ಮಂಗಳೂರು : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಿ ನೋಡಿದರು ಅನಧಿಕೃತ ಬ್ಯಾನರ್ ಗಳದೆ ಕಾರುಬಾರು,ಇದು ನಗರದ ಸೌಂದರ್ಯವನ್ನು ಹದಗೆಡಿಯುವುದಲ್ಲದೆ ಸ್ವಚ್ಛತೆಯ ಮಟ್ಟವನ್ನು ದುರ್ಬಲಗೊಳಿಸುತ್ತದೆ .
ಆದರಿಂದ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಹಾಗೂ ರಸ್ತೆ ವಿಭಾಜಕಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ,ಬ್ಯಾನರ್,ಬಂಟಿಂಗ್ಸ್,ಕಟ್ಔಟ್ ಗಳಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾದ ಕಾರಣ ಸಾರ್ವಜನಿಕರಿಂದ ದೂರು ಬರುತಿದ್ದು ಮಳೆಗಾಲ ಹಾಗು ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಸರ್ವಜನಿಕರಿಗೆ ಹಾಗೂ ವಾಹನಗಳಿಗೆ ಹೆಚ್ಚಾಗಿ ಹಾನಿ ಉಂಟಾದ ಘಟನೆ ನಡೆದ ಕಾರಣ ಜೆಸಿಬಿ ಮೂಲಕ ಪಾಲಿಕೆಯ ಕಂದಾಯ ,ಅರೋಗ್ಯ ,ಇಂಜಿನಿಯರಿಂಗ್ ಶಾಖೆಗೆ ತೆರವು ಗೊಳಿಸಲು ಉನ್ನತ ಅಧಿಕಾರಿಗಳು ಸೂಚಿಸಿದ್ದಾರೆ ಇದರಂತೆ ಇಂದು ಕೂಡ ಹಲವು ಕಡೆ ಇಂತಹ ಅನಧಿಕೃತ ಫ್ಲೆಕ್ಸ್ ಬ್ಯಾನರ್,ಬಂಟಿಂಗ್ಸ್ ತೆರವುಗೊಳಿಸಲಾಯಿತು.
ಪಾಲಿಕೆಯ ಆಯುಕ್ತರ ಆದೇಶ ಹಾಗು ರೇಖಾ ಶೆಟ್ಟಿಯವರ ನಿರ್ದೇಶನದ ಮೇರೆಗೆ ಕಂದಾಯ ಅಧಿಕಾರಿ ಸುಶಾಂತ್ ಕೆ ಅವರು ಹಾಗೂ ಇನ್ನಿತರ ಅಧಿಕಾರಿಗಳ ಉಪಸ್ಥಿಯಲ್ಲಿ ತೆರವು ಕಾರ್ಯ ನಡೆದಿದೆ .