Wednesday, September 17, 2025
Flats for sale
Homeಗ್ಯಾಜೆಟ್ / ಟೆಕ್ಮಂಗಳೂರು : ಕುಡ್ಲ ರಾಂ ಪೇಜ್ ಯೂಟೂಬರ್ ನಿಂದ ಹಲ್ಲೆ ಎಂದು ವ್ಯಕ್ತಿಯಿಂದ ದೂರು...

ಮಂಗಳೂರು : ಕುಡ್ಲ ರಾಂ ಪೇಜ್ ಯೂಟೂಬರ್ ನಿಂದ ಹಲ್ಲೆ ಎಂದು ವ್ಯಕ್ತಿಯಿಂದ ದೂರು ,ಪ್ರಕರಣ ದಾಖಲು…!

ಮಂಗಳೂರು ; ಇತ್ತೀಚೆಗೆ ಬ್ಲಾಕ್ ಮೇಲ್ ಯೂಟ್ಯೂಬ್‌ ರ್ ಗಳ ಹಾವಳಿ ಹೆಚ್ಚಾಗಿದ್ದು ಅನಧಿಕೃತವಾಗಿ ವಿಡಿಯೋ ತೆಗೆದು ಮಾನ ಹರಾಜು ಮಾಡುವ ಪ್ರಕರಣಗಳು ಅತಿಯಾಗಿದೆ.

ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಕೇವಲ ಸಬ್ ಸ್ಕ್ರೈಬರ್ ಗಳಿಗೆ ತಪ್ಪು ಮಾಹಿತಿ ನೀಡುತ್ತಾ ಕೆಲವು ಸಂಸ್ಥೆಯ ವಿರುದ್ಧ ಮಾನ ಹರಾಜು ಮಾಡುವ ಪ್ರಕರಣಗಳು ಹೆಚ್ಚಾಗಿದ್ದು ಜೊತೆಯಲ್ಲಿ ವಿದೇಶಿ ಬಂಡವಾಳದ ಮೊರೆಹೋಗಿ ಕೋಟಿಗಟ್ಟಲೆ ಹಣ ಲೂಟಿಹೊಡೆದಿದ್ದಾರೆಂದು ಹಲವರು ಅಕ್ರೋಶ ಹೊರಹಾಕಿದ್ದಾರೆ.

ಈ ಹಿನ್ನೆಲೆ ಬೆಳ್ತಂಗಡಿ, ಉಜಿರೆ ನಿವಾಸಿ ಹರೀಶ್‌ ನಾಯ್ಕ (46)ರವರು ಆಗಸ್ಟ್ 06 ರಂದು ಮಧ್ಯಾಹ್ನ, ಬೆಳ್ತಂಗಡಿ, ಧರ್ಮಸ್ಥಳ ಗ್ರಾಮದ ಪಾಂಗಾಳ ರಸ್ತೆ ಬಳಿ ಮೋಟಾರ್‌ ಸೈಕಲ್‌ ನಲ್ಲಿ ಹೋಗುತ್ತಿದ್ದಾಗ, ಅಲ್ಲಿ ವಿಡಿಯೋ ಕ್ಯಾಮರಾ ಹಿಡಿದುಕೊಂಡು ನಿಂತಿದ್ದ ಮೂವರು ವ್ಯಕ್ತಿಗಳು ದೂರುದಾರರನ್ನು ನಿಲ್ಲಿಸುವಂತೆ ಸೂಚಿಸಿದ್ದು ಆ ವೇಳೆ ಮೋಟಾರ್‌ ಸೈಕಲ್‌ ನಿಲ್ಲಿಸಿ ವಿಚಾರಿಸದಾಗ, ತನ್ನನ್ನು ರಾಂ ಪೇಜ್‌ ಯೂಟ್ಯೂಬರ್‌ ಎಂದು ಪರಿಚಯಿಸಿಕೊಂಡಿದ್ದು, ಧರ್ಮಸ್ಥಳ ಪರಿಸರದಲ್ಲಿ ಹೆಣಗಳನ್ನು ಹೂತಿರುವ ಬಗ್ಗೆ ವಿಚಾರಿಸಿ, ಬಳಿಕ ತಕರಾರು ತೆಗೆದು, ಕುಡ್ಲಾ ರಾಂ ಪೇಜ್‌ ಎಂಬ ಯೂ ಟ್ಯೂಬರ್‌ ಹಾಗೂ ಆತನೊಂದಿಗೆ ಇದ್ದ ಇನ್ನಿಬ್ಬರು ಏಕಾಏಕಿ ದೂರುದಾರರರಿಗೆ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಹಿನ್ನೆಲೆ ಅ.ಕ್ರ:50/2025 ಕಲಂ: 126(2),115(2), 352 ಜೊತೆಗೆ 3(5) ಬಿಎನ್‌ ಎಸ್‌ ರಂತೆ ಪ್ರಕರಣ ದಾಖಲಾಗಿದ್ದು ಪ್ರಕರಣ ತನಿಖೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular