Wednesday, October 22, 2025
Flats for sale
Homeಜಿಲ್ಲೆಮಂಗಳೂರು ; ಮಣಿಪುರ,ಒರಿಸ್ಸಾದಲ್ಲಿ ನಿರಪರಾಧಿಗಳಾದ ಕ್ರೈಸ್ತ ಜನಾಂಗದ ಮೇಲೆ ನಿರಂತರ ದೌರ್ಜನ್ಯ - ಹಲ್ಲೆ ಆ....

ಮಂಗಳೂರು ; ಮಣಿಪುರ,ಒರಿಸ್ಸಾದಲ್ಲಿ ನಿರಪರಾಧಿಗಳಾದ ಕ್ರೈಸ್ತ ಜನಾಂಗದ ಮೇಲೆ ನಿರಂತರ ದೌರ್ಜನ್ಯ – ಹಲ್ಲೆ ಆ. 4 ರಂದು ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ನೇತ್ರತ್ವದಲ್ಲಿ ಪ್ರತಿಭಟನೆ…!

ಮಂಗಳೂರು ; ಭಾರತ ದೇಶಾದ್ಯಂತ ಕ್ರೈಸ್ತ ಧರ್ಮಗುರುಗಳು, ಧರ್ಮ ಭಗಿನಿಯರು ಹಾಗೂ ಕ್ರೈಸ್ತ ಸಮುದಾಯದವರು ಶಾಂತಿ ಪ್ರಿಯರಾಗಿದ್ದು ದೇಶ ಭಕ್ತಿಯನ್ನು ಹೊಂದಿದವರಾಗಿರುತ್ತಾರೆ. ನಾವು ದೇಶಾದ್ಯಂತ ಕೇವಲ 3% ಜನಸಂಖ್ಯೆಯನ್ನು ಹೊಂದಿದ್ದು ಈ ದೇಶಕ್ಕಾಗಿ ವೈದ್ಯಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅತ್ಯಂತ ಉನ್ನತ ಮಟ್ಟದ ಸೇವೆಯನ್ನು ನೀಡುತ್ತಾ ಬಂದಿರುತ್ತೇವೆ ಎಂದರು.

ಕಳೆದ ಕೆಲವು ವರ್ಷಗಳಿಂದೀಚೆಗೆ ಮಣಿಪುರ, ಒರಿಸ್ಸಾ ಮುಂತಾದ ರಾಜ್ಯಗಳಲ್ಲಿ ನಿರಪರಾಧಿಗಳಾದ ಕ್ರೈಸ್ತ ಜನಾಂಗದ ಮೇಲೆ ನಿರಂತರವಾಗಿ ದೌರ್ಜನ್ಯ ಹಾಗೂ ಹಲ್ಲೆ ನಡೆಯುತ್ತಿದ್ದು ಕ್ರೈಸ್ತ ಧರ್ಮದವರು ಭಯಭೀತರಾಗಿದ್ದು ಜೀವನ ನಡೆಸುವುದೇ ಕಷ್ಟಸಾಧ್ಯವಾಗಿರುತ್ತದೆ ಎಂದು ಹೇಳಿದರು.

ದಿನಾಂಕ 25/7/2025ರಂದು ಛತ್ತೀಸ್‌ಗಢದಲ್ಲಿ ಕೇರಳದ ಸಿಸ್ಟರ್ ಆಫ್ ಮೇರಿ ಇಮ್ಯಾಕ್ಯುಲೇಟ್ ಆಫ್ ಅಸ್ಸಿಸಿಯ ಸದಸ್ಯರಾದ ತಲಕ್ಕೇರಿಯ ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಅಂಗಮಾಲಿಯ ಸಿಸ್ಟರ್ ಪ್ರೀತಿ ಮೇರಿ ಎಂಬ ಇಬ್ಬರು ಮಲಯಾಳಿ ಕಥೋಲಿಕ್ ಸನ್ಯಾಸಿನಿಯರನ್ನು ಹಾಗೂ ಛತ್ತೀಸ್‌ಘಡದ ನಾರಾಯಣಪುರ ಜಿಲ್ಲೆಯ 18ರಿಂದ 19 ವರ್ಷದೊಳಗಿನ ಮೂವರು ಮಹಿಳೆಯರನ್ನು ರೈಲು ನಿಲ್ದಾಣದ ಬಳಿ ಹೋಗುತ್ತಿದ್ದಾಗ ಬಂಧಿಸಿ ಅವರ ಮೇಲೆ ಭಾರತೀಯ ನ್ಯಾಯ ಸಂಹಿತೆ ಮತ್ತು ಛತ್ತೀಸ್‌ಗಢ ಧಾರ್ಮಿಕ ಮತಾಂತರದ ಆರೋಪ ಹೊರಿಸಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದರು.

ಮನೆ ಕೆಲಸಕ್ಕಾಗಿ ಮಹಿಳೆಯರನ್ನು ಕರಿದೊಯ್ಯುತ್ತಿದ್ದಾಗ ತಡೆಯೊಡ್ಡಿ ಮತಾಂತರ ಆರೋಪ ಹೊರಿಸಿ ಬಂಧಿಸಿರುವುದು ಖಂಡನೀಯ. ಈ ಕ್ರೈಸ್ತ ಸನ್ಯಾಸಿನಿಯರನ್ನು ಕೂಡಲೇ ಬಂಧನದಿಂದ ಬಿಡುಗಡೆ ಮಾಡಬೇಕು ಹಾಗೂ ಅವರನ್ನು ಬಂಧಿಸಲು ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ ಎಂದು ಹೇಳಿದರು.

ಮಾನವ ಹಕ್ಕುಗಳ ಉಲ್ಲಂಘನೆ ಮಾಡುವಂತಹ ಈ ಭಯಾನಕ ಕೃತ್ಯಗಳನ್ನು ವಿರೋಧಿಸಿ ತಾ:04-08-2025 ಸೋಮವಾರದಂದು ಅಪರಾಹ್ನ 4.00 ಗಂಟೆಗೆ ಮಂಗಳೂರು ಮಿನಿವಿಧಾನಸೌಧದ ಎದುರು ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ) ಇದರ ನೇತೃತ್ವದಲ್ಲಿ ಸಾರ್ವಜನಿಕ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿರುತ್ತೇವೆ. ಈ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಕಥೋಲಿಕ್ ಸಭಾದ ಅಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾ, ಸಾರ್ವಜನಿಕ ಸಂರ್ಚಾಧಿಕಾರಿಯವರಾದ ಶ್ರೀ ಪೌಲ್ ರೋಸ್ ಡಿಕೋಸ್ತಾ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಯವರಾದ ಶ್ರೀ ರೋಯ್ ಕ್ಯಾಸ್ಟೆಲಿನೊ, ಸಿಆರ್‌ಐ ಅಧ್ಯಕ್ಷರಾದ ವಂದನೀಯ ಡೊಮಿನಿಕ್ ವಾಸ್ ಒಸಿಡಿ, ಸಿಸ್ಟರ್ ಸೆನ್ ಮಿನೇಜಸ್, ಎಸ್‌ಎ ಪಿ, ಕಥೊಲಿಕ್ ಸಭಾ ನಿಕಟಪೂರ್ವ ಅಧ್ಯಕ್ಷರಾದ ಶೀ ಓಲ್ವಿನ್ ಡಿಸೋಜಾ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀ ಸ್ಟೇನಿ ಲೋಬೊರವರು ಮಾತನಾಡಲಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಡಿಸೋಜಾ- ಕೇಂದ್ರೀಯ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಟುರ್ ಪ್ರದೇಶ್ (ರಿ) ವಿಲ್ಮಾ ಮೊಂತೇರೊ – ಪ್ರಧಾನ ಕಾರ್ಯದರ್ಶಿ, ಕಥೊಲಿಕ್ ಸಭಾ ಮಂಗ್ಟುರ್ ಪ್ರದೇಶ್ (ರಿ) ಪ್ರಾನ್ಸಿಸ್ ಮೊಂತೇರೊ – ಖಜಾಂಚಿ, ಕಥೋಲಿಕ್ ಸಭಾ ಮಂಗ್ಟುರ್ ಪ್ರದೇಶ್ (ರಿ) ಪೌಲ್ ರೋಲ್ಟಿ ಡಿಕೋಸ್ತಾ-ಸಾರ್ವಜನಿಕ ಸಂಪರ್ಕ ಅಧಿಕಾರಿ, ಕಥೊಲಿಕ್ ಸಭಾ ಮಂಗ್ಟುರ್ ಪ್ರದೇಶ್(ರಿ) ಆಲ್ವಿನ್ ಡಿಸೋಜಾ, ಪಾನೀರ್-ನಿಕಟಪೂರ್ವ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಟುರ್ ಪ್ರದೇಶ್ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular