ಮಂಗಳೂರು : ಕಾವೂರು ಠಾಣಾ ವ್ಯಾಪ್ತಿಯ ಬಂಗ್ರ-ಕೂಳೂರು ಘಾಲ್ಗುಣಿ ನದಿಯ ಬಳಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನವಾಗಿದೆ.
ಡಿ 02 ರಂದು ಬೆಳಿಗ್ಗೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಂಗ್ರ-ಕೂಳೂರು ಎಂಬಲ್ಲಿಯ ಘಾಲ್ಗುಣಿ ನದಿಯಬಳಿ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ತಿಳಿದು ಶ್ರೀಕಾಂತ್ ಕೆ. ಎ.ಸಿ.ಪಿ ಪಣಂಬೂರು, ರಾಘವೇಂದ್ರ ಬೈಂದೂರ್ ಪಿಐ ಕಾವೂರು, ಮಲ್ಲಿಕಾರ್ಜುನ್, ಪಿ.ಎಸ್.ಐ, ಕಾವೂರು ಹಾಗೂ ಎ.ಎಸ್.ಐ ಚಂದ್ರಶೇಖರ್, ಸಿಬ್ಬಂದಿಗಳಾದ ರೆಜಿ ಎಂ, ಹಾಲೇಶ್ ನಾಯ್ಕ್, ರಿಯಾಜ್ ಎಂಬವರೊಂದಿಗೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಗಳನ್ನು ತುಮಕೂರು ನಿಮ್ರಾ ಮಸೀದಿ ಬಳಿಯ13 ನೇ ಕ್ರಾಸ್, ಪಿ.ಹೆಚ್. ಕಾಲೋನಿ ನಿವಾಸಿ ಶಾಫಿ ಅಹ್ಮದ್ (40)
ತುಮಕೂರು ಅಪೋಲೋ ಮೆಡಿಕಲ್ ರಸ್ತೆ, ಕೋತಿಪುರ ನಿವಾಸಿ ಮೊಹಮ್ಮದ್ ಸಮೀರ್ (20) ಎಂದು ತಿಳಿದುಬಂದಿದೆ.
ಅರೋಪಿಗಳಿಂದ ಸುಮಾರು 12 ಗ್ರಾಂ ಎಂ.ಡಿ.ಎಂ (ಅಂದಾಜು ಮೌಲ್ಯ ರೂ.70,000/-) ಹಾಗೂ 275 ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ. 10,000/-) ಮತ್ತು 2 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 177/2025 ಕಲಂ: 8(C), 21(C), 20(B) NDPS Act ನಂತೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಗಾಂಜಾ ಮತ್ತು ಎಂ.ಡಿ.ಎಂ ನ್ನು ಬೆಂಗಳೂರಿನಲ್ಲಿ ನಿಗ್ರೋ ಗಳ ಬಳಿ ಖರೀದಿಸಿರುವುದಾಗಿ ತಿಳಿಸಿದ್ದಾರೆ. ಆರೋಪಿ ಶಾಫಿ ಅಹ್ಮದ್ ಎಂಬಾತನ ಮೇಲೆ ಕೆಳಗಿನಂತೆ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು ಆತನು ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ನ್ಯಾಯಾಲಯವು ವಾರಂಟ್ ಹಾಗೂ ಪ್ರೊಕ್ಲಮೇಶನ್ ಜಾರಿಗೊಳಿಸಿದೆ.


