ಮಂಗಳೂರು : ಐಷಾರಾಮಿ ಕಾರು,ಮನೆ,ಐಷಾರಾಮಿ ಮದ್ಯದ ಬಾಟಲಿ2.75 ಕೋಟಿ ರೂಪಾಯಿ ಮೌಲ್ಯದ ವಜ್ರದ ಉಂಗುರ ಇದೆಲ್ಲ ನೋಡೋವಾಗ ಈ ಮಾಧ್ಯಮ ವರ್ಗದ ಜನ ಬೆಚ್ಚಿಬೀಳೋದು ಸಾಮಾನ್ಯ.ಎಷ್ಟೇ ದುಡಿದರು ತಿಂಗಳ ಕೊನೆಯಲ್ಲಿ ಸಾಲದಲ್ಲಿ ಬದುಕುವ ಈ ಮಾಧ್ಯಮ ವರ್ಗದ ಜನರಿಗೆ ತಟ್ಟನೆ ಲಕ್ಷ್ಮಿ ಒಲಿದರೆ ಜೀವನ ಶೈಲಿಯೇ ಬದಲಾಗುತ್ತದೆಂಬುದಕ್ಕೆ ಈ ರೋಹನ್ ಸಲ್ಡಾನ ಉದಾಹರಣೆ.ಆರೋಪಿ ರೋಷನ್ ಸಲ್ಡಾನಾ 2.75 ಕೋಟಿ ರೂಪಾಯಿ ಮೌಲ್ಯದ ವಜ್ರದ ಉಂಗುರ ಹಾಕುತ್ತಿದ್ದನು ಎಂದು ತಿಳಿದುಬಂದಿದೆ. ಸದ್ಯ ಮಂಗಳೂರು ಪೊಲೀಸರು ಈ ಉಂಗುರವನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ 1೦ ವರ್ಷದಿಂದ ಈತ ತಟ್ಟನೆ ಕೋಟಿಯಾದಿಪತಿಯಾಗಿದ್ದು ನೆರೆಯವರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.ಈತ ಮನಸ್ತಾಪದ ಹಿನ್ನೆಲೆ ಒಂದು ಸಮಯದಲ್ಲಿ ತನ್ನ ತಾಯಿಯನ್ನೇ ಮನೆಯಿಂದ ಹೊರಹಾಕಿದ್ದನು.ಈತನ ಮಡದಿ ಕೂಡ ದುರಹಂಕಾರದ ರೀತಿ ವರ್ತಿಸುತ್ತಿದ್ದು ಇದೀಗ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಆದರೆ ಆ ವಠಾರದವರಿಗೆ ಈತ ಯಾವ ವ್ಯವಹಾರ ಮಾಡುತ್ತಿದ್ದನೆಂದು ತಿಳಿದಿರಲೇಯಿಲ್ಲ.
ಜಪ್ಪಿನ ಮೊಗರು ನಿವಾಸಿ ರೋಷನ್ ಸಲ್ಡಾನಾ ದೇಶದ ಹಲವು ಭಾಗದ ಉದ್ಯಮಿಗಳಿಗೆ ವಂಚಿಸಿದ್ದಾನೆ. ಯಾರ‍್ಯಾರಿಗೆ ವಂಚಿಸಿದ್ದಾನೆ ಎಂಬುವುದು ವಿಚಾರಣೆ ವೇಳೆ ಬಾಯಿಟ್ಟಿದ್ದಾನೆ.ಮಹಾರಾಷ್ಟ್ರದ ಓರ್ವ ಉದ್ಯಮಿಗೆ 5 ಕೋಟಿ ರೂ., ಮಹಾರಾಷ್ಟ್ರದ ಮತ್ತೊಬ್ಬ ಉದ್ಯಮಿಗೆ 10 ಕೋಟಿ ರೂ. ಮತ್ತು ಅಸ್ಸಾಂನ ಓರ್ವ ಉದ್ಯಮಿಯಿಂದ 20 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ. ಈ ಎಲ್ಲ ಉದ್ಯಮಿಗಳು ಇದೀಗ ಮಂಗಳೂರಿನ ಸಿಇಎನ್ ಪೊಲೀಸ್ ಠಾಣೆಗೆ ಆಗಮಿಸಿ, ದೂರು ನೀಡುತ್ತಿದ್ದಾರೆ. ಪೊಲೀಸರು ಬ್ಯಾಂಕ್ಗಳಿಗೆ ಸಂಪರ್ಕಿಸಿ ಮಹಾರಾಷ್ಟ್ರದ ಉದ್ಯಮಿಗೆ ಸಂಬಂಧಿಸಿದ ರೂ 3.5 ಕೋಟಿ ಹಣ ಹಾಗೂ ಅಸ್ಸಾಂ ರಾಜ್ಯದ ಓರ್ವ ವ್ಯಕ್ತಿಗೆ ಸಂಬಂಧಿಸಿದ 20 ಲಕ್ಷ ರೂ. ಹಣವನ್ನು ಪ್ರೀಜ್ ಮಾಡಸಿದ್ದಾರೆ.ಈತನ ಮೇಲೆ ಮತ್ತೆ ಎರಡು F.I. ದಾಖಲಾಗಿದ್ದು ಪ್ರಕರಣ ತನಿಖೆ ನಡೆಯುತ್ತೆಂದು ತಿಳಿದುಬಂದಿದೆ.