Sunday, December 14, 2025
Flats for sale
Homeಜಿಲ್ಲೆಮಂಗಳೂರು ; ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ - ಸಂಚು ರೂಪಿಸಿದ ಪಿಎಫ್ಐ ಕಛೇರಿ NIA...

ಮಂಗಳೂರು ; ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ – ಸಂಚು ರೂಪಿಸಿದ ಪಿಎಫ್ಐ ಕಛೇರಿ NIA ವಶಕ್ಕೆ.

ಮಂಗಳೂರು ; ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಸಂಚು ರೂಪಿಸಲು ಸಭೆ‌ನಡೆಸಲಾಗಿದ್ದ ಪಿಎಫ್ಐ ಕಛೇರಿಯನ್ನು NIA ತನ್ನ ವಶಕ್ಕೆ ಪಡೆದುಕೊಂಡಿದೆ. ಭಯೋತ್ಪಾದಕ ಚಟುವಟಿಕೆಗೆ ಈ ಕಛೇರಿಯನ್ನು ಬಳಸಲಾಗುತ್ತಿತ್ತು ಎಂದು ಖಚಿತಪಡಿಸಿದ ಬಳಿಕ PFI ಕಚೇರಿ ಸಂಪೂರ್ಣ NIA ವಶಕ್ಕೆ ಪಡೆದುಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಗಾಂಧಿನಗರದಲ್ಲಿದ್ದ PFI ಕಚೇರಿಗೆ ಈ ಹಿಂದೆ NIA ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ‌ ನಡೆಸಿದ್ರು. ಬಳಿಕ ಕಛೇರಿಗೆ ಬೀಗ ಜಡಿದಿದ್ದ NIA ಕಛೇರಿಯನ್ನು ತನ್ನ ವಶದಲ್ಲೇ ಇರಿಸಿಕೊಂಡಿತ್ತು. ಅಲೆಟ್ಟಿ ರಸ್ತೆಯ ತಾಹಿರಾ ಕಾಂಪ್ಲೆಕ್ಸ್ ನ ಫಸ್ಟ್ ಫ್ಲೋರ್ ನಲ್ಲಿರುವ ಈ ಕಛೇರಿಯನ್ನು ಸಂಪೂರ್ಣ ವಶಪಡಿಸಿಕೊಂಡಿರುವುದಾಗಿ NIA ಈಗ ಅಧಿಕೃತ ನೋಟಿಸು ಹೊರಡಿಸಿದೆ. ಹಾಲ್ ಮಾಲೀಕರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೆ ಆರ್ಡರ್ ಕಾಪಿ ರವಾನೆ ಮಾಡಿದೆ. NIA ವಶದಲ್ಲಿರೋ ಆ ಜಾಗವನ್ನು ಪರಾಬಾರೆ ಮಾಡುವಂತಿಲ್ಲ.
ಬಾಡಿಗೆ, ಲೀಜ್ ಕೊಡುವಂತಿಲ್ಲ.ಅಲ್ಲಿರೋ ಯಾವುದೇ ಪ್ರಾಪರ್ಟಿ ಸಾಗಿಸೋದು ಅಥವಾ ನವೀಕರಣ ನಿಷೇದಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular