ಮಂಗಳೂರು : ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಪುತ್ತೂರಿನ ಸ್ಥಳೀಯ ಬಿಜೆಪಿ ನಾಯಕರು ಮತ್ತು ಅವರ ಬೆಂಬಲಿಗರಿಂದ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಮೊದಲನೆಯದಾಗಿ ಈ ಬಾರಿಯ ಟಿಕೆಟ್ ಮಿಸ್ ಆಗಿ ತಲೆಕೆಡಿಸಿಕೊಂಡಿದ್ದ ನಳಿನ್ ಕುಮಾರ್ ಕಟೀಲ್ ಟೀಂನಿಂದ ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ದೊರೆತಿದೆ. ಪುತ್ತೂರು ಬಿಜೆಪಿ ಕಚೇರಿಗೆ ಜಿಲ್ಲಾಧ್ಯಕ್ಷ ರವರನ್ನು ಕರೆಯಿಸಿ ನೀವು ಯಾರನ್ನು ಕೇಳಿ ಪುತ್ತಿಲನನ್ನು ಬಿಜೆಪಿ ಗೆ ಸೇರಿಸಿದಿರಿ,ಅವನೇನು ಸಾಚಾನಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಜಿಲ್ಲಾಧ್ಯಕ್ಷರನ್ನು ಒಳಗಡೆ ಹಾಕಿ ಧಮ್ಕಿ ನೀಡಿದಾರೆಂಬ ಮಾಹಿತಿ ಬಹಿರಂಗವಾಗಿದೆ.
ಬಿಜೆಪಿ ನಾಯಕರು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿ ಪಕ್ಷಕ್ಕೆ ವಾಪಸು ತರಲು ಪುತ್ತಿಲ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು ನಿನ್ನೆ ಬಿಜೆಪಿ ಕಚೇರಿಯಲ್ಲಿ ಪುತ್ತಿಲ ಅವರ ಪಕ್ಷ ಸೇರ್ಪಡೆಯಾಗಬೇಕಿತ್ತು ಆದರೆ ಅಲ್ಲಿ ನಡೆದದ್ದೇ ಬೇರೆ.ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಸತೀಶ್ ಕುಂಪಲ ಅವರು ನೇರವಾಗಿ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದು ಭಾರೀ ಕುತೂಹಲ ಮೂಡಿಸಿತ್ತು.ಕುಂಪಲ ಮಾತುಕತೆಯಂತೆ ಪುತ್ತಿಲ ಮತ್ತು 300 ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಚೇರಿಗೆ ತೆರಳಲು ಸಜ್ಜಾಗಿ ನಿಂತಿದ್ದರು.ಆದರೆ ಮಾಧ್ಯಮದವರು ಒಳ ಪ್ರವೇಶ ಮಾಡದಂತೆ ಕಚೇರಿಗೆ ಬಾಗಿಲು ಲಾಕ್ ಮಾಡಿದ್ದು ಸತೀಶ್ ಕುಂಪಲರ ಮೇಲೆ ನಳಿನ್ ಕುಮಾರ್ ಕಟೀಲ್ ಅಂಡ್ ಟೀಮ್ ಬಾಗಿಲು ಹಾಕಿ ಧಮ್ಕಿ ನೀಡಿದ್ದಾರೆ.
ಸತೀಶ್ ಕುಂಪುಲ, ರಾಧಕೃಷ್ಣ ಆಳ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರುವಾರ, ಸುಲೋಚನ ಭಟ್, ಪ್ರೇಮಾನಂದ್ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರ್ ಇನ್ನಿತರರು ಸಭೆಯಲ್ಲಿ ಭಾಗಿಯಾಗಿದ್ದು ಆದರೆ ಪುತ್ತಿಲರನ್ನು ಪಕ್ಷಕ್ಕೆ ಸೇರ್ಪಡೆ ಮಾಡಬಾರದೆಂದು ಪಟ್ಟು ಹಿಡಿದಿರುವ ಕಟೀಲ್ ಟೀಂ, ಮಠಂದೂರ್ ಟೀಂ, ಕಿಶೋರ್ ಬೊಟ್ಯಾಡಿ ಟೀಂ ಜಿಲ್ಲಾಧ್ಯಕ್ಷರಿಗೇ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಕಚೇರಿಯಲ್ಲಿ ಗದ್ದಲ ನಡೆದಿದ್ದು ಅಶೋಕ್ ಶೆಣೈ ಎಂಬವರು ಜಿಲ್ಲಾಧ್ಯಕ್ಷರಿಗೆ ಕುರ್ಚಿ ಎಸೆದಿದ್ದು, ಕಟೀಲ್ ತಂಡದಲ್ಲಿ ಗುರುತಿಸಿಕೊಂಡಿರುವ ಅಜಿತ್ ಹೊಸಮಣೆ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆಯನ್ನು ಹಾಕಿದ್ದಾರೆ.ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ನಗರ ಅಧ್ಯಕ್ಷ ಜಗನ್ನಿವಾಸ ರಾವ್ ಪರೋಕ್ಷ ಬೆಂಬಲ ಸೂಚಿಸಿದ್ದರು. ಇದು ಸ್ಥಳೀಯ ಬಿಜೆಪಿ ಮುಖಂಡರ ಕೋಪಕ್ಕೂ ಕಾರಣವಾಗಿತ್ತು. ನಿನ್ನೆ ನಡೆದ ಸಭೆಯಗೆ ಜಗನ್ನಿವಾಸ ರಾವ್ ಆಗಮಿಸಿದರೆ ಮೈಗೆ ಕೈಹಾಕುವ ಪ್ಲಾನ್ ನಡೆದಿತ್ತು ಎಂಬ ವಿಚಾರವೂ ಮೂಲಗಳಿಂದ ತಿಳಿದುಬಂದಿದೆ.
ಜಿಲ್ಲಾಧ್ಯಕ್ಷ ಸತೀಶ್ ಕುಂಪಲರನ್ನು ಕಚೇರಿಯಿಂದ ಹೊರ ಹೋಗಬೇಕಾದರೆ ತಾವು ಹೇಳಿದಂತೆ ಹೇಳಿಕೆ ನೀಡಬೇಕು ಎಂದು ಎಚ್ಚರಿಕೆ ನೀಡಿ ಧಮ್ಕಿ ಹಾಕಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಅದರಂತೆ ಸತೀಶ್ ಕುಂಪಲ ಅವರು ಮಾಧ್ಯಮದ ಮುಂದೆ ಬಂದು, ಪುತ್ತಿಲ ಪಕ್ಷ ಸೇರ್ಪಡೆ ಮಾಧ್ಯಮ ವರದಿಷ್ಟೇ ಎಂದು ಹೇಳಿ ಉಲ್ಟಾ ಹೊಡೆದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒಪ್ಪಿದರೂ ಪುತ್ತಿಲ ಪಕ್ಷ ಪ್ರವೇಶಕ್ಕೆ ಸ್ಥಳೀಯ ನಾಯಕರಿಂದ ವಿರೋಧ ವ್ಯಕ್ತವಾಗುತ್ತಿದ್ದು .ಅಲ್ಲದೆ, ಪುತ್ತಿಲ ಮತ್ತು ಬಿಜೆಪಿ ನಡುವಿನ ಗಲಾಟೆ ಸಂದರ್ಭದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣವನ್ನು ವಾಪಸ್ ಪಡೆದ ಬಳಿಕವೇ ಪುತ್ತಿಲರನ್ನು ಪಕ್ಷಕ್ಕೆ ಸೇರಿಸುವಂತೆ ಪಟ್ಟು ಹಿಡಿಯಲಾಗಿದೆ.ಈ ನಡುವೆ ನಳಿನ್ ಕುಮಾರ್ ಕಟೀಲ್ ಅಂಡ್ ಟೀಮ್ ಗೆ ಪುತ್ತಿಲ ಪಕ್ಷಕ್ಕೆ ಬರುವುದು ಇಷ್ಟವಿಲ್ಲ ಎಂಬುದು ಈಗ ತಿಳಿದಿದೆ.ಒಟ್ಟಿನಲ್ಲಿ ತಲೆಗೆ ಹಾಕಿದ ನೀರು ಕಾಲಿಗೆ ಬರಲೇಬೇಕು ಎಂಬ ಗಾದೆ ಮಾತು ನಳಿನ್ ಕುಮಾರ್ ಕಟೀಲ್ ಪರಿಸ್ಥಿತಿಯಾಗಿದೆ ,ಜಿಲ್ಲೆಯ ಹಲವು ನಾಯಕರನ್ನು ಮೂಲೆಗುಂಪು ಮಾಡಿದಕ್ಕೆ ಈಗ ಮಾಡಿದುಣ್ಣೋ ಮಾರಾಯ ಎಂಬಂತೆ ನಳಿನ್ ಪರಿಸ್ಥಿತಿಯಾಗಿದ್ದು ಆಶ್ಯಸ್ಪ್ಪದವೆಂದು ಹಿರಿಯ ಬಿಜೆಪಿ ನಾಯಕರ ಮಾತು.