Tuesday, July 1, 2025
Flats for sale
Homeಜಿಲ್ಲೆಮಂಗಳೂರು : ಪೊಲೀಸ್ ಇಲಾಖೆ ರಾಜ್ಯ ಕಾಂಗ್ರೆಸ್ ಸರಕಾರದ ಕೈಗೊಂಬೆಯಾಗಿ ಕೆಲಸಮಾಡುತ್ತಿದ್ದು ರಾತ್ರಿ 3 ಗಂಟೆಗೆ...

ಮಂಗಳೂರು : ಪೊಲೀಸ್ ಇಲಾಖೆ ರಾಜ್ಯ ಕಾಂಗ್ರೆಸ್ ಸರಕಾರದ ಕೈಗೊಂಬೆಯಾಗಿ ಕೆಲಸಮಾಡುತ್ತಿದ್ದು ರಾತ್ರಿ 3 ಗಂಟೆಗೆ ಹಿಂದೂಗಳ ಮನೆಗೆ ನುಗ್ಗಿ ರಿವಾಲ್ವರ್ ತೋರಿಸಿ ಬೆದರಿಸುತ್ತಿರುವುದು ಖಂಡನೀಯ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ..!

ಮಂಗಳೂರು : ಬಿಜೆಪಿ ನಿಯೋಗ ಇಂದು ಮಂಗಳೂರಿಗೆ ಭೇಟಿನೀಡಿದ್ದು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲಿನ್ ಎಂಪಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಅದಕ್ಕಿಂತ ಮೊದಲು ಸಂಘನಿಕೇತನದಲ್ಲಿ ಕಾರ್ಯಕರ್ತರ ಜೊತೆ ಸಭೆನಡೆಸಿದ್ದು ಶಾಸಕ ಅರವಿಂದ್ ಬೆಲ್ಲದ್,ಛಲವಾದಿ ನಾರಾಯಣ ಸ್ವಾಮಿ ಹಾಗೂ ಇನ್ನಿತರ ರಾಜ್ಯ ನಾಯಕರು ಸಾಥ್ ನೀಡಿದ್ದರು. ಜಿಲ್ಲಾಧಿಕಾರಿಗಳ ಕಚೇರಿ ಪ್ರಜಾಸೌಧದಲ್ಲಿ ಬಿಜೆಪಿ ಧುರೀಣರು ಮತ್ತು ಅಧಿಕಾರಿಗಳ ನಡುವೆ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳ ಮೇಲೆ ಚರ್ಚೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿರುವ ಅಪರಾಧಿಕ ವಿದ್ಯಮಾನಗಳು, ಸ್ಥಳೀಯ ಬಿಜೆಪಿ ಮುಖಂಡರ ವಿರುದ್ಧ ಆಗಿರುವ ಎಫ್​​ಐಅರ್ ಮತ್ತು ಗಡೀಪಾರಿನ ಆದೇಶ ಮೊದಲಾದ ಸಂಗತಿಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಕಾನೂನು ಸುವ್ಯವಸ್ಥೆ ನಿರ್ವಹಣೆ ನೆಪದಲ್ಲಿ ಪೊಲೀಸರ ಮೂಲಕ ಗೂಂಡಾವರ್ತನೆ, ಗೂಂಡಾಗಿರಿ ನಡೆಸ್ತಾ ಇದೆ, ಸುಳ್ಯ, ಪುತ್ತೂರಿನ ಎಲ್ಲಿ ರಾತ್ರಿ 3 ಗಂಟೆಗೆ ಹೋಗಿ ಬಾಗಿಲು ತಟ್ಟುವಂಥದ್ದು, ಕಾರ್ಯಕರ್ತರು ಮನೆಯಲ್ಲಿ ಇಲ್ಲದೇ ಇದ್ರೆ ರಿವಾಲ್ವರ್ ತೋರಿಸಿ ಬೆದರಿಸುವುದು ನಡೆಯುತ್ತಿದೆ. ಕೆಲವು ತಿಂಗಳ ಹಿಂದೆ ಕೋಮು ನಿಗ್ರಹ ದಳ ಮಾಡಿದ್ದಾರೆ. ಆನಂತರ ಇಂತಹ ಪ್ರಕರಣ ಹೆಚ್ಚಾಗಿದೆ, ಹರಿಪ್ರಸಾದ್ ಸತ್ಯಶೋಧನಾ ಕಮಿಟಿ ಮಾಡಿದ್ದಾರೆ ಆದರೆ ಅದರ ಸ್ಪಷ್ಟತೆ ಅವರಿಗೇನೂ ಗೊತ್ತಿಲ್ಲವೆಂದರು.

ಕರಾವಳಿ ಬಿಜೆಪಿ – ಪರಿವಾರ ಸಂಘಟನೆ ಭದ್ರಕೋಟೆ ಇಲ್ಲಿ ಕೋಮುಗಲಭೆ ನಡೆಯಲು ಕಾಂಗ್ರೆಸ್ ನೀತಿಗಳೇ ಕಾರಣವೆಂದರು. ಯೋಗ್ಯತೆಗೆ ಸುಹಾಸ್ ಹತ್ಯೆಯಲ್ಲಿ ಬುರ್ಖಾಧಾರಿಗಳು ವಾಹನ ಅಡ್ಡಗಟ್ಟಿದ್ದನ್ನು ನೋಡಿದ್ದೀರಿ, ಆದರೆ ಅವರ ಬಂಧನವಾಗಿಲ್ಲ.ಹಿಂದು ಕಾರ್ಯಕರ್ತರ ಬಂಧನ ಅತಿ ಬೇಗ ಆಗುತ್ತದೆ, ಕಾಂಗ್ರೆಸ್ ಒತ್ತಡಕ್ಕೆ ಮಣಿದು ಪೊಲೀಸರು ವರ್ತನೆ ಮಾಡುತ್ತಿದ್ದಾರೆ. ಎನ್ಐಎ ಕೊಡಬೇಕೆಂದು ಕುಟುಂಬಸ್ಥರು ಬಂದರೂ ಸರಕಾರ ಸಪೋರ್ಟ್ ಮಾಡಲಿಲ್ಲಈ ಪ್ರಕರಣದಲ್ಲಿ ವಿದೇಶಿ ಬಂಡವಾಳವಿದ್ದು ನಿಷೇಧಿತ ಪಿ,ಎಫ್ .ಐ ಸಂಘಟನೆಯ ಕೈವಾಡವಿರುವುದರಿಂದ ನಾವೇ ಕೇಂದ್ರ ಸರಕಾರಕ್ಕೆ ಒತ್ತಡ ಹಾಕಿದ್ದೇವೆಂದು ಹೇಳಿದರು.

ಬೆಂಗಳೂರಿನಲ್ಲಿ ರಾಜ್ಯಪಾಲರನ್ನು ಭೇಟಿಯಾಗಿದ್ದೆವು, ಕಮಿಷನರ್, ಎಸ್ಪಿ ಭೇಟಿ ಮಾಡಿದಾಗಲೂ ಫೇವರ್ ಬಯಸುತ್ತಿಲ್ಲ. ಆಡಳಿತ ಪಕ್ಷಕ್ಕೆ ಮಣಿದು ಕೆಲಸ ಮಾಡಿದ್ದರಿಂದ ಆಡಳಿತದ ತಪ್ಪಿನಿಂದಾಗಿ ಐದು ಜನ ಪೊಲೀಸ್ ಅಧಿಕಾರಿಗಳ ತಲೆದಂಡ ಆಯ್ತು, ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಕೋದು ಬಿಡಿ, ರಾತ್ರಿ ವೇಳೆ ಹೋಗಿ ಬೆದರಿಸುವ ಷಡ್ಯಂತ್ರ ಮಾಡಬೇಡಿ, 8೦೦ ಕ್ಕೂ ಹೆಚ್ಚು ಪ್ರಕರಣ ರೇಪ್ ಕೇಸ್ ರಾಜ್ಯದಲ್ಲಿ ನಡೆದಿದೆ ಪೊಲೀಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ ಎಂದರು. ದ.ಕ.ದಲ್ಲಿ ಅಲ್ಪಸಂಖ್ಯಾತರ ಖುಷಿಗಾಗಿ ಹಿಂದುಗಳನ್ನು ಅಪಮಾನ ಮಾಡೋದು, ಎಲ್ಲ ಕೇಸುಗಳನ್ನು ಹಿಂದು ಮುಸ್ಲಿಂ ಬಣ್ಣ ಹಚ್ಚುವುದು ಕಾಂಗ್ರೆಸ್ ಸರಕಾರದ ಚಾಳಿಯಾಗಿದೆ ಕಾನೂನು ಸುವ್ಯವಸ್ಥೆ ಹಾಳಾದ್ರೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕು, ಕಲ್ಲಡ್ಕ ಭಟ್ ಕೋಣೆ ಒಳಗಡೆ ಮಾತಾಡಿದ್ದನ್ನು ನೋಟಿಸ್ ಮಾಡ್ತಾರೆ, ಐವಾನ್ ಡಿಸೋಜ ಬಾಂಗ್ಲಾ ರೀತಿ ರಾಜ್ಯಪಾಲರಿಗೆ ನುಗ್ಗಿ ಹೊಡೀತೇವೆ ಎಂದಾಗ ಯಾಕೆ ಪೊಲೀಸ್ ಕೇಸು ದಾಖಲಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು. ಮುಂದೆ ಆ ರೀತಿ ಆಗಲ್ಲ ಅಂತ ಭರವಸೆ ನೀಡಿದ್ದಾರೆ , ರಾಜಕೀಯ ಆಡಳಿತ ಫೇಲ್ ಆದಾಗ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಾರೆ, ಬೆಂಗಳೂರು, ಮಂಗಳೂರಿನಲ್ಲಿ ಆಗಿದ್ದು ಒಂದೇ, ಅಧಿಕಾರಿಗಳನ್ನು ಬದಲಾವಣೆ ಮಾಡಿದಾರೆ, ಕಾಯಿಲೆ ಏನಂತ ಪತ್ತೆ ಮಾಡಿದ್ರೆ ಔಷಧಿ ಹಾಕಬಹುದು, ಲವ್ ಜಿಹಾದ್, ಗೋಹತ್ಯೆ, ಡ್ರಗ್, ಮರಳು ಮಟ್ಟ ಹಾಕಿದ್ರೆ ಪರಿಸ್ಥಿತಿ ಸರಿಹೋಗತ್ತೆ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದರು.

ಬಳಿಕ ಮಾತನಾಡಿ ವಿಪಕ್ಷ ನಾಯಕ ಆರ್. ಅಶೋಕ್ ಪೊಲೀಸ್ ಸ್ಟೇಶನ್ ಇಲ್ಲಿ ಕಾಂಗ್ರೆಸಿನ ಸ್ಟೇಶನ್ ಆಗಿಬಿಟ್ಡಿದೆ,ತಮ್ಮ ತಾಳಕ್ಕೆ ಕುಣಿಯಬೇಕಂತ ಮಾಡಿದಾರೆ, ಯಾವ ಕಾನೂನು ಪುಸ್ತಕದಲ್ಲಿ ಬಾಗಿಲು ತಟ್ಟಿ ಫೋಟೊ ತೆಗಿಯೋಕೆ ಯಾವ ಕಾನೂನು ಇದೆಯೆಂದು ಕೇಳಿದ್ವಿ. ಪಾಕಿಸ್ತಾನದವರಿದ್ದರೆ ಕಳಿಸಿ ಅಂದ್ರೆ ಆಗಲ್ಲ ಅಂತಾರೆ, ಭಾರತ್ ಮಾತಾಕಿ ಜೈ, ಪಾಕ್ ಜಿಂದಾಬಾದ್ ಅಂದ್ರೂ ಒಂದೇ ಕಾನೂನು. ದೇಶ ವಿರೋಧಿಗಳು, ದೇಶ ಪ್ರೇಮಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗಬೇಡಿ ಅಂದೀವಿ ಎಂದರು. ಬಿಜೆಪಿ ಕಾರ್ಯಕರ್ತರಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ.ರೌಡಿ ಶೀಟರ್ ರಾಜಕೀಯದಲ್ಲೂ ಇದ್ದಾರೆ ರಾಹುಲ್, ಡಿಕೆಶಿ ಎಷ್ಟು ಬೇಲ್ ಇದೆ, ರೌಡಿ ಅಂತ ಹೇಳಕ್ಕೇನು, ಕೋರ್ಟ್ ತೀರ್ಮಾನ ಮಾಡಬೇಕು ಅವರ ದೃಷ್ಟಿಯಲ್ಲಿ ಇಲ್ಲದೆ ಇಂಪಾರ್ಟೆಂಟ್ ಇಲ್ಲದಿರಬಹುದು, ಹಿಂದುಗಳ ದೃಷ್ಟಿಯಿಂದ ತನಿಖೆ ಮಾಡಬೇಕಂತಿದೆ, ಅವರಿಗೆ ಬ್ರದರ್ಸ್ ಬಗ್ಗೆ ಬಹಳ ಪ್ರೀತಿ ಅಂತಹ ಕಾಂಗ್ರೆಸ್ ಸರಕಾರ ಎಂದರು. ಒಂದೂವರೆ ಸಾವಿರ ಕಾರ್ಯಕರ್ತರ ಜೊತೆಗೆ ಮಾತಾಡಿದೇವೆ, ಏನು ಮಾಡಬೇಕೆಂದು ನಿರ್ಧರಿಸುತ್ತೇವೆ ಮುಂದಿನ ನಿರ್ಧಾರದ ಬಗ್ಗೆಯೂ ತಿಳಿಸುತ್ತೇವೆಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular