ಮಂಗಳೂರು : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೆಲವೊಂದು ಕಡೆಗಳಲ್ಲಿರುವ ಗಂಭೀರ ಸಮಸ್ಯೆ ಜನ ಪ್ರತಿನಿಧಿಗಳು ಬರವಸೆ ನೀಡಿದ್ರೂ ಸರಿ ಆಗುವುದಿಲ್ಲ. ಯಾಕಂದ್ರೆ ಇಲ್ಲಿ ಜನಪ್ರತಿನಿಧಿಗಳಿಗಿಂತಲೂ ಅನೇಕ ವರ್ಷದಿಂದ ಮಂಗಳೂರಿನಲ್ಲಿ ಝಂಡಾ ಹೂಡಿರುವ ಅಧಿಕಾರಿಗಳದ್ದೇ ಕಾರುಬಾರು ಜೋರಾಗಿದೆ. ಇಲ್ಲಿ ಗುತ್ತಿಗೆದಾರರ ಜೊತೆ ಸೆಟ್ಟಿಂಗ್ ಮಾಡಿಕೊಂಡಿರುವ ಕೆಲ ಇಂಜೀನಿಯರ್ ಗಳು ತಮಗೆ ಲಾಭವಾಗುವ ಕೆಲಸ ಮಾತ್ರ ಮಾಡುತ್ತಿದ್ದಾರೆ. 1994 ರಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಜ್ಯೂನಿಯರ್ ಇಂಜೀನಿಯರ್ ಆಗಿ ಬಂದಿರುವ ನರೇಶ್ ಶೆಣೈ ಇಂದು ಸುಪೆರಿಡೆಂಟ್ ಇಂಜಿನಿಯರ್ ಆಗಿದ್ದು ಇಇ ಪೋಸ್ಟ್‌ಗೆ ಪ್ರಮೋಷನ್ ಆಗಿದೆ ಇಲ್ಲಿಂದ ಎತ್ತಂಗಡಿಯಾಗಿಲ್ಲ. ಆದರೆ ಎರಡು ಹುದ್ಯೆಗಳನ್ನು ನಿಭಾಹಿಸುವ ಈತ ಮಂಗಳೂರಿನ ಅಭಿವೃದ್ಧಿಯಲ್ಲಿ ಮಾತ್ರ ಕಣ್ಣು ಮುಚ್ಚಿ ಕುಳಿತಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಪೀಕರ್ ಯು.ಟಿ ಖಾದರ್ ರವರ ತಾಳಕ್ಕೆ ತಕ್ಕಂತೆ ಕುಣಿಯುವ ಈತ ಭ್ರಷ್ಟಾಚಾರದ ಪಿತಾಮಹನೆಂದು ಹೇಳಬಹುದು.ಯಾವುದೇ ಪಕ್ಷ ಆಡಳಿತಕ್ಕೆ ಬಂದ್ರೂ ಬಕೇಟ್ ಹಿಡಿದು ಇಲ್ಲೇ ಉಳಿದಿಕೊಂಡಿರುವ ಈತನಿಗೆ ಸಂಬಳಕ್ಕಿಂತ ಜಾಸ್ತಿ ಗುತ್ತಿಗೆದಾರರು ನೀಡುವ ಬಕ್ಷೀಸಿನಿಂದಲೇ ಬರುತ್ತಿದೆ ಅನ್ನೋದು ಗುಟ್ಟಾಗಿ ಉಳಿದಿಲ್ಲ. ಇದೀಗ ನಗರ ಪಾಲಿಕೆಯ ಮುಖ್ಯ ಇಂಜೀನಿಯರ್ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದು ಈತನನ್ನು ಹಿಡಿಯುವವರೇ ಇಲ್ಲದಂತಾಗಿದೆ.
ಇನ್ನು ಕಳೆದ ಏಳು ವರ್ಷಗಳ ಹಿಂದೆ ಇಲ್ಲಿಗೆ ವಕ್ಕರಿಸಿದ ಚಿನ್ಮಯಿ ಎಂಬ ಜ್ಯೂನಿಯರ್ ಇಂಜೀನಿಯರ್ ಊರ ಉಸಾಬಾರಿ ಬಿಟ್ಟು ತಾನಾಯ್ತು ತನ್ನ ಪಾಡಾಯ್ತು ಅಂತ ಇದ್ದಾರೆ. ಇದರ ನಡುವೆ ಪಾಲಿಕೆಯ ಎಲ್ಲಾ ಗುತ್ತಿಗೆಗಳನ್ನೂ ತನಗೇ ಮಾಡಿಸಿಕೊಳ್ಳುತ್ತಿರುವ ಗುತ್ತಿಗೆದಾರ ರವಿರಾಜ್ ಇವರೆಲ್ಲರನ್ನೂ ಕಿಸೆ ತುಂಬಿಸಿ ಸುಮ್ಮನಾಗಿಸುತ್ತಿದ್ದಾನೆ. ಎಲ್ಲಿ ಲಾಭದ ಗುತ್ತಿಗೆ ಇದೆಯೋ ಅದನ್ನು ತನಗೆ ಮಾಡಿಸಿಕೊಂಡು ಅದರಲ್ಲೊಂದಷ್ಟು ಪಾಲು ಅಧಿಕಾರಿಗಳಿಗೂ ಕೊಟ್ಟು ಇಂದು ಕೊಟ್ಯಾಂತರ ರೂಪಾಯಿ ಆಸ್ತಿ ಮಾಡಿಕೊಂಡಿದ್ದಾನೆ.
ನಗರದ ಹಂಪನಕಟ್ಟೆ ಕ್ಲಾಕ್ ಟಾರ್ ಸಮೀಪದ ಡಿವೈಡರ್ಗಳಿಗೆ ಸೂಕ್ತ ರೀತಿಯ ತಡೆ ಬೇಲಿಯನ್ನು ಅಳವಡಿಸಲು ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ರು ಆದರೆ ಉಸ್ತುವಾರಿ ಸಚಿವರು ಹಾಗೂ ಸ್ಪೀಕರ್ ಯು.ಟಿ ಖಾದರ್ ರವರು ಯಾಕೆ ವಿರೋಧ ಮಾಡುತಿದ್ದರೆಂಬುದು ಪ್ರಶ್ನೆ,ಈ ವಿಚಾರವನ್ನು ನರೇಶ್ ಶೆಣೈ ಯವರೇ ಬಹಿರಂಗಪಡಿಸಿದ್ದಾರೆ .ಆದರೆ ಅಧಿಕಾರಿಗಳು ಕ್ಯಾರೆ ಮಾಡುತ್ತಿಲ್ಲವೆಂಬ ಎಂಬ ಮಾಹಿತಿ ದೊರೆತಿದೆ .12 ವರ್ಷಗಳ ಹಿಂದೆ ಸಣ್ಣದೊಂದು ಕಂಪ್ಯೂಟರ್ ರಿಪೇರಿ ಕೆಲಸಕ್ಕೆ ಪಾಲಿಕೆಗೆ ಸೇರಿಕೊಂಡಿದ್ದ ರವಿರಾಜ್ ಅಂದಿನ ಇಂಜೀನಿಯರ್ ಲಿಂಗೇಗೌಡರ ಕೃಪೆಯಿಂದ ಪಾಲಿಕೆಯಲ್ಲಿ ಗುತ್ತಿಗೆದಾರನಾಗಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾನೆ. ಆದ್ರೆ ಲಿಂಗೇಗೌಡರ ಕೃಪೆಯಿಂದ ಗುತ್ತಿಗೆದಾರನಾದ ರವಿರಾಜ್ ಇಂದು ಕೊಟ್ಯಾಂತರ ರೂಪಾಯಿ ಸಂಪದಾನೆ ಮಾಡಿದ್ದಾನೆ. ಇದೊಂದು ಸಾಕು ಆತನ ಕಾಮಗಾರಿ ಅದ್ಯವಾ ರೀತಿ ಇರಬಹುದು ಅಂತ ಬೇರೆ ಹೇಳಬೇಕಾಗಿಲ್ಲ. ಈತ ಭ್ರಷ್ಟ ಅಧಿಕಾರಿಗಳ ಕಿಸೆ ಬಿಸಿ ಮಾಡುತ್ತಿರುವ ಕಾರಣ ಊರಲ್ಲಿ ಯಾರು ಸತ್ತರೆ ನಮಗೇನು ಎಂಬಂತೆ ಅಧಿಕಾರಿಗಳು ಬಿಲ್ ಪಾಸ್ ಮಾಡಿ ಆತನನ್ನು ಸಾಕುತ್ತಿದ್ದಾರೆ. ಇದೇ ಕಾರಣದಿಂದ ನಗರದಲ್ಲಿ ಅನೇಕ ಕಡೆಗಳಲ್ಲಿ ಅಪಾಯಕಾರಿ ರಸ್ತೆಗಳಲ್ಲಿ ಸುರಕ್ಷತೆಯ ಕ್ರಮ ಕೈಗೊಳ್ಳಿ ಅಂತ ಕಾರ್ಪೋರೇಟರ್, ಮೇಯರ್, ಶಾಸಕರು ಯಾರೇ ಹೇಳಿದ್ರೂ ಅಧಿಕಾರಿಗಳು ಮಾತ್ರ ಆ ಕೆಲಸ ಮಾಡಲು ಮುಂದಾಗುತ್ತಿಲ್ಲ. ಯಾಕಂದ್ರೆ ಅದು ಜುಜುಬಿ ಲಕ್ಷದ ಕಾಮಗಾರಿಯಾಗಿದ್ದು ಅಧಿಕಾರಿಗಳಿಗೂ ಏನೂ ಗಿಟ್ಟಿಸೋದಿಲ್ಲ ಮಾತ್ರವಲ್ಲ ಗುತ್ತಿಗೆದಾರನಿಗೂ ದೊಡ್ಡ ಲಾಭ ಇಲ್ಲ. ನಗರದಲ್ಲಿ ಇದೇ ಕಾರಣದಿಂದ ಅದೆಷ್ಟೋ ಅಪಾಯಕಾರಿ ಸ್ಥಳಗಲ್ಲಿ ಕಾಮಗಾರಿಗಳು ನಡೆಯದೆ ಜನರು ಪ್ರತಿಕ್ಷಣ ಅಪಾಯದ ಆತಂಕದಲ್ಲೇ ಇರುವಂತಾಗಿದೆ.
ಉದಾಹರಣೆಗೆ ಹೇಳಬೇಕು ಅಂದ್ರೆ ಮಂಗಳೂರು ಕ್ಲಾಕ್ ಟವರ್ ನಿಂದ ಯುನಿವರ್ಸಿಟಿ ಕಾಲೇಜು ವರೆಗಿನ ರಸ್ತೆಯಲ್ಲಿ ಅಪಾಯಕಾರಿ ರಸ್ತೆಗೆ ಡಿವೈಡರ್ ಅಳವಡಿಸಲು ಸಾಧ್ಯವಾಗಿಲ್ಲ. ಜನನಿಬಿಡವಾದ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು , ಆಸ್ಪತ್ರೆಗೆ ಬರುವ ರೋಗಿಗಳು ಆತಂಕ ಎದರುಸಿಕೊಂಡೇ ರಸ್ತೆ ದಾಟುತ್ತಿದ್ದಾರೆ. ಇಲ್ಲಿರುವ ರಸ್ತೆ ವಿಭಾಜಕದ ಇಕ್ಕೆಲೆಗಳಲ್ಲಿ ಬ್ಯಾರಿಕೇಡ್ ರೀತಿಯಲ್ಲಿ ತಡೆಬೇಲಿ ಮಾಡುವಂತೆ ಜನಪ್ರತಿನಿಧಿಗಳು ಸೂಚನೆ ನೀಡಿದ್ರೂ ಇದರ ಬಗ್ಗೆ ಪಾಲಿಕೆಯ ಈ ಇಂಜೀನಿಯರ್ ಗಳು ತಲೆ ಕೆಡಿಸಿಕೊಂಡಿಲ್ಲ. ಗುತ್ತಿಗೆದಾರ ರವಿರಾಜ್ ಗೆ ಸ್ವತಹ ಪಾಲಿಕೆಯ ಮೇಯರ್ ಈ ಬಗ್ಗೆ ಸೂಚನೆ ನೀಡಿದ್ದು, ಒಪ್ಪಿಕೊಂಡಿದ್ದನಾದ್ರೂ ಆತ ಕ್ಯಾರೆ ಅಂದಿಲ್ಲ. ಇನ್ನು ಇಇ ನರೇಶ್ ಶೆಣೈ ಕೂಡಾ ಜನಪ್ರತಿನಿಧಿಗಳ ಮುಂದೆ ಗುತ್ತಿಗೆದಾರ ರವಿರಾಜ್ ಗೆ ಕಾಮಗಾರಿ ನಡೆಸಲು ಹೇಳಿದ್ರೂ ಅದೂ ಕಾಟಾಚಾರಕ್ಕೆಂಬಂತ್ತಾಗಿದೆ. ಹಣದ ಲಾಲಸೆಯಲ್ಲಿ ಇನ್ನೊಬ್ಬರ ಜೀವದ ಬಗ್ಗೆ ತಲೆಕೆಡಿಸಿಕೊಳ್ಳದ ಇಂತಹವರ ವಿರುದ್ಧ ಜನರೇ ತಿರುಗಿ ಬೀಳಬೇಕಾಗಿದೆ.ಒಟ್ಟಿನಲ್ಲಿ ಕೋತಿ ತಾನು ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತೆ ಈ ಮಂಗಳೂರು ಮಹಾನಗರ ಪಾಲಿಕೆಯ ಪರಿಸ್ಥಿತಿಯಾಗಿದೆ.