರಿಸ್ಥಿತಿ ಉಂಟಾಗಿದೆ.ಮಂಗಳೂರಿನ ಮೀನುಗಾರಿಕೆಯ ಧಕ್ಕೆಯ ಲಾರಿ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿಗಳ ರೋಮ್ಯಾನ್ಸ್ ನಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಪ್ರಾಪ್ತ ವಯಸ್ಕರು ಲಾರಿಯ ಬದಿಯಲ್ಲಿ ಚುಂಬಿಸುವ ವಿಡಿಯೋ ಯಾರೋ ಲಾರಿ ಚಾಲಕ ಸೇರಿಹಿಡಿದಿದ್ದಾನೆ. ವಿಡಿಯೋ ದಲ್ಲಿರುವ ವಿದ್ಯಾರ್ಥಿಗಳು ಮಂಗಳೂರಿಗೆ ಸಂಬಂಧ ಪಟ್ಟ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವುದು ತಿಳಿದುಬಂದಿದೆ. ಆದರೆ ಇವರ ಮೂಲಗಳು ತಿಳಿದುಬಂದಿಲ್ಲ. ಕಳೆದ ಕೆಲದಿನಗಳಿಂದ ಈ ವಿಡಿಯೋ ವೈರಲ್ ಆಗುತ್ತಿದ್ದು ವಿದ್ಯಾರ್ಥಿಗಳ ಪೋಷಕರಿಗೆ ಮುಜುಗರವೆನಿಸಿರಬಹುದು. ಕಷ್ಟ ಪಟ್ಟು ಕೂಲಿ ನಾಲಿ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುತ್ತಿರುವ ಪೋಷಕರು ಇಂತಹ ಮಕ್ಕಳಿಂದ ಸಮಾಜದಲ್ಲಿ ತಲೆತಗ್ಗಿಸುವಂತಾಗಿದೆ. ಈಗಿನ ದುನಿಯಾದಲ್ಲಿ ಎಲ್ಲ ಕಡೆಗಳಲ್ಲಿ ಕ್ಯಾಮೆರಾ ಇರುವುದರಿಂದ ಇಂತಹ ವಿಷಯಗಳಲ್ಲಿ ಜಾಗ್ರತೆವಹಿಸುವುದು ಅತ್ಯಗತ್ಯ. ಆದರೆ ಬೆಳಗ್ಗೆ ಮನೆಯಿಂದ ಕಾಲೇಜಿಗೆ ಹೊರಟ ಮಕ್ಕಳು ಇಂತಹ ಕ್ರಿಯೆಗಳಲ್ಲಿ ತೊಡಗಿಕೊಂಡಿರುವುದು ಸಮಾಜ ಒಪ್ಪುವಂಥದಲ್ಲ. ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡಿ ಒಳ್ಳೆಯ ಕೆಲಸಕ್ಕೆ ಸೇರಿ ತಮ್ಮ ಕಾಲಲ್ಲೇ ನಿಂತು ಪೋಷಕರನ್ನು ಸಾಕಿ ಸಲಹುತ್ತಾರೆಂದು ಕನಸು ಕಾಣುತ್ತಿರುವ ಹೆತ್ತವರಿಗೆ ಈ ದೃಶ್ಯ ಕಂಡರೆ ದಿಗಿಲುಬಡಿದಂತಾಗಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular