ಮಂಗಳೂರು ; ಪಾಂಡೇಶ್ವರ ಮಹಿಳಾ ಠಾಣೆಯ ASI ರಾಜೇಶ್ ಹೆಗ್ಢೆಯವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕಾಸರಗೋಡಿನ ಚಿತ್ತಾರಿ ನಿವಾಸಿಯಾಗಿದ್ದ ಅವರು ಉರ್ವಸ್ಟೋರ್ ಬಳಿ ಮನೆಮಾಡಿ ನೆಲೆಸಿದ್ದರು,1993 ಬ್ಯಾಚ್ ನಲ್ಲಿ ಪೋಲಿಸ್ ಇಲಾಖೆಗೆ ಸೆರ್ಪಡೆಗೊಂಡ ಅವರು ವಿಟ್ಲ ಠಾಣೆಯಲ್ಲಿ ಮೊದಲ ಕರ್ತವ್ಯ ವನ್ನು ನೆರೆವೆರಿಸಿದ್ದರು. ಮಧ್ಯಾಹ್ನ ಊಟಕ್ಕೆ ಮನೆಗೆ ಹಿಂತಿರುಗಿದ್ದ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದರು ಎಂದು ಮೂಲಗಳು ತಿಳಿಸಿವೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು ಸ್ವಲ್ಪ ಸಮಯದ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ತೀವ್ರ ಹೃದಯಾಘಾತದಿಂದಾಗಿ ಎಂದು ವರದಿಯಾಗಿದೆ.
ಜನಸ್ನೇಹಿ ಪೋಲಿಸರಾಗಿದ್ದ ಅವರು 32 ವರ್ಷಗಳಿಂದ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು,ಅವರು ಮಡದಿ ,ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಳಿದ್ದಾರೆ.