ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಅಂದರೆ ಒಂದು ದೈವಗಳ ನಾಡು ಅಂತ ಹೇಳಬಹುದು,ಇಲ್ಲಿ ನಂಬಿದವರನ್ನು ದೈವ ಯಾವತ್ತೂ ಕೈಬಿಡಲಿಲ್ಲ ಎಂಬುದು 100 ಕ್ಕೂ 100 ರಷ್ಟು ಸತ್ಯ ಸಂಗತಿ.ಇಲ್ಲಿ ಸ್ವಾಮಿ ಕೊರಗಜ್ಜನಿಂದ ಹಿಡಿದು ಪಂಜುರ್ಲಿ ,ಕಲ್ಲುರ್ಟಿ ,ಕಲ್ಕುಡ ,ಗುಳಿಗಜ್ಜ ,ಕೋರ್ದಬ್ಬು ,ಮಂತ್ರದೇವತೆ ,ಸತ್ಯದೇವತೆ ರಾಜಂದೈವ ಅಂತಃಹ ಹಲವಾರು ದೈವಗಳನ್ನು ಸಾವಿರಾರು ವರುಷಗಳಿಂದ ನಂಬಿಕೊಂಡು ಬಂದಂದು ನಿಜವಾದ ಸಂಗತಿ.
ಕಾಂತಾರ ಚಿತ್ರ ಸೂಪರ್ ಡೂಪರ್ ಹಿಟ್ ಆದ ನಂತರ ರಿಷಬ್ ಶೆಟ್ಟಿ ಅವರು ಕಾಂತಾರ ಭಾಗ 1 ಹೊಸ ಸಿನಿಮಾಕ್ಕೆ ರೆಡಿ ಆಗಿದ್ದಾರೆ. ದೈವದ ವಿಚಾರ ಇಟ್ಟುಕೊಂಡು ಮಾಡಿದ್ದ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದರ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದರ ಮಧ್ಯೆ ರಿಷಬ್ ಶೆಟ್ಟಿ ಅವರು ಮಂಗಳೂರಿಗೆ ಭೇಟಿ ನೀಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಕೆಲಸಗಳು ನಿರ್ವಿಘ್ನವಾಗಿ ನಡೆಯಲು ರಿಷಬ್ ಶೆಟ್ಟಿ ಮತ್ತೆ ದೈವದ ಮೊರೆ ಹೋಗಿದ್ದಾರೆ.
ಮಂಗಳೂರಿನ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ರಿಷಬ್ ಶೆಟ್ಟಿಯನ್ನು ವರ್ಷಾವಧಿ ಕೊಲೋತ್ಸವಕ್ಕೆ ಆಹ್ವಾನಿಸಿದ್ದರು. ಈ ಹಿಂದೆ ರಿಷಬ್ ಶೆಟ್ಟಿ ವಜ್ರದೇಹಿ ಸ್ವಾಮೀಜಿ ಭೇಟಿಯಾದ ಸಂದರ್ಭದಲ್ಲಿ ವಜ್ರದೇಹಿ ಮಠದ ದೈವ ಕೋಲದಲ್ಲಿ ಭಾಗಿಯಾಗುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ವಜ್ರದೇಹಿ ಮಠದ ದೈವ ಕೋಲ ವೀಕ್ಷಿಸುವ ಇಚ್ಛೆಯನ್ನು ಹೇಳಿಕೊಂಡಿದ್ದರು. ಅದರಿಂದ ವಜ್ರದೇಹಿ ಮಠದ ಕೋಲನೋಡಲು ರಿಷಬ್ ಶೆಟ್ಟಿ ಬಂದಿದ್ದರು ಈ ಸಂದರ್ಭದಲ್ಲಿ ದೈವವು ರಿಷಬ್ ಶೆಟ್ಟಿಯವರಿಗೆ ‘ಧೈರ್ಯ ಕಳೆದುಕೊಳ್ಳದಂತೆ, ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡಿ, ಹಿಂದೆ ನಾನಿದ್ದೇನೆ’ ಎಂದು ದೈವ ಸೂಚನೆ ನೀಡಿದೆ.
‘ಕಾಂತಾರ’ ಶೂಟಿಂಗ್ ಸಂದರ್ಭದಲ್ಲೂ ದೈವದ ಅಭಯ ಚಿತ್ರಕ್ಕೆ ಸಿಕ್ಕಿತ್ತು. ಈಗ ‘ಕಾಂತಾರ: ಚಾಪ್ಟರ್ 1’ ಸಂದರ್ಭದಲ್ಲೂ ಧನಾತ್ಮಕ ಪ್ರಕ್ರಿಯೆ ಸಿಕ್ಕಿರುವುದರಿಂದ ರಿಷಬ್ ಶೆಟ್ಟಿ ಖುಷಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.