ಮಂಗಳೂರು : ಆರ್ನ ಅಶ್ವಿನ್ ಶೇಖರ್ ಎಂಬ ಹೆಸರಿನ ಇ-ಮೇಲ್ ನಿಂದ ಬಾಂಬ್ ಬೆದರಿಕೆ ಕರೆ ಬಂದಿದ್ದು ಪೊಲೀಸರು ಅಲರ್ಟ್ ಆಗಿದ್ದಾರೆ.ಬಿಜೈ ಬಳಿಯ ಲೂರ್ಡ್ಸ್ ಸ್ಕೂಲಿಗೆ ರಾತ್ರೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು 9.30 ಗಂಟೆಗೆ ಸ್ಫೋಟಿಸುವುದಾಗಿ ಸಂದೇಶ ರವಾನಿಸಿದ್ದಾರೆ.
8 RDX IEDs Planted in School Premises to Blast in Afternoon. Aarna Ashwin Shekher. ಎಂದು ಬೆದರಿಕೆ ಹಾಕಿದ್ದಾರೆ.
ತಮಿಳುನಾಡು ಮೂಲದ ಹೆಸರಿನಿಂದ ಈ ಇ-ಮೇಲ್ ಗಳು ಬರುತ್ತಿದ್ದು ಕದ್ರಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ರಾಜ್ಯದಲ್ಲಿ ಧಾರವಾಡ ನ್ಯಾಯಾಲಯ ,ಮಂಗಳೂರು ನ್ಯಾಯಾಲಯ ಸೇರಿ ಹಲವು ಕಡೆ ಇಂತಹ ಇಮೇಲ್ ಮೂಲಕ ಬೆದರಿಕೆ ಕರೆಗಳು ಬರುತ್ತಿದ್ದು ಸ್ವಾನ ದಳದ ಸಿಬ್ಬಂದಿಗಳು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಹಾಗೂ ಈವರೆಗೆ ಯಾವುದೇ ಸಂಶಯಾಸ್ಪದ ವಸ್ತುಗಳು ಕಂಡು ಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ.


