Friday, February 27, 2026
Flats for sale
Homeಜಿಲ್ಲೆಮಂಗಳೂರು : ಪತ್ನಿಯ ಸೀಮಂತಕ್ಕೆ ಪತಿಯ ವಿಶೇಷ ಉಡುಗೊರೆ,ಹೆಲಿಕಾಪ್ಟರ್ ನಲ್ಲಿ ಹೂವಿನ ಸುರಿಮಳೆ.

ಮಂಗಳೂರು : ಪತ್ನಿಯ ಸೀಮಂತಕ್ಕೆ ಪತಿಯ ವಿಶೇಷ ಉಡುಗೊರೆ,ಹೆಲಿಕಾಪ್ಟರ್ ನಲ್ಲಿ ಹೂವಿನ ಸುರಿಮಳೆ.

ಮಂಗಳೂರು : ಏಳೇಳು ಜನ್ಮದ ಬಂಧನ ಪತಿ ಪತ್ನಿಯರದು ಎಂಬುದು ಮಾತು.ಅದರಂತೆ ಆತನಿಗೆ ಪತ್ನಿ ಅಂದ್ರೆ ಪತಿಗೆ ಇಷ್ಟ. ಹೀಗಾಗಿ ತನ್ನ‌ ಪತ್ನಿಯನ್ನು ಖುಷಿಪಡಿಸಲು ಪತಿ ಏನೆಲ್ಲಾ ಸಾಹಸವನ್ನು ಮಾಡ್ತಾನೆ. ಹೌದು. ಇಲ್ಲೋರ್ವ ವ್ಯಕ್ತಿ ತನ್ನ ಪತ್ನಿ ಗರ್ಭೀಣಿ ಆಗಿದ್ದಕ್ಕೆ ಸೀಮಂತ ಕಾರ್ಯಕ್ರಮಕ್ಕೆ ಸರ್ ಪ್ರೈಸ್ ನೀಡಲು ಹೊಸ ಐಡಿಯಾ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.

ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಪತ್ನಿಯ ಸೀಮಂತಕ್ಕೆ ಖ್ಯಾತ ಉದ್ಯಮಿ ಪ್ರಕಾಶ್ ಅರ್ಪಿತಾ ಅವರು ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆಗೈದು ಸರ್ ಪ್ರೈಸ್ ನೀಡಿದ್ದಾರೆ. ಇದು ಮಂಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ಪತಿಯೋರ್ವ ಪತ್ನಿ ಸೀಮಂತಕ್ಕೆ ಹೆಲಿಕಾಪ್ಟರ್
ಮೂಲಕ ಪತ್ನಿಗೆ ಉಡುಗೊರೆ ನೀಡಿದಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular