Monday, March 16, 2026
Flats for sale
Homeಜಿಲ್ಲೆಮಂಗಳೂರು : ಪುಟ್ಟ ಮಗು,ಪತ್ನಿಯನ್ನು ಹತ್ಯೆಗೈದು ರೈಲಿನಡಿಗೆ ಬಿದ್ದು ಪತಿ ಸಾವು : ಮುಲ್ಕಿ ಬಳಿ...

ಮಂಗಳೂರು : ಪುಟ್ಟ ಮಗು,ಪತ್ನಿಯನ್ನು ಹತ್ಯೆಗೈದು ರೈಲಿನಡಿಗೆ ಬಿದ್ದು ಪತಿ ಸಾವು : ಮುಲ್ಕಿ ಬಳಿ ಹೃದಯ ವಿದ್ರಾಹಕ ಘಟನೆ..!

ಮಂಗಳೂರು : ಏನು ತಿಳಿಯದ ಪುಟ್ಟ ಮಗು ಹಾಗೂ ಪತ್ನಿಯನ್ನು ಹತ್ಯೆಗೈದು ಪತಿಯು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾಹಕ ಘಟನೆ ಮೂಲ್ಕಿ ಸಮೀಪದ ಪಕ್ಷಿಕೆರೆಯಲ್ಲಿ ನಡೆದಿದೆ.

ಮೃತರನ್ನು ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32) ಪ್ರಿಯಾಂಕ (28) ,ನಾಲ್ಕು ವರ್ಷದ ಹೃದಯ್ (4) ಎಂದು ತಿಳಿದುಬಂದಿದೆ. ಮೂಲ್ಕಿ ಬಳಿಯ ಬೆಳ್ಳಾಯರು ಸಮೀಪ ಶುಕ್ರವಾರ ಒಬ್ಬ ವ್ಯಕ್ತಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿದ್ದನು ,ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಮನೆಯವರಿಗೆ ತಿಳಿಸುವ ವೇಳೆ ಕಾರ್ತಿಕ್ ಅವರ ಪತ್ನಿ ಮತ್ತು ಮಗು ಅವರನ್ನು ಹತ್ಯೆಗೈದಿರುವುದು ತಿಳಿದುಬಂದಿದೆ.

ಇನ್ನೂ ತಂದೆ ತಾಯಿ ಕೂಡ ಕಾರ್ತಿಕ್ ಅವರ ನಿವಾಸದಲ್ಲಿದ್ದು ಕುಟುಂಬ ಮನಸ್ತಾಪದ ಹಿನ್ನೆಲೆ ಪೊಲೀಸರು ಅಡ್ರೆಸ್ ಟ್ರೇಸ್ ಮಾಡಿ ಬಂದು ಮನೆಗೆ ತಿಳಿಸುವ ವೇಳೆ ಬಾಗಿಲು ಒಡೆದು ಒಳನುಗ್ಗಿದಾಗ ಇಬ್ಬರು ಮರುಪಟ್ಟು ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಕೌಟುಂಬಿಕ ಸಮಸ್ಯೆ ಕಾರಣ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ,ಮುಲ್ಕಿ ಪೊಲೀಸರು ಸ್ಥಳಕ್ಕೆ ತೆರಳಿ ಭೇಟಿನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular