Thursday, March 12, 2026
Flats for sale
Homeಜಿಲ್ಲೆಮಂಗಳೂರು : ಫುಟ್ಬಾಲ್ ಆಟದಲ್ಲಿ ಕಿರಿಕ್​ ವಿದ್ಯಾರ್ಥಿಗಳನ್ನು ಅಪಹರಿಸಿ ಅರೆಬೆತ್ತಲೆಗೊಳಿಸಿ ಹಲ್ಲೆ,ವಿಡಿಯೋ ವೈರಲ್..!!

ಮಂಗಳೂರು : ಫುಟ್ಬಾಲ್ ಆಟದಲ್ಲಿ ಕಿರಿಕ್​ ವಿದ್ಯಾರ್ಥಿಗಳನ್ನು ಅಪಹರಿಸಿ ಅರೆಬೆತ್ತಲೆಗೊಳಿಸಿ ಹಲ್ಲೆ,ವಿಡಿಯೋ ವೈರಲ್..!!

ಮಂಗಳೂರು: ಫುಟ್ಬಾಲ್ ಆಟದಲ್ಲಿ ಕಿರಿಕ್ ನಡೆದ ಹಿನ್ನೆಲೆ ವಿದ್ಯಾರ್ಥಿಗಳನ್ನು ಕಿಡ್ನಾಪ್ ಮಾಡಿ ಯದ್ವಾತದ್ವಾ ಹಲ್ಲೆನಡೆಸಿದ ಘಟನೆ ಮಂಗಳೂರು ನಗರದ ಮಹಾಕಾಳಿ ಪಡ್ಪು ಬಳಿ ಸೋಮವಾರ ತಡರಾತ್ರಿ ನಡೆದಿದೆ.

ಮಂಗಳೂರಿನ ಯೆನಪೊಯ ಮತ್ತು ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು ಮಹಮ್ಮದ್ ಶುರೈ,ಮಹಮ್ಮದ್ ಅಫ್ರಾನ್,ಇಬ್ರಾಹಿಂ ಖಲೀಲ್,ಮತ್ತು ಮಹಮ್ಮದ್ ಜನ್ಮದ್ ಎಂಬ ವಿದ್ಯಾರ್ಥಿಗಳಿಗೆ ಯದ್ವಾತದ್ವಾ ಹೊಡೆದು ಸಿಗರೇಟ್ ನಿಂದ ಸುಟ್ಟು ದಿಯಾನ್,ಅನ್ನೈ,ತಸ್ಮಿನ್,ಸಲ್ಮಾನ್, ಅನಾಸ್ ಎಂಬ ಆರೋಪಿಗಳಿಂದ ಹಲ್ಲೆ ನಡೆಸಲಾಗಿದೆ .

ಮಂಗಳೂರು ನಗರದ ಮೂರು ಕಡೆ ಕರೆದುಕೊಂಡು ಹೋಗಿ ಅರೆಬೆತ್ತಲು ಗೊಳಿಸಿ ಬಸ್ಕಿ ಹೊಡೆಸಿ ಕ್ಷಮೆ ಕೇಳುವಂತೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಮಾಡಿದ್ದಾರೆ .ಹಲ್ಲೆ ಮಾಡಿದ ಇಬ್ಬರು ವಿದ್ಯಾರ್ಥಿಗಳ ಬಂಧನವಾಗಿದ್ದು ಇನ್ನಿತರರ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಘಟನೆ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಮಾತನಾಡಿ, ಆಗಸ್ಟ್ 14 ರಂದು ನಗರದ ನೆಹರು ಮೈದಾನದಲ್ಲಿ ಫುಟ್ಬಾಲ್ ಪಂದ್ಯ ನಡೆದಿತ್ತು. ಯೆನೆಪೋಯ ಪುಟ್ಬಾಲ್ ತಂಡ ಹಾಗೂ ಅಲೋಶಿಯಸ್ ತಂಡದ ಮಧ್ಯೆ ಪಂದ್ಯ ನಡೆದಿತ್ತು. ಪಂದ್ಯದಲ್ಲಿ ಯೆನೆಪೋಯ ತಂಡ ಜಯಗಳಿಸಿತ್ತು.

ಈ ವಿಚಾರದಲ್ಲಿ ಆಗಸ್ಟ್ 14ರಂದೇ ಎರಡು ತಂಡದ ನಡುವೆ ಗಲಾಟೆ ಪ್ರಾರಂಭವಾಗಿತ್ತು. ಸೋಮವಾರ (ಆ.19)ರ ಸಂಜೆ ಯೆನೆಪೋಯ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು, ಮಾತಾ ಸಂಸ್ಥೆಯ ಓರ್ವ ವಿದ್ಯಾರ್ಥಿಯನ್ನು ದಿಯಾನ್, ತಸ್ಲಿಮ್, ಸಲ್ಮಾನ್ ಹಾಗೂ ಇತರ ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳ ಗುಂಪು ಅಪಹರಿಸಿತ್ತು.

ನಂತರ ಮಹಾಕಾಳಿ ಪಡ್ಪು ಭಾಗಕ್ಕೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸುವ ಸಂದರ್ಭದಲ್ಲಿ ಮೊಬೈಲ್​ನಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ. ಸದ್ಯ ಅಪ್ರಾಪ್ತ ವಿದ್ಯಾರ್ಥಿ ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular