ಮಂಗಳೂರು : ಮಂಗಳೂರಿನ ಸುರತ್ಕಲ್ ಸದಾಶಿವ ನಗರ ದ ಹಿಂದೂ ಯುವತಿ ಕಳೆದ 2ದಿನ ಗಳ ಹಿಂದೆ ಆತ್ಮಹತ್ಯೆ ಯತ್ನ ಮಾಡಿ ಈಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ ಹೋರಾಟದಲ್ಲಿ ನರಳುತ್ತಿದ್ದಾಳೆ ಈ ಘಟನೆ ಸಂಭವಿಸಲು ಪೊಲೀಸರೇ ನೇರ ಕಾರಣ ಎಂದು ಹಿಂದೂ ಮಹಾ ಸಭಾ ಆರೋಪಿಸುತ್ತದೆ ಯುವತಿ ಆರೋಪಿ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಮೊಬೈಲ್ ಸಂದೇಶ ದ ಸಾಕ್ಷಿ ಸಾಕಾಗುದು ಇಲ್ಲ ಎಂದು ಠಾಣೆಯಲ್ಲಿ ರಾಜಿ ಪಂಚಾಯತಿಗೆ ನಡೆಸಿ ಆತನನ್ನು ಬಿಟ್ಟು ಕಳಿಸಿದ್ದಾರೆ ಆದರೆ ಆತ ತನ್ನ ಕಾಮುಕಥನವನ್ನು ಬಿಡದೆ ನಂತರ ನನ್ನನ್ನು ಪ್ರೀತಿಸದಿದ್ದರೆ 24 ತುಂಡು ಮಾಡುತೇನೆ ಎಂದು ಬೆದರಿಕೆ ಹಾಕಿರುದು ಮಾತ್ರವಲ್ಲದೆ ಆತನ ತಾಯಿ ಕೂಡ ಇಂದು ಯುವತಿಯ ಮೇಲೆ ಒತ್ತಡ ಏರಿ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದ್ದು ಆದ್ದರಿಂದ ಆತ್ಮಹತ್ಯೆಗೆ ಪ್ರಚೋದನೆ, ಒತ್ತಾಯದ ಮತಾಂತರ ಯತ್ನ, ಮಗನ ಲೈಂಗಿಕ ಕಿರುಕುಳಕ್ಕೆ ಬೆಂಬಲ ನೀಡಿದ ಆರೋಪ ದಲ್ಲಿ ತಾಯಿಯನ್ನು ಕೂಡ ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ಇಬ್ಬರಿಗೂ ಕಠಿಣ ಶಿಕ್ಷೆ ಆಗುವಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಮಹಾ ಸಭಾ ರಾಜ್ಯ ಅಧ್ಯಕ್ಷ ಡಾ. ಎಲ್. ಕೆ ಸುವರ್ಣ ಆಗ್ರಹಿಸಿದ್ದಾರೆ.
ಹಿಂದೂ ಯುವತಿ ಆತ್ಮಹತ್ಯೆಗೆ ಕಾರಣಕರ್ತನಾದ ಮತಾಂಧ ಶಾರಿಕ್ ಎಂಬಾತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರಕಾರ ಉತ್ತರ ಪ್ರದೇಶ ಮಾದರಿಯಲ್ಲಿ ಶಿಕ್ಷೆ ನೀಡಲು ಪೊಲೀಸರಿಗೆ ಆದೇಶ ನೀಡಲು ತಯಾರಾಗಬೇಕು ಇಂತಹ ಆರೋಪಿಗಳ ಮನೆ ನೆಲ ಸಮ ಗೊಳಿಸಿ ರಾಜ್ಯ ಸರಕಾರ ಮಹಿಳೆಯರ ಹೆಣ್ಣುಮಕ್ಕಳ ರಕ್ಷಣೆಗೆ ಬದ್ಧ ಎಂಬುದನ್ನು ತೋರಿಸಿಕೊಡಬೇಕು ಇಲ್ಲವಾದಲ್ಲಿ ಮಹಿಳೆಯರಿಗೆ,ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದ ರಾಜ್ಯವಾಗಿ ಮಾರ್ಪಾಡಾಗುವುದರಲ್ಲಿ ಸಂಶಯ ಇಲ್ಲ ಎಂದು ಪರಿಗಣಿಸಿ ಹಿಂದೂ ಸಮಾಜ ರಕ್ಷಣಾ ಆಂದೋಲನವನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹಿಂದೂ ಮಹಾಸಭಾ ಸರಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.