ಮಂಗಳೂರು ; ಇತ್ತೀಚೆಗೆ ಮಂಗಳೂರು ನಗರದಲ್ಲಿನ ಖಾಸಗಿ ಬಸ್‌ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಹಾಗೂ ಇತರ ಜನಸಂದಣಿ ಇರುವ ಪ್ರದೇಶಗಳಲ್ಲಿ ಪಿಕ್ ಪಾಕೆಟ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕೃತ್ಯಗಳಿಂದ ಬಸ್ ನೌಕರರ ಮೇಲೆ ಪ್ರಯಾಣಿಕರಿಂದ ಅನುಮಾನ ಮೂಡುವಂತಾದ ಅಸಹಜ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಗಂಭೀರ ಗಮನ ಸೆಳೆಯಲು ಹಾಗೂ ಸಾರ್ವಜನಿಕರ ಹಾಗೂ ಬಸ್ ನೌಕರರ ಭದ್ರತೆಯ ಉದ್ದೇಶದಿಂದ ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ ಇಂದು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಭೇಟಿ ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದೆ.
ಸಂಘದ ಪ್ರತಿನಿಧಿಗಳ ತಂಡವು ಕಳ್ಳತನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಬಲಪಡಿಸುವುದು, ಪೊಲೀಸರ ಪೇಟ್ರೋಲಿಂಗ್ ಹೆಚ್ಚಿಸುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಹ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ.
ಸಂಘದ ಪರವಾಗಿ ಮನವಿ ಸಲ್ಲಿಸಿದವರು:
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಉಸ್ಮಾನ್ ಅಲ್ತಾಫ್, ಜೊತೆ ಕಾರ್ಯದರ್ಶಿ ಡೆರಿಕ್ ಕ್ಯೂವೆಲ್ಲೋ, ರವೀಂದ್ರ ರವಿ, ಸದಸ್ಯರಾದ ರಫೀಕ್, ಕಿರಣ್ ಡಿಸೋಜಾ, ವಿಜಯ್, ರೋಹನ್ ಉಪಸ್ಥಿತರಿದ್ದರು…