ಮಂಗಳೂರು : ಮಂಗಳೂರಿನ ಕಂಕನಾಡಿಯ ಪಂಪ್ ವೆಲ್ ನಲ್ಲಿರುವ ಗಣೇಶಪುರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಮಹಾಗಣಪತಿ ಸೇವಾ ಪ್ರತಿಷ್ಠಾನ ದ ವತಿಯಿಂದ 53ನೇ ವರ್ಷದ ಶ್ರೀಗಣೇಶೋತ್ಸವ ಅಂಗವಾಗಿ ಸುಮುಖ ಸಭಾಭವನದಲ್ಲಿ ಮಹಾಗಣಪತಿ ದೇವರ ಪ್ರತಿಷ್ಠಾನೆ ಮಾಡಲಾಗಿದೆ.





ಗಣೇಶಪುರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕಳೆದ ಎರಡು ದಿನಗಳಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾನೆ ಮಾಡಲಾಗಿದ್ದು, ಇಂದು ಮುಂಜಾನೆ ಪ್ರಧಾನ ಆರ್ಚಕರಾದ ವೇದ ಮೂರ್ತಿ ವಿನೇಕಾನಂದ ನೀಗ್ಲೇ ಅವರ ನೇತೃತ್ವದಲ್ಲಿ ಗಣಹೋಮ ನೆರವೇರಿತು.
ಈ ವೇಳೆ ಅಧ್ಯಕ್ಷರಾದ ಅಶೋಕ್ ಎಸ್ .ಪಂಡಿತ್ ಮಾತನಾಡಿ,ಕಳೆದ ಎರಡು ದಿನಗಳಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾನೆ ಮಾಡಲಾಗಿದ್ದು, ಭಜನೆ, ಧಾರ್ಮಿಕ ಸಭಾ ಕಾರ್ಯಕ್ರಮ, ರಂಗಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದಿದೆ ಎಂದು ಹೇಳಿದರು.
ತದ ಬಳಿಕ ಮುಖಂಡರಾದ ಶರಣ್ ಪಂಪ್ ವೆಲ್ ಮಾತನಾಡಿ, ಗುರುವಾರ ಸಂಜೆ ಶ್ರೀ ಮಹಾಗಣಪತಿ ದೇವರಿಗೆ ಮಹಾಪೂಜೆಯೊಂದಿಗೆ ದೇವರ ಶೋಭಾಯಾತ್ರೆಯೂ ಪ್ರತಿಷ್ಟಿತ ಸ್ಥಳದಿಂದವ ಹೊರಟು ಪಂಪ್ ವೆಲ್, ಕಂಕನಾಡಿ ಹಳೆ ಮಾರ್ಗವಾಗಿ, ಕಂಕನಾಡಿ ಸರ್ಕಲ್ ನಲ್ಲಿ ತಿರುಗಿ ಬೈಪಾಸ್ ರಸ್ತೆಯಾಗಿ , ಪಂಪ್ ವೆಲ್ ,ಗರೋಡಿ ಹಾಗೂ ನಾಗುರಿಯಾಗಿ ಪಡೀಲ್ ನಲ್ಲಿ ಬೈರಾಡಿಕೆರೆಯಲ್ಲಿ ಶ್ರೀ ದೇವರ ವಿಗ್ರಹವನ್ನು ಜಲಸ್ತಂಭನಗೊಳಿಸಲಾಗುವುದು ಎಂದು ಹೇಳಿದರು.
ಈ ವೇಳೆ ಗೌರವಾಧ್ಯಕ್ಷ ಎಂ.ಮಂಜುನಾಥ ಪ್ರಭು, ಉಪಾಧ್ಯಕ್ಷರಾದ ಪದ್ಮನಾಭ ನಾಗುರಿ,ಪ್ರಧಾನ ಕಾರ್ಯದರ್ಶಿ ವಿನೇತ್ ಚಂದ್ರ ,ಕೋಶಾಧಿಕಾರಿ ರಾಜೇಶ್ ಶೇಖ ,ಜತೆ ಕಾರ್ಯದರ್ಶಿ ಪ್ರಶಾಂತ್ ಪಂಡಿತ್, ಪ್ರಮೋದ್ ಸುವರ್ಣ, ಶ್ರೀ ಮಹಾಗಣಪತಿ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎನ್.ಅಶೋಕನ್,ನಿಕಟಪೂರ್ವ ಕಾಪೋರೇಟರ್ ರಾದ ಸಂದೀಪ್ ಗರೋಡಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.