ಮಂಗಳೂರು ; ಬಿಜೆಪಿ ಯಾ ಯುವ ಮುಖಂಡ ಪ್ರವೀಣ್ ನೆಟ್ಟಾರ್ ರನ್ನು ದುಸ್ಕರ್ಮಿಗಳು ಅಟ್ಟಾಡಿಸಿ ಹತ್ಯೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿತ್ತು ಈ ಪ್ರಕರಣ ಸಂಬಂಧಿಸಿ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಎನ್ಐಎ ಬಂಧಿಸಿದೆ. ತಲೆ ಮರೆಸಿ ಪರಾರಿಯಾಗಿದ್ದ ನಾಲ್ಕನೇ ಆರೋಪಿ ಮುಸ್ತಫಾ ಪೈಚಾರ್ನ ಬಂಧನವಾಗಿದೆ.
ಪಿಎಫ್ಐ ಮುಖಂಡನಾದ ಮುಸ್ತಫಾ ಪೈಚಾರ್ ಸುಳ್ಯದ ಶಾಂತಿ ನಗರ ನಿವಾಸಿಯಾಗಿದ್ದು, ಪ್ರವೀಣ್ ಹತ್ಯೆ ಬಳಿಕ ತಲೆಮರೆಸಿಕೊಂಡ ಈತನನ್ನು ಹಾಸನದ ಸಕಲೇಶಪುರ ಬಳಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಅಡಗಿದ್ದು .NIA ಇನ್ಸ್ಪೆಕ್ಟರ್ ಷಣ್ಮುಗಂ ರವರು ಮುಸ್ತಫಾ ಪೈಚಾರ್ನ ಬಂಧಸಿದ್ದಾರೆ . ಆರೋಪಿಯನ್ನು ಅಧಿಕಾರಿಗಳು ಬೆಂಗಳೂರು ಎನ್.ಐ.ಎ ಕಚೇರಿಗೆಯತ್ತ ಕೊಂಡೊಯ್ದಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಆರೋಪಿ ಮುಸ್ತಫಾ ಪೈಚಾರ್ ತಲೆಮರೆಸಿಕೊಂಡಿದ್ದು ಹೀಗಾಗಿ ಆತನ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಅಧಿಕಾರಿಗಳು ಘೋಷಿಸಿದ್ದರು.ಕೊನೆಗೂ ಖತರ್ನಾಕ್ A4 ಆರೋಪಿ ಬಂಧನವಾಗಿದ್ದಾನೆ.