Sunday, March 15, 2026
Flats for sale
Homeಜಿಲ್ಲೆಮಂಗಳೂರು : ಬಕ್ರೀದ್ ಸಂಧರ್ಭದಲ್ಲಿ ಕುರ್ಬಾನಿ ಹೆಸರಿನಲ್ಲಿ ನಡೆಯುವ ಗೊಹತ್ಯೆ,ಹಿಂಸಾತ್ಮಕ ಗೋಸಾಗಾಟ ತಡೆಯಲು ಜಿಲ್ಲಾಧಿಕಾರಿ-ಪೊಲೀಸ್ ಕಮಿಷನರ್...

ಮಂಗಳೂರು : ಬಕ್ರೀದ್ ಸಂಧರ್ಭದಲ್ಲಿ ಕುರ್ಬಾನಿ ಹೆಸರಿನಲ್ಲಿ ನಡೆಯುವ ಗೊಹತ್ಯೆ,ಹಿಂಸಾತ್ಮಕ ಗೋಸಾಗಾಟ ತಡೆಯಲು ಜಿಲ್ಲಾಧಿಕಾರಿ-ಪೊಲೀಸ್ ಕಮಿಷನರ್ ಗೆ ವಿಶ್ವ ಹಿಂದೂ ಪರಿಷದ್ ಮನವಿ..!

ಮಂಗಳೂರು : ರಾಜ್ಯ ಮತ್ತು ದೇಶದ ಕಾನೂನಿನನ್ವಯ ಹಾಗೂ Animal welfare board of India ಇದರ ಸುತ್ತೋಲೆ ಅನ್ವಯ ಹಾಗೆಯೇ ಸುಪ್ರೀಂ ಕೋರ್ಟ್ ಆದೇಶದನ್ವಯ ಬಕ್ರೀದ್ ಮತ್ತಿತರ ಹಬ್ಬ ಸಂಧರ್ಭಗಳಲ್ಲಿ, ಜಾನುವಾರು ಮತ್ತು ಇತರೆ ಪ್ರಾಣಿಗಳ ಹತ್ಯೆ ನಿಷೇಧವಿದ್ದು ಅದನ್ನು ಕಟ್ಟು ನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲು ವಿಶ್ವ ಹಿಂದೂ ಪರಿಷದ್ ಮನವಿ ಮಾಡಿದೆ.

ರಾಜ್ಯದಲ್ಲಿ ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣ ಕಾಯಿದೆ ಜಾರಿಯಲ್ಲಿದ್ದು ಅದರ ಪ್ರಕಾರ ಕುರ್ಬಾನಿಗೆ ( ಯಾವುದೇ ರೀತಿಯ ಹತ್ಯೆ ) ನಿಷೇಧವಿದೆ. ಹಾಗೂ ಕುರ್ಬಾನಿಗೆ ಜಾನುವಾರು ಸಾಗಾಟವೂ ಶಿಕ್ಷಾರ್ಹ ಅಪರಾಧವಾಗಿದೆ. ಕುರ್ಬಾನಿ ಕೊಟ್ಟ ಸ್ಥಳವನ್ನು ಸರಕಾರ ಮುಟ್ಟುಗೋಲಿಗೆ ಅವಕಾಶವಿದೆ. ರಾಜ್ಯದಲ್ಲಿ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯಿದೆ 1959 ತಿದ್ದುಪಡಿ 1975 ಇದರ ಪ್ರಕಾರವೂ ಜಾನುವಾರು ಬಲಿ (ಕುರ್ಬಾನಿ ) ನಿಷೇಧವಿರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ WP ( Civil ) 309:2003 ದಿನಾಂಕ 30.01.2014 ರ ತೀರ್ಪಿನ ಆದೇಶ ದಿನಾಂಕ 06.01.2009 WP 1443 / 2008 ಹಾಗೂ ಕಾಲ ಕಾಲಕ್ಕೆ ಸರಕಾರ ವಿವಿಧ ಆದೇಶಗಳಂತೆ ರಾಜ್ಯದಲ್ಲಿ ಜಾನುವಾರುಗಳ ಕುರ್ಬಾನಿ ಕಟ್ಟು ನಿಟ್ಟಾಗಿ ತಡೆಯಲು ತಾವುಗಳು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಜಾನುವಾರ ಸಾಗಾಟವಾಗದಂತೆ ನಾಕಾಬಂದಿ ಹಾಕಬೇಕು. ಕಿವಿಯೋಲೆ ಇಲ್ಲದ ಜಾನುವಾರುಗಳನ್ನು ಸಾರ್ವಜನಿಕ ಜಾಗದಲ್ಲಿ ಶೇಖರಿಸಿ ಇಡದಂತೆ, ಮೇಯಲು ಬಿಡದಂತೆ, ಸೂರ್ಯಾಸ್ತದಿಂದ ಸೂರ್ಯೋದಯವರೆಗೆ ಕಾಲ್ನಡಿಗೆಯಲ್ಲಿ ಜಾನುವಾರು ಸಾಗಾಟ ನಿಷೇಧವಿದ್ದು ಹಾಗಾಗಿ ಈ ಸಮಯದಲ್ಲಿ ಸಾಗಾಟ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಮಾಧ್ಯಮದ ಮೂಲಕ ತಿಳಿಸಿದ್ದಾರೆ.ಅದನ್ನು ಉಲ್ಲಂಘಿಸಿ ಕಿವಿಯೋಲೆ ಇಲ್ಲದೆ ಶೇಖರಿಸಿಟ್ಟ, ಮೇಯಲು ಬಿಟ್ಟ ಜಾನುವಾರುಗಳನ್ನು ವಶಪಡಿಸಿ, ಜಾನುವಾರು ನಿಷೇಧ ಕಾಯಿದೆ 2020 ರಂತೆ ಪ್ರಕರಣ ದಾಖಲಿಸಬೇಕು. ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆ ಹಿಂದೆ ನಡೆದಲೆಲ್ಲ ಜಾಗದಲ್ಲಿ ನಿಗಾ ಇಡುತ್ತಾ, ಪ್ರಾರ್ಥನಾ ಮಂದಿರಗಳಲ್ಲಿಯೂ ಜಾನುವಾರು ಶೇಖರಿಸಿ ಇಡದಂತೆ ನಿಗಾ ಇಡಲು ಸೂಚಿಸಿದ್ದಾರೆ. ಕಾಯಿದೆಯಂತೆ ಜಾನುವಾರು ಹತ್ಯೆ ತಡೆಯುವ ಅಧಿಕಾರ ಸಾರ್ವಜನಿಕರಿಗೂ ಇದ್ದು ಮೊದಲೇ ಪೊಲೀಸರು ಅಕ್ರಮ ಜಾನುವಾರು ಸಾಗಾಟ, ಶೇಖರಣೆ, ಹತ್ಯೆ ತಡೆಯಲು ಸಾರ್ವಜನಿಕರು ಅಧಿಕಾರ ಉಪಯೋಗಿಸಲು ಅವಕಾಶ ಸಿಗದಂತೆ ಎಚ್ಚರ ವಹಿಸಿದ್ದು ಈ ಎಲ್ಲಾ ಕಾರ್ಯಗಳಲ್ಲಿ ಕಾನೂನುಭದ್ಧವಾಗಿ ತಮಗೆ ಸಹಕರಿಸಲು ನಾವುಗಳು ಸದಾ ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.

ಪೊಲೀಸ್ ಕಮಿಷನರ್ ಗೋರಕ್ಷಣೆಯ ಕಾರ್ಯ ಶ್ಲಾಘನೀಯ ಜಿಲ್ಲಾಧಿಕಾರಿಗಳಿಗೆ – ಪೊಲೀಸ್ ಕಮಿಷನರ್ – ಎಲ್ಲಾ ಪೊಲೀಸ್ ಠಾಣೆಗಳಿಗೆ ಮನವಿ

ಪೊಲೀಸ್ ಕಮಿಷನರ್ ಅಧಿಕಾರ ವಸಿಕೊಂಡ ದಿನದಂತೆ ಕೇರಳದಿಂದ ಮಂಗಳೂರಿಗೆ (ತಲಪಾಡಿಯ ಬಳಿ) ಅಕ್ರಮವಾಗಿ ಕಂಟೇನರ್ ಸಾಗಿಸುತ್ತಿದ್ದ 24 ಜಾನುವಾರುಗಳನ್ನು ರಕ್ಷಣೆಮಾಡಿದ್ದು ಪೊಲೀಸ್ ಕಮಿಷನರ್ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸ್ದದಾರೆ. ತಮ್ಮ ವ್ಯಾಪ್ತಿಯಲ್ಲಿ ಎಲ್ಲೂ ಅಕ್ರಮ ಗೋಸಾಗಾಟ / ಗೋವಂಶ ವಧೆಯಾಗದ ರೀತಿಯಲ್ಲಿ ತಾವುಗಳು ಕ್ರಮಕೈಗೊಳ್ಳುವ ಬಗ್ಗೆ ನಮಗೆ ಸಂಪೂರ್ಣ ವಿಸ್ವಾಸವಿದ್ದು ಹಾಗೂ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ಕಮಿಷನರ್ ರವರೆಗೆ ಮತ್ತು ಎಲ್ಲಾ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಮನವಿ ನೀಡಿದ್ದು ಅಕ್ರಮ ಗೋಸಾಗಾಟ / ಗೋವಂಶ ವಧೆಯಾಗದಂತೆ ಕ್ರಮಕೈಗೊಳ್ಳಲು ಮನವಿ ಮಾಡಿದ್ದಾರೆಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸುನಿಲ್ ಕೆ ಆರ್ ಪ್ರಾಂತ ಗೋರಕ್ಷಾ ಪ್ರಮುಖ್ / ಎಚ್ ಕೆ ಪುರುಷೋತ್ತಮ ಜಿಲ್ಲಾಧ್ಯಕ್ಷರು/ ಪ್ರದೀಪ್ ಸರಿಪಲ್ಲ – ವಿಭಾಗ ಪ್ರಚಾರ ಪ್ರಮುಖ್ / ಹರೀಶ್ ಶೇಟ್ -ಜಿಲ್ಲಾ ಗೋರಕ್ಷಾ ಪ್ರಮುಖ್/ ನವೀನ್ ಮೂಡುಶೆಡ್ಡೆ -ಜಿಲ್ಲಾ ಸಂಯೋಜಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular