ಮಂಗಳೂರು : ಬಂಟ್ವಾಳದಲ್ಲಿ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರಿನಲ್ಲಿ ಹೈ ಡ್ರಾಮಾ ನಡೆದಿದೆ.ಕೊಳತ್ತಮಜಲು ನಿವಾಸಿ ಪಿಕಪ್ ಚಾಲಕ ರಹೀಮ್ ಎಂಬಾತನನ್ನು ಇರಾಕೋಡಿ ಎಂಬಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಕೊಲೆ ಮಾಡಲಾಗಿತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸ್ಥಬ್ದವಾಗಿದ್ದು.ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕರವೆಂದು ಹಲವಾರು ಸಾಮಾಜಿಕಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು.ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ಬಳಿ ಸೇರಿದ ಭಾರೀ ಸಂಖ್ಯೆ ಜಮಾಯಿಸಿದ್ದರು ಬಳಿಕ ಮೃತದೇಹವನ್ನು ಯೆನಪೋಯ ಆಸ್ಪತ್ರೆಗೆ ರವಾನಿಸಿದ್ದಾರೆ.
ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಬರ್ಬರ ಹತ್ಯೆ ಹಿನ್ನೆಲೆ ದ.ಕ ಜಿಲ್ಲಾ ಪೊಲೀಸ್ ವ್ಯಾಪ್ತಿ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ ಬಿಎನ್ಎಸ್ 163ರಡಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದು ಇಂದಿನಿಂದ ಮೇ. 30ರ ಸಂಜೆ ಆರು ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ದ.ಕ ಜಿಲ್ಲೆಯ ಪ್ರಭಾರ ಜಿಲ್ಲಾಧಿಕಾರಿ ಆನಂದ್ ಆದೇಶ ಹೊರಡಿಸಿದ್ದಾರೆ.
ಈ ನಡುವೆ ದ್ವೇಷ ಭಾಷಣದ ಕಾರಣದಿಂದಲೇ ಕೊಲೆ ಆಗಿದೆ ಎಂದು ಮುಸ್ಲಿಮರು ಆಕ್ರೋಶ ಹೊರಹಾಕಿದ್ದು ದ್ವೇಷ ಭಾಷಣ ಮಾಡೋರನ್ನ ಬಂಧಿಸಿದ್ದರೆ ಕೊಲೆ ಆಗ್ತಾ ಇರಲಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದ್ವೇಷ ಭಾಷಣ ಮಾಡಿದ ಹಿಂದೂ ಮುಖಂಡರ ಬಂಧನಕ್ಕೆ ಆಗ್ರಹಿಸಿದ್ದಾರೆ.
ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಬರ್ಬರ ಹತ್ಯೆ ಪ್ರಕರಣದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದೂ ‘ಮಂಗಳೂರಿನ ಕೊಳತ್ತಮಜಲು ಬಳಿ ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿಯ ಹತ್ಯೆ ಖಂಡನೀಯ’ ‘ಘಟನೆಗೆ ನೈಜ ಕಾರಣ ತಿಳಿದಿಲ್ಲ. ಈ ಸಂಬಂಧ ಈಗಾಗಲೇ ಗೃಹ ಸಚಿವರಾದ ಶ್ರೀ @DrParameshwara, @DgpKarnataka ಹಾಗೂ ಕಾನೂನು ಸುವ್ಯವಸ್ಥೆ ADGP ಜೊತೆ ಮಾತಾಡಿದ್ದೇನೆ’ ಎಂದು ಮಾಹಿತಿ ನೀಡಿದ್ದಾರೆ.
ಬಂಟ್ವಾಳದಲ್ಲಿ ಅಬ್ದುಲ್ ರಹೀಂ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೆನೇಪೋಯಾ ಆಸ್ಪತ್ರೆ ಬಳಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಹೇಳಿಕೆ ನೀಡಿದ್ದು ಕೊಲ್ತಮಜಲು ಬಳಿ ಪಿಕಪ್ ಚಾಲಕನಾಗಿದ್ದ ಮುಸ್ಲಿಂ ಯುವಕನಿಗೆ ಮರಳು ಲೋಡ್ ಗೆ ಕರೆದಿದ್ದರು ಸಂಘಪರಿವಾರಕ್ಕೆ ಸೇರಿದ ಗೂಂಡಾ ಪಡೆ ಏಕಾಏಕಿ ತಲವಾರು ದಾಳಿ ನಡೆಸಿದ್ದಾರೆ. ಇಮ್ತಿಯಾಜ್ ಆಲಿಯಾಸ್ ಅಬ್ದುಲ್ ರಹೀಂ ಸ್ಥಳದಲ್ಲೇ ಹತ್ಯೆಯಾಗಿದ್ದಾರೆ ಕೆಲ ದಿನಗಳಿಂದ ಕೆಲ ಕಿಡಿಗೇಡಿಗಳು ಮುಸ್ಲಿಮರಿಗೆ ಬಹಿರಂಗ ಬೆದರಿಕೆ ಹಾಕ್ತಾ ಇದ್ದಾರೆ. ರೌಡಿಶೀಟರ್ ಒಬ್ಬನ ಹತ್ಯೆಗೆ ಪ್ರತೀಕಾರವಾಗಿ ಬೆದರಿಕೆ ಹಾಕ್ತಾ ಇದಾರೆ ಮೊನ್ನೆ ಪ್ರತಿಭಟನೆಯಲ್ಲಿ ಶ್ರೀಕಾಂತ್ ಶೆಟ್ಟಿ ಎಂಬಾತ ರಕ್ತಕ್ಕೆ ರಕ್ತ ಅಂತ ಹೇಳಿದ್ದಾನೆ ಮತ್ತೊಬ್ಬ ಭರತ್ ಕುಮ್ಡೇಲ್ ಎಂಬ ಗೂಂಡಾ ಪೋಸ್ಟ್ ಮಾರ್ಟಂ ಕೂಡ ಮಾಡಲು ಆಗದ ರೀತಿಯಲ್ಲಿ ಕೊಲೆ ಮಾಡ್ತೇನೆ ಅಂದಿದ್ದಾನೆ.ಸಾಮಾಜಿಕ ತಾಣಗಳಲ್ಲಿ ಬೆದರಿಕೆ ಹಾಕಿದವರ ವಿರುದ್ದ 45 ಎಫ್ಐಆರ್ ಆಗಿದೆ ಆದರೆ ಒಂದಿಬ್ಬರನ್ನ ಬಿಟ್ಟು ಯಾರನ್ನೂ ಬಂಧನ ಮಾಡಲಿಲ್ಲ ಇವರು ಆಂಟಿ ಕಮ್ಯನಲ್ ಟಾಸ್ಕ್ ಫೋರ್ಸ್ ಮಾಡ್ತಾರೆ ಅಂತಿದಾರೆ, ಆದರೆ ಅದಕ್ಕೆ ಮತ್ತೊಂದು ಹೆಣ ಬೀಳಬೇಕಾ? 15 ಮಂದಿ ಬಹಳ ವ್ಯವಸ್ಥಿತವಾಗಿ ಈ ಹತ್ಯೆ ಮಾಡಿದ್ದಾರೆ ಇದರ ವಿರುದ್ದ ವಿಶೇಷ ತನಿಖಾ ತಂಡ ರಚಿಸಿ ತಕ್ಷಣ ತನಿಖೆ ಮಾಡಬೇಕು ರಹೀಂ ಒಬ್ಬ ಅಮಾಯಕ ಯುವಕ, ಯಾವುದೇ ಸಂಘಟನೆಯಲ್ಲಿ ಆತ ಇರಲಿಲ್ಲ ಆತ ಮಸೀದಿಯಲ್ಲಿ ಕಾರ್ಯದರ್ಶಿ ಆಗಿದ್ದ, ಅವನು ಶ್ರಮಜೀವಿ
ಯಾವುದೇ ಕೇಸು ಆತನ ಮೇಲೆ ಇಲ್ಲ, ಕ್ರಿಮಿನಲ್ ಆಗಿರಲಿಲ್ಲ, ಆತ ಅಮಾಯಕ.ಆದರೆ ಈ ಸಂಘಪರಿವಾರದ ಗೂಂಡಾಗಳು ಅಮಾಯಕನ ಕೊಂದಿದ್ದಾರೆ ,ಮರಳು ಲೋಡ್ ಬಾಡಿಗೆಗೆ ಕರೆಸಿ ಆತನ ಹತ್ಯೆ ಮಾಡಲಾಗಿದೆ ಈ ಹಿಂದೆ ಯಾವುದೇ ಸಂಘಟನೆಯಲ್ಲಿ ಇಲ್ಲದ ಫಾಜಿಲ್ ಹತ್ಯೆ ಮಾಡಿದ್ದರು ಇವರಿಗೆ ಒಬ್ಬ ಮುಸಲ್ಮಾನನ ರಕ್ತ ಬೇಕು, ಯಾವುದೇ ಸಂಘಟನೆಯಲ್ಲಿ ಇರಬೇಕು ಅಂತ ಇಲ್ಲ,ಬಜಪೆಯಲ್ಲಿ ಶ್ರೀಕಾಂತ್ ಶೆಟ್ಟಿ ಬಹಳ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದ,ಪೊಲೀಸರ ಗಮನಕ್ಕೆ ತಂದರೂ ಎಫ್ ಐಆರ್ ಮಾಡಿದ್ದು ಬಿಟ್ಟರೆ ಕ್ರಮ ಆಗಿಲ್ಲ ,ಸಂಘಪರಿವಾರದವರು ಓಪನ್ ಹೇಳಿಕೆ ಕೊಟ್ಟರೂ ಕ್ರಮ ಆಗ್ತಿಲ್ಲ,ಇಲ್ಲಿನ ಶಾಸಕರು ಕೂಡ ಬಹಿರಂಗ ಹೇಳಿಕೆ ಕೊಡ್ತಾ ಇದಾರೆ
ಸರ್ಕಾರ ತಕ್ಷಣ ಕೊಲೆಯ ಹಿಂದಿರೋ ಎಲ್ಲರನ್ನೂ ಹುಡುಕಿ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.
ಬಂಟ್ವಾಳ ರಹೀಮ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ವೇಳೆ ಮುಸ್ಲಿಂ ಮುಖಂಡರು ದಕ್ಷಿಣ ಕನ್ನಡ ಜಿಲ್ಲಾ ಬಂದ್,ಹಾಗೂ ಕೊಲೆಗೆ ಪಚೋದನೆ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಮೃತದೇಹವನ್ನು ಇಟ್ಟು ಪ್ರತಿಭಟನೆ ನಡೆಸುತ್ತೇವೆಂದು ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಹಿನ್ನೆಲೆ ಮಂಗಳೂರಿನ ಕದ್ರಿ ಪೊಲೀಸರು ಹಿಂದೂ ಮುಖಂಡ ಶರಣ್ ಪಂಪ್ವೆಲ್ ನನ್ನು ಬಂಧಿಸಿದ್ದು ಸುಹಾಸ್ ಶೆಟ್ಟಿ ಮೃತಪಟ್ಟ ಸಂಧರ್ಭ ಬಂದ್ ಕರೆ ನೀಡಿದ ಹಿನ್ನೆಲೆ ಬಂಧಿಸಿದ್ದಾರೆ. ಬಂದ್ ಕರೆ ನೀಡಿದ ಹಿನ್ನೆಲೆ ಕದ್ರಿ ಠಾಣೆಯಲ್ಲಿ FIR ದಾಖಲಾಗಿತ್ತು ಬಳಿಕ ಕದ್ರಿ ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದರು ಬಳಿಕ ಶರಣ್ ಪಂಪ್ವೆಲ್ ನನ್ನು ಕದ್ರಿ ಠಾಣೆಯಿಂದ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು ತಪಾಸಣೆಗಾಗಿ ಕರೆದುಕೊಂಡು ಹೋಗಿದ್ದರು ಬಳಿಕ ವಿ ಎಚ್ ಪಿ ಮುಖಂಡ ಶರಣ್ ಪಂಪ್ವೆಲ್ ಬಂಧನ ಹಿನ್ನಲೆ ಕದ್ರಿ ಠಾಣೆ ಬಳಿ ಹಿಂದೂ ಕಾರ್ಯಕರ್ತರ ಜಮಾವಣೆಯಾಗಿದ್ದು ಮುಸ್ಲಿಂ ರನ್ನು ಒಲೈಕೆ ಮಾಡೋಕೆ ಸರ್ಕಾರ ಪೊಲೀಸರಿಗೆ ಒತ್ತಡ ತಂದಿದ್ದು ಸುಹಾಸ್ ಹತ್ಯೆಯ ದಿನ ಬಂದ್ ಗೆ ಕರೆ ನೀಡಿರೋದಕ್ಕೆ ಕೇಸ್ ಆಗಿತ್ತು.ಕೇಸ್ ಆಗಿ ೨೦ ದಿನಗಳೇ ಕಳೆದುಹೋಗಿದೆ.ಈಗ ಬಂಧನ ಮಾಡಿರೋದು ಯಾಕೆ.ಇವತ್ತಿನ ಘಟನೆ ಹಿನ್ನಲೆ ಮುಸ್ಲಿಂ ರನ್ನು ಓಲೈಕೆ ಮಾಡೋಕೆ ಬಂಧನ ಮಾಡಿದ್ದಾರೆ .ಇದು ಜಾಮೀನಾಗುವ ಕೇಸ್ ಎಂದು ವಿಎಚ್ ಪಿ ಮುಖಂಡ ಪ್ರದೀಪ್ ಸರಿಪಳ್ಳ ಹೇಳಿದ್ದಾರೆ.
ಪೊಲೀಸರು ಸುಹಾಸ್ ಹತ್ಯೆ ವೇಳೆ ದ.ಕ ಬಂದ್ ಕರೆ ನೀಡಿದ್ದ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ನನ್ನು ಬಂಧಿಸಿದ್ದು ಕದ್ರಿ ಪೊಲೀಸರು ಬಳಿಕ ನ್ಯಾ ಮಂಗಳೂರಿನ ಬೋಂದೆಲ್ ನ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದು ವಿಚಾರಣೆ ಬಳಿಕ ನ್ಯಾಯಾಧೀಶರು ಜಾಮೀನು ನೀಡಿದ್ದಾರೆಂದು ತಿಳಿದಿದೆ.


