ಮಂಗಳೂರು ; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ವರ್ಷವಾರು ಕೊಂಕಣಿ ಸಾಹಿತ್ಯ. ಕಲೆ, ಜಾನಪದ ಈ ಮೂರು ಕ್ಷೇತ್ರದಲ್ಲಿ ಸಾಧನೆಗೈದ ಕೊಂಕಣಿ ಮಹನೀಯರನ್ನು ಗೌರವಿಸಲಾಗುತ್ತಿದ್ದು ಪ್ರಸ್ತುತ ಸಾಲಿನಲ್ಲಿ 2024 ನೇ ಸಾಲಿನ ಗೌರವ ಪ್ರಶಸ್ತಿಗಾಗಿ ಹಾಗೂ ಪುಸ್ತಕ ಪುರಸ್ಕಾರಕ್ಕಾಗಿ ಈ ಕೆಳಗಿನ ಮಹಾನಿಯರನ್ನು ಆಯ್ಕೆ ಮಾಡಲಾಗಿದೆ.
2024ನೇ ಸಾಲಿನ ಗೌರವ ಪ್ರಶಸ್ತಿ:
ಕೊಂಕಣಿ ಸಾಹಿತ್ಯ : ಶ್ರೀ ಎಂ. ಪ್ಯಾಟ್ರಿಕ್ ಮೊರಾಸ್, ಮಂಗಳೂರು
ಕೊಂಕಣಿ ಕಲೆ : ಶ್ರೀ ಜೊಯಲ್ ಪಿರೇರಾ, ಮಂಗಳೂರು
ಕೊಂಕಣಿ ಜಾನಪದ : ಶ್ರೀಮತಿ ಸೊಬೀನಾ ಮೊತೇಶ್ ಕಾಂಬ್ರೆಕರ್, ಹಳಿಯಾಳ.
- 2024ನೇ ಸಾಲಿನ ಪುಸ್ತಕ ಪುರಸ್ಕಾರ :
ಕೊಂಕಣಿ – ಕವನ ಪುಸ್ತಕ: “ಪಾಲ್ವಾ ಪೊಂತ್” – ಶ್ರೀಮತಿ ಫೆನ್ಸಿ ಲೋಬೊ,ದೆರೆಬೈಲ್,
ಕೊಂಕಣಿ ಲೇಖನ ಪುಸ್ತಕ : ಶೆತಾಂ ಭಾಟಾಂ ತೊಟಾಂನಿ – ಶ್ರೀ ವಲೇರಿಯನ್ ಸಿಕ್ಕೇರಾ ಕಾರ್ಕಳ.
ಕರ್ನಾಟಕ ಕೊಂಕಣಿ ಸಾಹಿತ್ಯ ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಮೈಸೂರು ಸಹಯೋಗದೊಂದಿಗೆ 23 ಮಾರ್ಚ್ 2025, ಆದಿತ್ಯವಾರ ಸಂಜೆ 5.00 ಗಂಟೆಗೆ ಕೊಂಕಣ್ ಭವನ್, ವಿಜಯನಗರ್ 2nd ಸ್ಟೇಜ್, ಮೈಸೂರಿನಲ್ಲಿ ಜರುಗಲಿರುವುದು. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ. ಹರೀಶ್ ಗೌಡ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿರುವರು.
ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಜ್ಞಾನಿ ಆಲ್ವಾರಿಸ್‌ರವರ ಅಧ್ಯಕ್ಷತೆಯಲ್ಲಿ, ವಿಧಾನಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯನವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ವಲೇರಿಯನ್ ಡಿಸೋಜ (ವಲ್ಲಿ ವಗ್ಗ),ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಶ್ರೀ ವಿ ಎನ್ ಮಲ್ಲಿಕಾರ್ಜುನ ಸ್ವಾಮಿ- ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿದ್ದಿ ಸಮುದಾಯದ ಸಾಂಸ್ಕೃತಿಕ ನೃತ್ಯ, ಬ್ರಾಸ್ ಬ್ಯಾಂಡ್. ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮವು ನಡೆಯಲಿರುವುದು. ಕೊಂಕಣಿ ಜಿ.ಎಸ್.ಬಿ. ಸಭಾ, ಮೈಸೂರು ಮತ್ತು ಮುರುಡೇಶ್ವರ ನವಾಯತ್ ಅಸೋಸಿಯೇಶನ್ ಮೈಸೂರು ಇವರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದಾರೆ ಎಂದು ಸ್ಟಾನಿ ಅಲ್ವಾರಿಸ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನವೀನ್ ಲೋಬೊ,ರೊನಾಲ್ಡ್ ಕ್ರಾಸ್ತ,ಇಲಿಯಾಸ್ ಫರ್ನಾಂಡೀಸ್ ರವರು ಉಪಸ್ಥಿತರಿದ್ದರು.