ಮಂಗಳೂರು ; ಶಿಕ್ಷಣ, ಕೃಷಿ, ಆರೋಗ್ಯ, ವಿದೇಶ ವ್ಯವಹಾರ, ಸಾರಿಗೆ, ರಕ್ಷಣೆ, ಸಿಂಧೂರ ಅಪರೇಷನ್, ವಿಜ್ಞಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆಗೈದ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ದಾಮೋದರ್‌ದಾಸ್ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಅವರ ಆರೋಗ್ಯ ಆಯಸ್ಸು ಹಾಗೂ ದೇಶದ ಅಭಿವೃದ್ಧಿ ಹಾಗೂ ರಕ್ಷಣೆಗೆ ಇನ್ನೂ ಶಕ್ತಿ ತುಂಬಲು ಶ್ರೀ ಚಂದ್ರಹಾಸ ಭಟ್ ಇರುವೈಲು ನೇತೃತ್ವದಲ್ಲಿ ಶ್ರೀ ನರೇಂದ್ರ ಮೋದಿ ಅಭಿಮಾನಿ ಬಳಗ ಮಂಗಳೂರು ವತಿಯಿಂದ 4 ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಇಂದು ವಜ್ರಕಾಯ ರಂಗಮಂದಿರ ಜೋಡುಕಟ್ಟೆ ಮರೋಳಿಯಲ್ಲಿ ನಡೆಯಿತು.


ವೇದಿಕೆಯಲ್ಲಿರುವ ಗಣ್ಯರನ್ನು ಅಶ್ವಿತ್ ಕೊಟ್ಟಾರಿಯವರು ಸ್ವಾಗತಿಸಿದರು.ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ ಧಾರ್ಮಿಕ ಮುಂದಾಳು ಎಚ್.ಕೆ ಪುರುಷೊತ್ತಮ್ ರವರು ಸ್ಪಷ್ಟ ಗುರಿಯಿಂದ ನರೇಂದ್ರ ಮೋದಿಯವರು ತನ್ನ ಗುರಿಯನ್ನು ತಲುಪಿದ್ದಾರೆ.15 ವರ್ಷ ಗುಜರಾತಿನ ಮುಖ್ಯಮಂತ್ರಿ ಯಾಗಿ 11 ವರ್ಷ ದೇಶದ ಪ್ರಧಾನ ಮತ್ರಿಯಾಗಿ 9 ಹೊಸ ಐಐಟಿ ಯನ್ನು ಸ್ಥಾಪನೆ ಮಾಡಿದ್ದು ಅದು ನರೇಂದ್ರ ಮೋದಿ,ಅವರು 70 ವರ್ಷಗಳಲ್ಲಿ ಆಗದ ಸಾಧನೆಯನ್ನು ಅವರು ಮಾಡಿದರು ಎಂದರು.ಅಯ್ಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಸ್ಥಾಪನೆ ಮಾಡಿದ್ದು ಒಂದು ಬಹು ದೊಡ್ಡ ಸಾಧನೆ ಎಂದಿ ಹೇಳಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಪ್ರಧಾನಿ ನರೇಂದ್ರ ಮೋದಿಯವರದ ನಡೆಯಲಿ ಎಂದು ಆಶಿಸಿದರು.
ಬಳಿಕ ಮಾತನಾಡಿ ಶಾಸಕ ವೇದವ್ಯಾಸ್ ಕಾಮತ್ ಈ ವಿಶೆಷ ಕಾರ್ಯಕ್ರಮ ವನ್ನು ಮಾಡಿದ ತ್ರೀಮೂರ್ತಿ ರತ್ನರನ್ನು ಶ್ಲಾಘಿಸಿದರು, ಈ ಮೂರು ಜನ ಪುಣ್ಯಾತ್ಮರ ಕಾರ್ಯದಿಂದ ದೇಶವೆ ಮೆಚ್ಚುವಂತಹ ಕೆಲಸ,ಇದಕ್ಕೆ ಕಾರಣವೆನೆಂದರೆ ಭಾರತದ ದೈವ ಶಕ್ತಿಗಳು ಕೂಡ,ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ಪ್ರತಿಯೋಂದು ಸರಕಾರದ ಸವಲತ್ತನ್ನು ನೇರವಾಗಿ ಜನರಿಗೆ ತಲುಪುವಂತೆ ಮಾಡಿದರು,ಇವತ್ತು ನಾವು ತಿನ್ನುವ 5 ಕೆ.ಜಿ ಅಕ್ಕಿ ಕೂಡ ನರೇಂದ್ರ ಮೋದಿಯವರ ಕೊಡುಗೆ,500 ವರ್ಷದಲ್ಲಿ ಆಗದಂತಹ ವ್ಯವಸ್ಥೆಯನ್ನು ರಾಮಮಂದಿರ ಕಟ್ಟುವ ಮೂಲಕ ನೆರವೇರಿಸಿದು ನಮ್ಮ ಪುಣ್ಯ, ತನ್ನ ತಾಯಿ ಚಿಕ್ಕಂದಿನಲ್ಲಿ ಕಷ್ಟಪಡುತ್ತಿರುವುದನ್ನು ನೆನೆದು ಅದರಂತೆಯೇ ದೇಶದಲ್ಲಿರು ತಾಯಾಂದಿರು ಕಷ್ಟಪಡದಂತೆ ಪ್ರತಿಯೊಬ್ಬರ ಮನೆಗೆ ಗ್ಯಾಸ್ ತಲುಪುವಂತೆ ಮಾಡಿದವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಆದರೆ ರಾಜ್ಯದಲ್ಲಿನ ಸರಕಾರ ಹಿಂದೂ ದಮನ ರೀತಿ ನಡೆಸಿತ್ತಿರಿವುದು ಖೇದಕರ ಎಂದರು.ಭೃಷ್ಟಚಾರ ರಹಿತ ಆಡಳಿತ ನಡೆಸಿದ ಎಮ್ಮೆ ನಮ್ಮ ದೇಶದ ಪ್ರಧಾನಿಯವರಿಗೆ ಸಲ್ಲುತ್ತದೆ ಎಂದರು.ನಮ್ಮ ದೇಶವನ್ನು ವಿಶ್ವ ದಲ್ಲೇ ತಲೆ ಎತ್ತುವಂತಹ ಕೆಲಸ ಮಾಡಿರುವುದು ನಮ್ಮ ಮೋದಿಯವರು ಎಂದರು.ಇಡೀ ದೇಶದ ಬಂದುಗಳಿಗೆ ಉಚಿತವಾಗಿ ಕೊರೊನ ಲಸಿಕೆ ಹಿಡಿದು ದೇಶವನ್ನು ಗಂಡಾಂತರದಿಂದ ತಪ್ಪಿಸಿದವರು ನರೇಂದ್ರ ಮೋದಿಯವರು . 100 ರೂಪಾಯಿ 4 ಬಂಗುಡೆ ಮೀನನ್ನು ಕೊಟ್ಟು ಒಂದು ಬಂಗುಡೆ ಹೆಚ್ಚು ಕೊಟ್ಟದಕ್ಕೆ ಧ್ಯಾಂಕ್ಸ್ ಹೇಳಿದವರು ಈ ಸಂದರ್ಭದಲ್ಲಿ ದೇಶಕ್ಕೆ ರಕ್ಷಾ ಕವಚದಂತೆ ಕೊರೊನ ಸಮಯದಲ್ಲಿ ನಮ್ಮನ್ನು ಬದುಕಿಸಿದ ಪ್ರಧಾನಿಯವರಿಗೆ ಧ್ಯಾಂಕ್ಸ್ ಹೇಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಠಲ್ ಶೆಣೈಯವರಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿ ಜಗದೀಶ್ .ಕೆ ಶೆಣವರವರು ವಹಿಸಿದರು. ವೇದಿಕೆಯಲ್ಲಿ ಎಚ್ .ಕೆ ಪುರುಷೋತ್ತಮ್, ಕಿಶೋರ್ ಕೊಟ್ಟಾರಿ, ಉದ್ಯಮಿ ಸಂದೇಶ್ ಶೆಟ್ಟಿ, ರಮೇಶ್ ಕಂಡೆಟ್ಟು,ಮೋಹನ್ ಪೂಜಾರಿ,ವಿಠಲ್ ಶೆಣೈ,ಪ್ರವೀಣ್ ಕುತ್ತಾರ್,ಪ್ರಶಾಂತ್ ಪೂಜಾರಿ,ವಿವೇಕ್ ಕೋಟ್ಯಾನ್ ಪುಚ್ಚರಬೆಟ್ಟು ,ರೂಪ ಶ್ರೀ ಪೂಜಾರಿ,ಸುಲಕ್ಷನ್ ರೈ,ಪ್ರವೀಣ್ ಉಪಸ್ಥಿತರಿದ್ದರು.