Wednesday, October 22, 2025
Flats for sale
Homeಜಿಲ್ಲೆಮಂಗಳೂರು : ಮಂಗಳೂರಿನಲ್ಲಿ ಸ್ವಚ್ಚ ಸಾಗರ ಸುರಕ್ಷಿತ ಸಾಗರ ಅಭಿಯಾನ ಯಶಸ್ವಿ .

ಮಂಗಳೂರು : ಮಂಗಳೂರಿನಲ್ಲಿ ಸ್ವಚ್ಚ ಸಾಗರ ಸುರಕ್ಷಿತ ಸಾಗರ ಅಭಿಯಾನ ಯಶಸ್ವಿ .

ಮಂಗಳೂರು : ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಇಂಡಿಯನ್ ಸ್ವಚ್ಚತಾ ಲೀಗ್ ವತಿಯಿಂದ ಅಭಿಯಾನ ಹಮ್ಮಿಕೊಳ್ಳಲು ಸೂಚಿಸಿದ್ದು ಅದರಂತೆ ಇಂದು ಬೆಳಗ್ಗೆ ಮಂಗಳೂರಿನ ಕಡಲ ತೀರದಲ್ಲಿ ಸ್ವಚ್ಚತಾ ಕಾರ್ಯ ಕ್ರಮ ನಡೆಯಿತು .ಈ ಕಾರ್ಯಕ್ರಮವು ಮಂಗಳೂರು ಮಹಾನಗರ ಪಾಲಿಕೆ ವ್ಯಪ್ತಿಯಲ್ಲಿ ಆಯ್ಕೆಯಾಗಿದ್ದು ಈ ಕಾರ್ಯಕ್ರಮದಲ್ಲಿ ಯುವಜನರು,ಮಹಿಳಾಸಂಘದ ಸದಸ್ಯರು ಶಾಲಾಕಾಲೇಜು ವಿಧ್ಯಾರ್ಥಿಗಳು ಮೀನುಗಾರರು,ಮತ್ತು ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕೋಸ್ಟ್ ಗಾರ್ಡ್ ಪೋಸ್ಟ್ ಗಾರ್ಡ್,ಸ್ಥಳೀಯ ಮೊಗವೀರ ಸಂಘಟನೆಗಳು,ಸಂಘ ಸಂಸ್ಥೆಯ ಕಾರ್ಯಕರ್ತರುಗಳು ಮಂಗಳೂರಿನ ಕಮಿಷನರ್ ಮೇಯರ್, ಉಪಮೇಯರ್ ಸ್ವತಃ ಉಪಸ್ಥಿತರಿದ್ದು ಸಿಬ್ಬಂದಿಗಳೊಂದಿಗೆ ಸಹಕರಿಸಿದ್ದಾರೆ.ನೂರಕ್ಕೂ ಹೆಚ್ಚು ಸಂಘ ಸಂಸ್ಥೆಗಳ 2000ಕ್ಕೂಮಿಕ್ಕಿ ಕಾರ್ಯಕರ್ತರು ಹಬ್ಬದ ಒತ್ತಡ ಸುರಿಯುವ ಮಳೆಯ ಮಧ್ಯದಲ್ಲೂ ತಮ್ಮಬ್ಯಾನರ್ಗಳೊಂದಿಗೆ ಭಾಗವಹಿಸಿ ಅಭಿಯಾನವನ್ನು ಕಾಳಜಿಯಿಂದ ನಡೆಸಿದ್ದಾರೆ.

ಮುಂದಿನ ದಿನಗಳಲ್ಲಿ ಸಸಿಗಳನ್ನು ನಮ್ಮ ಸುತ್ತಮುತ್ತ ನೆಟ್ಟು ಜಾಗತಿಕ ತಾಪಮಾನನ್ನು ತಡೆಯುವ ಪ್ರಯತ್ನ ಮಾಡಬೇಕು.ಮನೆಗೊಂದು ನರ್ಸರಿಯಾಗುವಂತೆ ಪ್ರತಿ ಮನೆಯಲ್ಲೂ ಕನಿಷ್ಠ 10 ಬೀಜಗಳನ್ನು ಸಂಗ್ರಹಿಸಿ ಬೀ ಜಾರೋಪಣಮಾಡಿಪ್ಲಾಸ್ಟಿಕ್ ಬಳಸುವ ಬದಲು ಕೈಚೀಲದಲ್ಲಿ ವಸ್ತುಗಳನ್ನು ತರುವುದು ಸೇರಿದಂತೆ, ಪ್ಲಾಸ್ಟಿಕ್ ಬಳಕೆಯನ್ನು ಗಣನೀಯವಾಗಿ ನಿಯಂತ್ರಣಕ್ಕ್ ತರಬೇಕು ಎಂದು ಕರೆ ನೀಡಿದರು. ದೇಶದ 7,500 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಬಾರಿಯೂ ಸ್ವಯಂ ಪ್ರೇರಣೆಯಿಂದ ಸಮುದ್ರ ತೀರ ಸ್ವಚ್ಛತಾ ಅಭಿಯಾನ ನಡೆದಿರುವುದು ಬಹಳ ಆಶಾದಾಯಕ ವಾತಾವರಣ ಪರಿಸರದ ದೃಷ್ಟಿಯಿಂದ ಇದು ಅಭಿನಂದನೆಯ ಕಾರ್ಯ ಎಂದು ಎಲ್ಲರನ್ನೂ ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರು ,ಇನ್ನಿತರ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿ ಸುಶಾಂತ್ ಕಂದಕ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular