ಮಂಗಳೂರು : 79 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಸೆಂಟ್ .ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ .ಆಪರೇಟಿವ್ ಸೊಸೈಟಿ ವೆಲೆನ್ಸಿಯಾ ಶಾಖೆ ವತಿಯಿಂದ ಮಂಗಳೂರು ನಗರದ ಕಂಕನಾಡಿ ಬಳಿ ಇರುವ ಬಾಲಿಕಾ ಆಶ್ರಮದ 65 ಹೆಣ್ಣು ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣಾ ಕಾರ್ಯಕ್ರಮ ಆ.15 ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ ಕತಲ್ಸರ್ ರವರು ನೆರೆವೇರಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಶ್ರೀ ದಯಾನಂದ ಜಿ ಕತಲ್ಸರ್, ಸೆಂಟ್ .ಮಿಲಾಗ್ರಿಸ್ ಸೌಹಾರ್ದ ಕೋ .ಆಪರೇಟಿವ್ ಸೊಸೈಟಿ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಸಮಾಜದಲ್ಲಿ ಕೋ .ಆಪರೇಟಿವ್ ಸೊಸೈಟಿ ಸಂಸ್ಥೆಗಳು ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜದ ಏಳಿಗೆಗೆ ಕೈಜೋಡಿಸಿಕೊಂಡಿರುವುದು ಒಂದು ಉತ್ತಮವಾದ ಕೆಲಸವೆಂದರು. ಇದರಂತೆಯೇ ಈ ಸೊಸೈಟಿಯ ಸಿಬ್ಬಂದಿಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸಿದರು.
ಈ ಕಾರ್ಯಕ್ರಮದಲ್ಲಿ ಮತ್ತೋರ್ವ ವಿಶೇಷ ಅತಿಥಿಯಾಗಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಶ್ರೀ ಟೋನಿ ಪಿಂಟೋ ಉಪಸ್ಥಿತರಿದ್ದರು. ಹಾಗೆಯೇ ಇನ್ನೋರ್ವ ಅತಿಥಿಯಾಗಿ ಕಪಿತಾನಿಯೋ ಶಾಲೆಯ ಸಹಾಯಕ ಶಿಕ್ಷಕರಾದ ಶ್ರೀ ಫೆಲಿ ಎಸ್ ಡಿಸೋಜ ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಕುಮಾರಿ ನೇಹಾ ನಿರೂಪಿಸಿದರು,ಈ ಸಂಸ್ಥೆಯ ಕಿರು ಪರಿಚವನ್ನು ಶ್ರೀ ನಾಗಾರ್ಜುನ್ ರವರು ವಿವರಿಸಿದರು ಹಾಗೂ ಸ್ವಾಗತ ಭಾಷಣವನ್ನು ಕುಮಾರಿ ಪ್ರಜ್ಜ್ಞ ನೆರೆವೇರಿಸಿ ಧನ್ಯವಾದವನ್ನು ಶ್ರೀಮತಿ ರೀಮಾ ರವರು ನೆರೆವೇರಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಮಂಗಳೂರು – ಪುತ್ತೂರು ವಿಭಾಗದ ಡೆವೆಲೊಪೇಮೆಂಟ್ ಮ್ಯಾನೇಜರ್ – ನಾಗರಾಜ್ ಮಡಿವಾಳ್, ಉರ್ವ ಬ್ರಾಂಚ್ ಮ್ಯಾನೇಜರ್ ಅಮಿತ್ ಶೆಟ್ಟಿ, ಬಾಲಿಕಾ ಆಶ್ರಮದ ವಾರ್ಡನ್, ಮುಖ್ಯಸ್ಥರು, ಹಾಗೂ ವೆಲೆನ್ಸಿಯಾ ಶಾಖಾ ವ್ಯವಸ್ಥಾಪಕ ನಾಗಾರ್ಜುನ್ ಉಪಸ್ಥಿತರಿದ್ದರು.