Monday, July 7, 2025
Flats for sale
Homeಜಿಲ್ಲೆಮಂಗಳೂರು ; ಪ್ರಜಾಪ್ರಭುತ್ವದ ಕಗ್ಗೊಲೆ - ಶರಣ್ ಪಂಪುವೆಲ್ ರವರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ...

ಮಂಗಳೂರು ; ಪ್ರಜಾಪ್ರಭುತ್ವದ ಕಗ್ಗೊಲೆ – ಶರಣ್ ಪಂಪುವೆಲ್ ರವರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ – ವಿಶ್ವ ಹಿಂದೂ ಪರಿಷದ್..!

ಮಂಗಳೂರು ; ಗೋ ಹತ್ಯೆ ಮಾಡಿ ಗೋವಿನ ರುಂಡವನ್ನು ಎಸೆದಿರುವ ಕೃತ್ಯವನ್ನು ಖಂಡಿಸಿ ಪತ್ರಿಕಾ ಹೇಳಿಕೆಗೆ ಶರಣ್ ಪಂಪವೆಲ್ ರವರ ಮೇಲೆ ಕೇಸು ದಾಖಲಿಸಿರುದನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ಖಂಡಿಸುತ್ತದೆ. ಕಳೆದ ಕೆಲವು ದಶಕಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದ್ದ ಗೋಕಳ್ಳತನ /ಗೋಹತ್ಯೆ / ಅಕ್ರಮ ಗೋಸಾಗಾಟದ ಹಿಂದೆ ವ್ಯವಸ್ಥಿತ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದ್ದು ಇಡೀ ಕರಾವಳಿಯ ಜನತೆಗೆ ತಿಳಿದಿರುವ ವಿಷಯ, ಆದರೆ ಯಾರದು ಒತ್ತಡಕ್ಕೆ ಮಣಿದು ಅಥವಾ ರಾಜಕೀಯ ತುಷ್ಟಿಕರಣಕ್ಕಾಗಿ ಆ ಹೇಳಿಕೆಯನ್ನು ಕಾರಣವಾಗಿಟ್ಟುಕೊಂಡು ಕೇಸು ದಾಖಲಿಸಿರುವುದು ಅತ್ಯಂತ ಖಂಡನೀಯ, ಇದರಿಂದ ಅಭಿವ್ಯಕ್ತ ಸ್ವಾತಂತ್ರ್ಯಕ್ಕೆ ದಕ್ಕೆಯಾವುದರ ಜೊತೆಗೆ, ಇದರಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ಆದುದರಿಂದ ತಕ್ಷಣ ಪೊಲೀಸ್ ಇಲಾಖೆ ಹಾಕಿರುವ ಕೇಸನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತೇವೆ.

ಶರಣ್ ಪಂಪವೆಲ್ ರವರಿಗೆ ಚಿಕ್ಕಮಗಳೂರು ಜಿಲ್ಲೆ ನಿರ್ಬಂಧ – ಆದೇಶ ಹಿಂಪಡೆಯಲು ಆಗ್ರಹ. ಸಂಘಟನಾ ಕಾರ್ಯಕ್ಕೆ ಮತ್ತು ಕಾರ್ಯಕ್ರಮ ದೃಷ್ಟಿಯಿಂದ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಚಿಕ್ಕಮಗಳೂರು ಪ್ರವಾಸಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು ಖಂಡನೀಯ, ಓಲೈಕೆ ರಾಜಕಾರಣಕೋಸ್ಕರ ಹಿಂದೂ ನಾಯಕರನ್ನು ಧಮನಿಸುವ ಕೃತ್ಯವನ್ನು ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರ ಮಾಡುತ್ತಿದ್ದು, ವಿಶ್ವ ಹಿಂದೂ ಪರಿಷದ್ ಖಂಡಿಸುತ್ತದೆ ಮತ್ತು ತಕ್ಷಣ ಈ ಆದೇಶವನ್ನು ಹಿಂದೆ ಪಡೆಯುವಂತೆ ಆಗ್ರಹಿಸುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಗೋರಕ್ಷಾ ಪ್ರಮುಖ್ ಸುನೀಲ್ ಕೆ ಆರ್ ಪ್ರಕಟಣೆಯಲ್ಲಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular