ಮಂಗಳೂರು : ಮಂಗಳೂರು ನಗರದಲ್ಲಿ ಚಿರತೆ ಕಾಟ ಶುರುವಾಗಿದೆ,ರಾತ್ರೆ ಹೊತ್ತು ನಗರದ ಕೆಲ ಭಾಗಗಳಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇದೀಗ ಮಂಗಳೂರು ನಗರಕ್ಕೇ ಚಿರತೆ ಎಂಟ್ರಿ ಕೊಟ್ಟಿದೆ. ಮಂಗಳೂರಿನ ಕದ್ರಿ ಡಾಕ್ಟರ್ಸ್ ಕಾಲೊನಿಯಲ್ಲಿ ಸುಮಾರು ೨ ಗಂಟೆಯ ಮಧ್ಯರಾತ್ರಿ ಚಿರತೆ ಒಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಎರಡು ವರ್ಷದ ಹಿಂದೆ ಇದೇ ಜಾಗದಲ್ಲಿ ಕಾಡುಕೋಣ ಪತ್ತೆಯಾಗಿತ್ತು.ಕದ್ರಿ ದೇವಸ್ಥಾನದ ಮೇಲ್ಬಾಗದಲ್ಲಿ ಸ್ವಲ್ಪ ಕಾಡು ಪ್ರದೇಶದಂತೆ ಕಂಡುಬಂದರೆ ಉಳಿದೆಡೆ ಬಹುತೇಕ ಐಷಾರಾಮಿ ವಸತಿ ಸಮುಚ್ಛಯಗಳೇ ಕಂಡುಬರುತ್ತಿದೆ. ಆದರೆ ಸ್ಥಳೀಯರು ಪ್ರತ್ಯಕ್ಷವಾಗಿ ನೋಡದ ಹಿನ್ನೆಲೆ ದೂರು ದಾಖಲಾಯಿಸಿಲ್ಲವೆಂದು ತಿಳಿದಿದೆ.ವಸತಿ ಪ್ರದೇಶ ದಲ್ಲಿ ನಾಯಿಗಳು ಹೆಚ್ಚಾಗಿರುವುದರಿಂದ ಚಿರತೆ ಆಹಾರ ಅರಸಿಕೊಂಡು ಬಂದಿರಬಹುದೆಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.


