ಮಂಗಳೂರು : ನಿಷೇಧಿತ ಎಂಡಿಎಂಎ ಮಾದಕ ದ್ರವ್ಯವನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಡಿಪು ಬಳಿಯ ಮೂಳೂರಿನಲ್ಲಿ ಬಂಧಿಸಲಾಗಿದೆ.
ಬಂಟ್ವಾಳದ ಕೊಳ್ನಾಡಿನ ಅಬ್ದುಲ್ ರಹಿಮಾನ್ (42) ಮತ್ತು ಬೆಳ್ತಂಗಡಿಯ ಇಳಂತಿಲದ ಮೊಹಮ್ಮದ್ ಜಿಯಾದ್ (22) ಬಂಧಿತರು. ಆರೋಪಿಗಳಿಂದ 1.75 ಲಕ್ಷ ಮೌಲ್ಯದ 35 ಗ್ರಾಂ ಎಂಡಿಎಂಎ ಹಾಗೂ ಆಲ್ಟೋ ಕಾರು, ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ತೂಕದ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.