Saturday, July 12, 2025
Flats for sale
Homeಜಿಲ್ಲೆಮಂಗಳೂರು : ಬಳ್ಳೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇವರ ಆಶ್ರಯದಲ್ಲಿ ಅಂಕಣ...

ಮಂಗಳೂರು : ಬಳ್ಳೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇವರ ಆಶ್ರಯದಲ್ಲಿ ಅಂಕಣ ಬರಹಗಳ ಶ್ರೀನಾಥ್ ಬಸ್ರೂರುರವರ ” ಒಮ್ಮೊಮ್ಮೆ ಅನಿಸಿದ್ದು ” ಪುಸ್ತಕ ಬಿಡುಗಡೆ…!

ಮಂಗಳೂರು ; ಬಳ್ಳೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ (ರಿ) 2022 ರಂದು ಪ್ರಾರಂಭಗೊಂಡು 2024-25 ರಂದು ಅಧಿಕೃತವಾಗಿ ನೊಂದಣಿಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿವರ್ಷವು ಬಡಗುತಿಟ್ಟಿನ ವೃತ್ತಿ ಮೇಳವನ್ನು ಕರೆಯಿಸಿ ಯಕ್ಷಗಾನ ಪ್ರದರ್ಶಿನವನ್ನು ನೀಡುತ್ತ, ಹಿರಿಯ ಕಲಾವಿದರನ್ನು ಆಯ್ಕೆ ಮಾಡಿ ಅವರಿಗೆ ‘ ಬಳ್ಳೂರು ಯಕ್ಷ ಕುಸುಮ ಪ್ರಶಸ್ತಿ’ಯನ್ನು ಹಾಸ್ಯ ಕಲಾವಿದ ಶ್ರೀ ಹಳ್ಳಾಡಿ ಜಯರಾಮ್ ಶೆಟ್ಟಿ, ಹಿರಿಯ ಕಲಾವಿದರಾದ ರಾಷ್ಟ್ರ ಪ್ರಶಸ್ತಿ ವಿಜೇತರಾದ ಶ್ರೀ ಸೂರಿಕುಮೇರು ಗೋವಿಂದ ಭಟ್ಟ, ಶ್ರೀ ವಿದ್ಯಾಧರ ರಾವ್ ಜಲವಳ್ಳಿ, ಶ್ರೀ ರಂಜಿತ್ ಕುಮಾರ್ ವಕ್ವಾಡಿ, ಕು.ಸಾತ್ವಿಕ್ ನೆಲ್ಲಿತೀರ್ಥ ಸೇರಿದಂತೆ ಇವರುಗಳಿಗೆ ನೀಡುತ್ತ ಬಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕರುಣಾಕರ್ ಬಳ್ಕೂರುರವರು ತಿಳಿಸಿದ್ದಾರೆ.

ಅಂತೆಯೇ ಪುಸ್ತಕ ಪ್ರಕಾಶನದಲ್ಲಿಯೂ ಮುಂಚೂಣಿಯಲ್ಲಿದ್ದು ಪ್ರಥಮ ಕೃತಿಯಾಗಿ ಕರುಣಾಕರ ಬಳೂರು ಅವರ ‘ಬೆಳಕು’ ಕವನ ಸಂಕಲನ, ದ್ವಿತೀಯ ಕೃತಿಯಾಗಿ ಚಿಕ್ಕಮಗಳೂರು ವಿಭಾಗದ ಅಂಚೆ ಅಧೀಕ್ಷಕರು ಆಗಿರುವ ಶ್ರೀನಾಥ್ ಬನ್ನೂರು ಅವರ ‘ಒಮ್ಮೊಮ್ಮೆ ಅನಿಸಿದ್ದು’ಎಂಬ ಅಂಕಣ ಬರಹಗಳ ಪುಸ್ತಕವನ್ನು ಇಂದು ಬಿಡುಗಡೆಗೊಳಿಸಿದ್ದಾರೆ.

ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಶ್ರೀ ನಾಥ್ ಬಸ್ರೂರು ರವರು ಈ ಪುಸ್ತಕದ ಬಗ್ಗೆ ವಿವರಿಸಿದರು,ಈ ಪುಸ್ತಕ ಬಿಡುಗಡೆಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು, ಜೊತೆಗೆ ಡಾ. ಅನ್ನಯ್ಯ ಕುಲಾರ್ ರವರ ಕಾರ್ಯವೈಕರಿಯನ್ನು ಶ್ಲಾಘಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀಯುತ ಶ್ರೀನಿವಾಸ ನಾಯಕ್ ಇಂದಾಜಿ ವಹಿಸಿಕೊಂಡಿದ್ದು ಪುಸ್ತಕ ಬಿಡುಗಡೆಯನ್ನು ಮಂಗಳೂರು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ಳೂರು ಇವರು ನಿರ್ವಹಿಸಿದರು.

ವೇದಿಕೆಯಲ್ಲಿ ಲೇಖಕರಾದ ಶ್ರೀನಾಥ್ ಬಸೂರು, ಅಂಚೆ ಅಧೀಕ್ಷಕರು, ಚಿಕ್ಕಮಗಳೂರು ವಿಭಾಗ, ಚಿಕ್ಕಮಗಳೂರು,ವಿದ್ಯಾಕಿಶೋರಿ ಹಾಗೂ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆಯವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular