Friday, March 6, 2026
Flats for sale
Homeಜಿಲ್ಲೆಮಂಗಳೂರು : ಮದ್ಯಪಾನ ಸೇವಿಸಿ ಅತಿವೇಗದ ಚಾಲನೆಯಿಂದ ಜಪ್ಪಿನಮೊಗರು ಬಳಿ ಅಪಘಾತ,ಈ ವರ್ಷ ನಗರದಲ್ಲಿ ಅಪಘಾತದಿಂದ...

ಮಂಗಳೂರು : ಮದ್ಯಪಾನ ಸೇವಿಸಿ ಅತಿವೇಗದ ಚಾಲನೆಯಿಂದ ಜಪ್ಪಿನಮೊಗರು ಬಳಿ ಅಪಘಾತ,ಈ ವರ್ಷ ನಗರದಲ್ಲಿ ಅಪಘಾತದಿಂದ 72 ಸಾವು ; ನಗರ ಪೊಲೀಸ್ ಆಯುಕ್ತರು..!

ಮಂಗಳೂರು : ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಪ್ಪಿನಮೊಗರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜೂನ್ 18 ರಂದು ಮುಂಜಾನೆ 01.30 ಗಂಟೆಯ ವೇಳೆಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಅಮನ್ ರಾವ್ (22) ಸಹ ಪ್ರಯಾಣಿಕ ಓಂಶ್ರೀ(24) ರವರು ಮೃತಪಟ್ಟಿದ್ದು , ಸಹ ಪ್ರಯಾಣಿಕರಾದ ಆಶಿಶ್(23), ವಿದೇಶಿ ಪ್ರಜೆ ಜೆರಿ (23) ರವರುಗಳು ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮೊ.ನಂ.152/2025 ಕಲಂ:281, 125(ಎ), 125(ಬಿ), 106(1) BNS ಜೊತೆಗೆ 183, 185 ಐ.ಎಮ್.ವಿ.ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಆದರೆ ಅಪಘಾತಕ್ಕೆ ಸಂಬಂಧಿಸಿದಂತೆ ಕಾರಿನ ಚಾಲಕ ಮಧ್ಯ ಸೇವನೆ ಮಾಡಿ ಅತೀವೇಗದಲ್ಲಿ ವಾಹನ ಚಾಲನೆ ಮಾಡಿರುವುದು ವರದಿಯಲ್ಲಿ ಕಂಡುಬಂದಿದ್ದು. ಈ ಸಂಬಂಧ ಭಾರತೀಯ ಮೋಟಾರು ವಾಹನ ಕಾಯಿದೆ ಅನ್ವಯ ಕಲಂ: 185 ಮತ್ತು 183 ಯನ್ನು ಅಳವಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.ಈ ವರ್ಷ ಅಪಘಾತದಲ್ಲಿ 72 ಮಂದಿ ಸಾವನ್ನಪ್ಪಿದ್ದು ಅದರಲ್ಲಿ ಅತಿವೇಗದ ಚಾಲನೆ ಹಾಗೂ ಮದ್ಯಪಾನ ಸೇವಿಸಿ ವಾಹನ ಚಲಾಯಿಸಿರುವುದು ತಿಳಿದಿದೆ.

ಈ ಬಗ್ಗೆ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ,

  1. ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದಲ್ಲಿ ರಸ್ತೆ ಅಪಘಾತ ಉಂಟಾಗಿ ಚಾಲಕ, ಪ್ರಯಾಣಿಕರು ಸಾವು ನೋವುಗಳನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದರ ಪರಿಣಾಮ ಕುಟುಂಬ ಮತ್ತು ಅವಲಂಭಿತರ ಮೇಲೆ ಪ್ರಭಾವ ಬಿದ್ದು ದುಖಃ ಅನುಭವಿಸುತ್ತಾರೆ.
  2. ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದಲ್ಲಿ ಭಾರತೀಯ ಮೋಟಾರು ವಾಹನ ಕಾಯಿದೆ ಕಲಂ 185 ಅನ್ವಯ ಪ್ರಕರಣ ದಾಖಲಿಸಿ ರೂ 10,000/- ವರೆಗೆ ದಂಡ ಪಾವತಿಸಬೇಕಾಗುತ್ತದೆ.
  3. ಅತೀವೇಗದಿಂದ (Over Speed) ವಾಹನ ಚಲಾಯಿಸಿದಲ್ಲಿ ರಸ್ತೆ ಅಪಘಾತ ಉಂಟಾಗಿ ಚಾಲಕ, ಪ್ರಯಾಣಿಕರು ಮತ್ತು ಕುಟುಂಬಸ್ಥರು ಸಾವು ನೋವುಗಳನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅತೀವೇಗದಿಂದ (Over Speed) ವಾಹನ ಚಲಾಯಿಸಿದಲ್ಲಿ ಭಾರತೀಯ ಮೋಟಾರು ವಾಹನ ಕಾಯಿದೆ ಕಲಂ 183 ಅನ್ವಯ ಪ್ರಕರಣ ದಾಖಲಿಸಿ 2/3/LMV- ವಾಹನಗಳಿಗೆ ರೂ 1,000/-, HMV/HGV/OTHERS- ವಾಹನಗಳಿಗೆ 2,000/- ವರೆಗೆ ದಂಡ ಪಾವತಿಸಬೇಕಾಗುತ್ತದೆ. ಅದುದರಿಂದ ಮಧ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಬಾರದು ಹಾಗೂ ಅತೀವೇಗದಿಂದ (Over Speed) ವಾಹನ ಚಾಲನೆ ಮಾಡದೇ ಎಚ್ಚರದಿಂದ ವಾಹನ ಚಾಲನೆ ಮಾಡುವಂತೆ ಸಾರ್ವಜನಿಕರಿಗೆ ನಗರ ಪೊಲೀಸ್ ಆಯುಕ್ತರು ಕೋರಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular