ಮಂಗಳೂರು : ಬೀರುವೆರ್ ಕುಡ್ಲ-ಕಾರುಣ್ಯಸೇತು ಫೌಂಡೇಷನ್ ಇದರ ವತಿಯಿಂದ ಮಂಗಳೂರಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ,79ನೇ ಸ್ವಾತಂತೋತ್ಸವದ ಪ್ರಯುಕ್ತ ಧ್ವಜಾರೋಹಣವನ್ನು ನೌಕಾಸೇನೆಯ ಅಧಿಕಾರಿ ನಿಕೇಶ್ ಮರೋಳಿ ನೆರವೇರಿಸಿದರು.



ಈ ಸಂದರ್ಭ ಶುಭ ಸಂದೇಶ ನೀಡಿದ ಅವರು ದೇಶವು 79ನೆಯ ಸ್ವಾತಂತ್ರೋತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ದೇಶದಲ್ಲಿ ಇಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ದೇಶದ ಸ್ವಾತಂತ್ಯಕ್ಕಾಗಿ ಬಲಿದಾನಗೈದವರನ್ನು ಸ್ಮರಿಸವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಬಿರುವೆರ್ ಕುಡ್ಲವು ಸಮಾಜಮುಖಿ ಸೇವೆಯ ಕುರಿತಾಗಿ ದಿನೇಶ್ ರಾಯಿ ಮಾತನಾಡಿ, ಬಿರುವೆರ್ ಕುಡ್ಲ ಸೇವೆಗೆ ಒಂದು ಮಾದರಿಯಾದ ಸಂಘಟನೆಯಾಗಿದ್ದು ಸ್ಥಾಪನೆಯಾದಗಿನಿಂದ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ ಜಾತೆಗೆ ಇದೀಗ ಕಾರುಣ್ಯ ಸೇತು ಫೌಂಡೇಷನ್ ಜತೆಯಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯಹಸ್ತ ಚಾಚುವ ಕೆಲಸ ಮಾಡುತ್ತಾ ಬರುತ್ತಿದೆ ಎಂದರು.ಧ್ವಜಾರೋಹಣಕ್ಕೂ ಮುನ್ನ ಬ್ರಹ್ಮಶ್ರೀ ನಾರಾಯಣಗುರು ಪ್ರತಿಮೆಗೆ ಗಣ್ಯರು, ಬಿರುವೆರ್‌ಕುಡ್ಲ ಪ್ರಮುಖರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ರೇಷ್ಮೆ ಇಲಾಖೆಯ ಅಧಿಕಾರಿ ಬಿ.ಕೆ ನಾಯಕ್, ಸೀಮಾ ನಿಕೇಶ್, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಲ್ಲಾಳ್ ಭಾಗ್, ಕಾರುಣ್ಯಸೇತು ಫೌಂಡೇಷನ್ ಸ್ಥಾಪಕಾಧ್ಯಕ್ಷ ಸ್ಪಸ್ಟಿಕ್ ಆರ್ಯ, ಪ್ರವೀಣ್ ಬಗಂಬಿಲ, ವಿಗ್ನೇಶ್ ಟ್ರಾನ್ಸ್ಪೋರ್ಟ್ ಬಿರುವೆರ್ ಕುಡ್ಲ ಅಧ್ಯಕ್ಷ ರಾಕೇಶ್ ಪೂಜಾರಿ ಬಳ್ಳಾಲ್ ಬಾಗ್, ಪ್ರಮುಖರಾದ ಲತೀಶ್ ಪೂಜಾರಿ ಬಳ್ಳಾಲ್ ಬಾಗ್, ರಾಕೇಶ್ ಚಿಲಿಂಬಿ, ಮನೋಜ್ ಶೆಟ್ಟಿ ಲೋಹಿತ್ ಗಟ್ಟಿ, ರಾಮ್ ಎಕ್ಕೂರು, ಕಿಶೋರ್ ಬಾಬು, ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.