ಮಂಗಳೂರು : ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸಂಸ್ಥೆಯು ಕಳೆದ ಹನ್ನೆರಡು ವರ್ಷಗಳಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ಉದ್ದೇಶದಿಂದ “ಟೆಕ್ ಯುವ ರಾಷ್ಟ್ರೀಯ ಮಟ್ಟದ ತಾಂತ್ರಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವವನ್ನು ಆಯೋಜಿಸುತ್ತಿದೆ. ಈ ವರ್ಷ “ಟೆಕ್ ಯುವ 25” ಕಾರ್ಯಕ್ರಮವನ್ನು ಮಂಗಳವಾರ, ಮಾರ್ಚ್ 11 ಮತ್ತು ಬುಧವಾರ, ಮಾರ್ಚ್ 12 ರಂದು ಆಯೋಜಿಸಲಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಮಕೃಷ್ಣ ಎನ್.ಹೆಗಡೆ ಯವರು ತಿಳಿಸಿದರು.
ಟೆಕ್ ಯುವದ ಮೊದಲ ಆವೃತ್ತಿಯನ್ನು 2013 ರಲ್ಲಿ ಆಯೋಜಿಸಲಾಗಿತ್ತು. ಆರಂಭದಿಂದಲೂ, ಪ್ರತಿ ವರ್ಷ, ಕರ್ನಾಟಕ ಗೋವಾ ತಮಿಳುನಾಡು – ಕೇರಳ ರಾಜ್ಯಗಳ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಸುಮಾರು 400 ಕ್ಕೂ ಅಧಿಕ ವಿದ್ಯಾರ್ಥಿಗಳು ಟೆಕ್ ಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಳೆದ ವರ್ಷಗಳಲ್ಲಿ “ಟಿಕ್ ಯುವ” ಕಾರ್ಯಕ್ರಮವು ದೊಡ್ಡ ಪ್ರಮಾಣದಲ್ಲಿ ಯಶಸ್ವಿಗೊಂಡಿದೆ ಎಂದು ತಿಳಿಸಿದರು.
ಈ ವರ್ಷದ “ಟೆಕ್ ಯುವ 25” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಐಸ್ಟಿ ಆಗ್ರ ರೋಬೋಟಿಕ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಮಂಗಳೂರಿನ ಅಗ್ರಿಲೀಫ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಅವಿನಾಶ್ ರಾವ್ ರವರು ಭಾಗವಹಿಸಿ, ಮಂಗಳವಾರ, ಮಾರ್ಚ್ 11 ರಂದು ಟೆಕ್ ಯುವ 25 ತಾಂತ್ರಿಕ ಉತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಗುರುವಾರ, ಮಾರ್ಚ್ 13 ರಂದು, ಕಾಲೇಜಿನ ವಿದ್ಯಾರ್ಥಿಗಳಿಗಾಗಿ “ಕಲಾಸ್ಪಂದನ-25” ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರು, ಆಸರೆ ಚಾರಿಟೇಬಲ್ ಟ್ರಸ್ಸಿನ ಅಧ್ಯಕ್ಷರು, ಆಯುಷ್ ಫೌಂಡೇಶನ್ ಅಧ್ಯಕ್ಷರು, ಮತ್ತು ಮಾಲಾಡಿ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ಡಾ. ಆಶಾ ಜ್ಯೋತಿ ರೈ ಯವರು ಭಾಗವಹಿಸಿ, ಕಲಾಸ್ಪಂದನ-25 ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಾಹಿತಿ, ನಟ, ಗೀತೆ ರಚನೆಕಾರರು, ನಾಟಕಕಾರರು, ಸಿನೆಮಾಗಳಲ್ಲಿ ಸ್ಕ್ರಿಪ್ಟ್ ಬರಹಗಾರರು, ಹಾಗೂ ವೃತ್ತಿಯಲ್ಲಿ ವಕೀಲರಾದ ಶ್ರೀ ಶಶಿರಾಜ್ ರಾವ್ ಕಾವೂರ್ ರವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಸಿಎ ಎ.ರಾಘವೇಂದ್ರ ರಾವ್ ರವರು ಈ ಎರಡೂ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ವಹಿಸಲಿದ್ದು,ಶ್ರೀನಿವಾಸ ವಿಶ್ವವಿದ್ಯಾಲಯದ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರುಗಳಾದ ಶ್ರೀಮತಿ. ಎ. ವಿಜಯಲಕ್ಷ್ಮಿ ಆರ್. ರಾವ್ ಹಾಗೂ ಪ್ರೊ. ಶ್ರೀಮತಿ. ಎ. ಮಿತ್ರ ಎಸ್ ರಾವ್, ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ, ಡಾ. ಆದಿತ್ಯ ಕುಮಾರ್ ಮಯ್ಯ (ರಿಜಿಸ್ಟ್ರಾರ್ ಅಕಾಡೆಮಿಕ್), ಡಾ. ಅನಿಲ್ ಕುಮಾರ್ (ರಿಜಿಸ್ಟ್ರಾರ್), ಡಾ. ಶ್ರೀನಿವಾಸ ಮಯ್ಯ ಡಿ. (ರಿಜಿಸ್ಟ್ರಾರ್ ಮೌಲ್ಯಮಾಪನ), ಡಾ. ಅಜಯ್ ಕುಮಾರ್ (ರಿಜಿಸ್ಟ್ರಾರ್ ಡೆವಲಪ್‌ಮೆಂಟ್), ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಎನ್ ಹೆಗಡೆ, ಟೆಕ್ ಯುವ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್. ಟೆಕ್ ಯುವ-25 ರ ವಿದ್ಯಾರ್ಥಿ ಸಮನ್ವಯಕಾರರಾದ ಮೊಹಮ್ಮದ್ ಸೈಫಾಜ್ ಮತ್ತು ಆಕಾಶ್ ಕುಲಾಲ್, ಕಲಾಸ್ಪಂದನ 25 ರ ಸಂಚಾಲಕರಾದ ಡಾ. ಶ್ವೇತಾ ಪೈ, ವಿದ್ಯಾರ್ಥಿ ಸಮನ್ವಯಕಾರರಾದ ಶ್ರೀ ಕಿರಣ್ ಶೆಟ್ಟಿ ಮತ್ತು ಕುಮಾರಿ ವಿನಯಾ ಭಟ್ ಉಪಸ್ಥಿತರಿರಲಿದ್ದಾರೆ.
ಟೆಕ್ ಯುವ ಕಾರ್ಯಕ್ರಮದ ಈ ವರ್ಷದ ಪರಿಕಲ್ಪನೆ “ಆರ್ಟಿಫಿಷಿಯಲ್ ಇಂಟಲಿಜೆನ್ಸ್”. ಕಲಾಸ್ಪಂದನ ಕಾರ್ಯಕ್ರಮದ ಈ ವರ್ಷದ ಪರಿಕಲ್ಪನೆ “ಮಹಿಳಾ ಸಬಲೀಕರಣ ಮತ್ತು ನಾರಿ ಶಕ್ತಿ”.
ಟೆಕ್ ಯುವ 25 ರಲ್ಲಿ ತಾಂತ್ರಿಕ, ಸಾಂಸ್ಕೃತಿಕ, ಸಾಹಿತ್ಯ ಮತ್ತು ಕ್ರೀಡೆಗಳಿಗೆ ಸಂಬಂಧಿಸಿದ 50 ಕ್ಕೂ ಅಧಿಕ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಟೆಕ್ ಯುವ 25 ತಾಂತ್ರಿಕ ಉತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 1,000 ಇಂಜಿನಿಯರಿಂಗ್, ಡಿಪ್ಲೋಮ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ, ಹಾಗೂ ಸುಮಾರು 3,500 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಕೆ. ಶ್ರೀನಾಥ್ ರಾವ್, ಸಂಯೋಜಕರು, ಟೆಕ್ ಯುವ-25 ಡಾ. ಶ್ವೇತಾ ಪೈ, ಸಂಯೋಜಕರು, ಕಲಾಸ್ಪಂದನ-25,ಮೊಹಮ್ಮದ್ ಸೈಫಾಜ್,ಆಕಾಶ್ ಕುಲಾಲ್, ಕಿರಣ್ ಶೆಟ್ಟಿ, ಮತ್ತು ಕುಮಾರಿ ವಿನಯಾ ಭಟ್, ಜಿನೋಯ್, ಮೊಹಮ್ಮದ್ ಮಿಶಾಲ್ ಮೊಹಮ್ಮದ್ ಕೈಫ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.