Saturday, February 22, 2025
Flats for sale
Homeಜಿಲ್ಲೆಮಂಗಳೂರು ; ಫೆ. 15 ರಂದು ಮಂಗಳೂರಿನ ಕರಾವಳಿ ಮೈದಾನದಲ್ಲಿ ರಾಜ್ಯಮಟ್ಟ‌ದ ಅಂಧರ ಕ್ರಿಕೆಟ್ ಪಂದ್ಯಾವಳಿ..!

ಮಂಗಳೂರು ; ಫೆ. 15 ರಂದು ಮಂಗಳೂರಿನ ಕರಾವಳಿ ಮೈದಾನದಲ್ಲಿ ರಾಜ್ಯಮಟ್ಟ‌ದ ಅಂಧರ ಕ್ರಿಕೆಟ್ ಪಂದ್ಯಾವಳಿ..!

ಮಂಗಳೂರು ; ಲಯನ್ಸ್ ಕ್ಲಬ್, ವೆಲನ್ಸಿಯಾ, ಮಂಗಳೂರು 1987 ರಲ್ಲಿ ಸ್ಥಾಪನೆಗೊಂಡು ಕಳೆದ 38 ವರುಷಗಳಿಂದ ನಿರಂತರವಾಗಿ ಸಾಮಾಜಿಕ ಹಿತಚಿಂತನೆಯೊಂದಿಗೆ ಕೆಲಸ ಕಾರ್ಯವನ್ನು ನಡೆಸಿಕೊಂಡು ಬಂದಿದ್ದು ಮಂಗಳೂರು ನಗರ ಮತ್ತು ಹತ್ತಿರದ ಗ್ರಾಮಾಂತರ ಜಿಲ್ಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ನೀಡಲು ಬದ್ಧರಾಗಿರುವ ಹುರುಪಿನ ಸಂಸ್ಥೆ ಎಂದು ತಿಳಿಸಿದ್ದಾರೆ. ವರ್ಷಂಪ್ರತಿ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳ ಜತೆಗೆ ವಿಶೇಷ ಚೇತನರ ಕ್ರೀಡಾಕೂಟವನ್ನು ನಡೆಸಿಕೊಂಡು ಬಂದಿರುವ ನಮ್ಮ ಈ ಸಂಸ್ಥೆ ವರುಷ ವೆಬ್ರವರಿ 15 ಶನಿವಾರದಂದು ರಾಜ್ಯಮಟ್ಟದ ಅಂಧರ ಕ್ರಿಕೆಟ್ ಪಂದ್ಯಾವಳಿಯನ್ನು ಮಂಗಳೂರಿನ ಕರಾವಳಿ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಳಿಗ್ಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ರಾಜ್ಯದ ವಿವಿಧ ಕಡೆಗಳಿಂದ 6 ತಂಡಗಳು ಭಾಗವಹಿಸಲಿದೆ. ಈ ಪಂದ್ಯಾವಳಿಯ ಎಲ್ಲಾ ಸ್ಪರ್ಧಿಗಳಿಗೆ ಸಾರಿಗೆ, ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ನಮ್ಮ ಲಯನ್ಸ್ ಕ್ಲಬ್ ಮೂಲಕ ಮಾಡಲಿದ್ದೇವೆ. ಸಮಾರೋಪ ಸಮಾರಂಭ ಸಂಜೆ ನಡೆಯಲಿದ್ದು ಈ ಸಂಧರ್ಭದಲ್ಲಿ ವಿಜೇತರಿಗೆ ಬಹುಮಾನದ ಜತೆಗೆ ನಗದು ಬಹುಮಾನ ಕೂಡ ವಿತರಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ನಮ್ಮ ಲಯನ್ಸ್ ಕ್ಲಬ್ ಕ್ರೀಡೆಯ ಜತೆಯಲ್ಲಿ ವರ್ಷಂಪ್ರತಿ ಹಲವಾರು ಸಾಮಾಜಿಕ ಕಾರ್ಯಕ್ರಮ ಗಳನ್ನು ನಡೆಸುತ್ತಾ ಬರುತ್ತಿದ್ದು ಮುಖ್ಯವಾಗಿ ಆರ್ಥಿಕ ದುರ್ಬಲ ಕುಟುಂಬದ ವಿಧ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ, ಸಹಾಯ.*HIV positive ವ್ಯಕ್ತಿಗಳ ಪುನರ್ವಸತಿ ಕೇಂದ್ರಗಳು, ವೃದ್ಧಾಶ್ರಮಗಳು ಮತ್ತು ಅನಾಥಶ್ರಮಗಳಿಗೆ ಸಹಕಾರ ನೀಡುತ್ತಿದ್ದು ಜೊತೆಗೆ ಭಿನ್ನ ಶ್ರೇಣಿಯ ಕುಟುಂಬಗಳ ಚೇತನಕ್ಕೆ ಆರ್ಥಿಕ ನೆರವು.ಅರ್ಹ ಕುಟುಂಬಗಳಿಗೆ ಮನೆ ನಿರ್ಮಾಣ.ಕ್ಯಾನ್ಸ‌ರ್ ಪೀಡಿತರಿಗೆ ಮತ್ತು ಕುಟುಂಬಕ್ಕೆ ಸಹಾಯ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

‘ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಯೋಗದೊಂದಿಗೆ 17,000 ಕ್ಕೂ ಅಧಿಕ ವಿಧ್ಯಾರ್ಥಿಗಳನ್ನು ಒಳಗೊಂಡಂತೆ ಜಾಗತಿಕ ತಾಪಮಾನ ವೈಜ್ಞಾನಿಕ ಅರಿವು ಕಾರ್ಯಕ್ರಮದ ಆಯೋಜಿಸಿದ್ದು,ಕ್ರೀಡಾ ಕಾರ್ಯಕ್ರಮದ ಭಾಗವಾಗಿ ಕಳೆದ 30 ವರ್ಷಗಳಿಂದ ಅನಾಥ ಮಕ್ಕಳ ಒಲಿಂಪಿಕ್ಸ್, ವಿಶೇಷ ಚೇತನರಿಗೆ ಒಲಿಂಪಿಕ್ಸ್, ಜಿಲ್ಲಾ, ರಾಜ್ಯ, ಹಾಗೂ ರಾಷ್ಟ್ರ ಮಟ್ಟದಲ್ಲಿ ಪವ‌ರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಗಳು, ಅಂಧರಿಗೆ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದ್ದೇವೆಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಲೆಸ್ಲಿ ಡಿಸೋಜ,ನವೀನ್ ಚಂದ್ರ ಸುವರ್ಣ, ಓಸಾಲ್ಡ್ ಡಿಕುನ್ಹ,ಸಿರೀಲ್ ಜೀವನ್,ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular