Thursday, March 12, 2026
Flats for sale
Homeಜಿಲ್ಲೆಮಂಗಳೂರು ; ಪ್ರೀತಿಸುತ್ತಿದ್ದ ಯುವತಿಯನ್ನು ನೋಡಲು ಬಂದವನನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ..!

ಮಂಗಳೂರು ; ಪ್ರೀತಿಸುತ್ತಿದ್ದ ಯುವತಿಯನ್ನು ನೋಡಲು ಬಂದವನನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ..!

ಮಂಗಳೂರು ; ತಾನು ಪ್ರೀತಿಸುತ್ತಿದ್ದ ಯುವತಿಯನ್ನು ನೋಡಿಕೊಂಡು ಹೋಗಲು ಬಂದಿದ್ದ ಯುವಕನನ್ನು ತಂಡವೊಂದು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗ ಥಳಿಸಿದ ವಿಡಿಯೋ ವೈರಲ್ ಆಗಿದೆ.

ಹಲ್ಲೆಗೊಳಗಾದ ಯುವಕನನ್ನು ಮುಸ್ತಫಾ ಎಂದು ತಿಳಿದುಬಂದಿದೆ.

ಬಂಟ್ವಾಳ ಸಮೀಪದ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ನೈತಿಕ ಪೋಲಿಸ್ ಗಿರಿ ನಡೆದ ಘಟನೆ ಬೆಳಕಿಗೆ ಬಂದಿದೆ.

ಹಲ್ಲೆಗೊಳಗಾದ ಮಹಮ್ಮದ್ ಮುಸ್ತಫಾ ನೀಡಿದ ದೂರಿನಂತೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಘಟನೆಗೆ ಸಂಬಂದಿಸಿದಂತೆ ಗ್ರಾಮಾಂತರ ಪೋಲಿಸರು ಅರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮುಸ್ತಫಾ ನನ್ನು ಕಂಬವೊಂದಕ್ಕೆ ಕಟ್ಟಿಹಾಕಿ ಹಿಗ್ಗಾ ಮುಗ್ಗಾ ಥಳಿಸಿದ ಬಳಿಕ ರಕ್ತಸೋರುವ ವೀಡಿಯೋ ವೈರಲ್ ಆಗಿದ್ದು ತಾಲಿಬಾನ್ ಸಂಸ್ಕೃತಿಯ ಲಕ್ಷಣಗಳು ಕಾಣುತ್ತಿವೆ. ಸ್ಥಳೀಯ ನಿವಾಸಿಗಳಾದ ಮಹಮ್ಮದ್ ಸಫ್ವಾನ್ ,ಮಹಮ್ಮದ್ ರಿಜ್ವಾನ್,ಇರ್ಫಾನ್,ಶಾಕೀರ್,ಅನೀಶ್,ನಾಸೀರ್ ,ಸೇರಿ ಹಲವರನ್ನು ಬಂದಿಸಿದ್ದು ಪ್ರಕರಣದ ತನಿಖೆ ನಡೆತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular