Monday, January 26, 2026
Flats for sale
Homeಜಿಲ್ಲೆಮಂಗಳೂರು ; ಮಂಗಳೂರಿನ ಲಿಶಾ ಡಿ.ಎಸ್‌ಗೆ ರಕ್ಷಾಮಂತ್ರಿ ಕಂಮಂಡೇಶ್ ರಾಷ್ಟ್ರೀಯ ಗೌರವ.

ಮಂಗಳೂರು ; ಮಂಗಳೂರಿನ ಲಿಶಾ ಡಿ.ಎಸ್‌ಗೆ ರಕ್ಷಾಮಂತ್ರಿ ಕಂಮಂಡೇಶ್ ರಾಷ್ಟ್ರೀಯ ಗೌರವ.

ಮಂಗಳೂರು : ಭಾರತೀಯ ನೇವಿ ಅಧೀನದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಕೆಡೆಟ್ ಮಂಗಳೂರಿನ ಲಿಶಾ ಡಿ.ಎಸ್ ಅವರಿಗೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನೀಡುವ ಪರಮೋಚ್ಚ ಪ್ರಶಸ್ತಿ ರಕ್ಷಾಮಂತ್ರಿ ಕಂಮಂಡೇಶ್ ಗೌರವ ಲಭಿಸಿದೆ.
ಜ.24ರಂದು ಹೊಸದೆಲ್ಲಿಯ ಡಿಸಿಎಂಸಿಸಿ ಕ್ಯಾಂಪಸ್‌ನಲ್ಲಿ ನಡೆದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷನಾ ಸಚಿವ ರಾಜನಾಥ್ ಸಿಂಗ್ ಅವರು ಈ ಗೌರವ ಪ್ರಧಾನ ಮಾಡಿದರು.

ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನಲ್ಲಿ ಹಲವು ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ ಸಾಧನೆಗಳನ್ನು ಗುರುತಿಸಿ ಭಾರತೀಯ ನೇವಿ ಮೂಲಕ ಈ ಗೌರವವನ್ನು ನೀಡಲಾಗಿದೆ. ಈ ವರೆಗೆ ರಕ್ಷಾಮಂತ್ರಿ ಕಂಮಂಡೇಶ್ ಗೌರವವು ಉತ್ತರ ಭಾರತದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಕೆಡೆಟ್‌ಗಳೇ ಆಯ್ಕೆಯಾಗುತ್ತಿದ್ದು, ಇದೇ ಮೊದಲಬಾರಿಗೆ ದಕ್ಷಿಣಭಾರತದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಕೆಡೆಟ್‌ಗೆ ಈ ಗೌರವ ಲಭಿಸಿರುವುದು ವಿಶೇಷ. ಮಂಗಳೂರು ಕೂಳೂರು ನಿವಾಸಿ ದೇಜಪ್ಪ ಬಂಗೇರ ಹಾಗೂ ಮಲ್ಲಿಕಾ ದಂಪತಿಗಳ ಪುತ್ರಿಯಾಗಿರುವ ಇವರು ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ.

ರಕ್ಷಾಮಂತ್ರಿ ಮಂಗಳೂರಿನ ಲಿಶಾ ಡಿ.ಎಸ್ ಅವರಿಗೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನೀಡುವ ಪರಮೋಚ್ಚ ಪ್ರಶಸ್ತಿ ರಕ್ಷಾಮಂತ್ರಿ ಕಂಮಂಡೇಶ್ ಗೌರವವನ್ನು ಹೊಸದೆಲ್ಲಿಯ ಡಿಸಿಎಂಸಿಸಿ ಕ್ಯಾಂಪಸ್‌ನಲ್ಲಿ ನಡೆದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷನಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನ ಮಾಡಿದರು.Contact number -+91 94817 69650

RELATED ARTICLES

LEAVE A REPLY

Please enter your comment!
Please enter your name here

Most Popular