ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಾಪಕರು ಮತ್ತು ನೌಕರರ ವೇತನ ಮತ್ತು ಪಿಂಚಣಿ ನೀಡದೆ ಸರಕಾರದಿಂದ ಬಂದ ನಿಧಿಯನ್ನು ಬೇರೆಡೆ ನಿರ್ವಹಿಸಿರುವುದರಿಂದ ಕಳೆದ ೩೦-೪೦ ವರ್ಷಗಳಿಂದ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾನಿಲಯದ ಏಳಿಗೆಗಾಗಿ ದುಡಿದ ನಿವೃತ್ತ ಪ್ರಾಧ್ಯಾಪಕ ,ಶಿಕ್ಷಕೇತರ ಉದ್ಯೋಗಿಗಳ ಪಿಂಚಣಿ ಮೊತ್ತ ಇನ್ನಿತರ ಭತ್ಯೆ ಮತ್ತು ಸೌಲಭಗಳನ್ನು ಈ ಕೂಡಲೇ ನೀಡಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷ ದಿನೇಶ್ ಕುಮಾರ ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಿವೃತ್ತಿ ಹೊಂದಿದವರ ಜೀವನ ಬಹಳಕಷ್ಟಕರವಾಗಿದ್ದು ೩೦-೪೦ ವರ್ಷಗಳಿಂದ ದುಡಿದ ಹಣ ವೈದ್ಯಕೀಯ ವೆಚ್ಚ ಹಾಗೂ ಇನ್ನಿತರ ವೆಚ್ಚಗಳಿಗೆ ಅಗತ್ಯವಾಗಿದ್ದು ಹಾಗೆಯೆ ಇನ್ನು ಮುಂದೆ ನಿವೃತ್ತಿ ಹೊಂದುವ ನೌಕರರಿಗೆ ತೊಂದರೆಯಾಗಲಿದೆ ಎಂದು ಹೇಳಿದ್ದು ವಿಶ್ವವಿದ್ಯಾನಿಲಯದಲ್ಲಿ ಹಣಕಾಸಿನ ತೊಂದರೆಯಿದೆ ಎಂದು ಉತ್ತರನೀಡುವುದು ಸಮಂಜಸವಲ್ಲ ಇದು ಶಿಕ್ಷಕರ ಬದುಕಿನ ಪ್ರಶ್ನೆ ನಿವೃತ್ತಿ
ಹೊಂದುವಾಗ ಸಿಬ್ಬಂದಿಗಳಿಗೆ ಸಿಗಬೇಕಾದ ಮೊತ್ತವನ್ನು ನೀಡುವುದು ಸರಕಾರದ ಆದ್ಯ ಕರ್ತವ್ಯವೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದರೆಂದು ತಿಳಿಸಿದ್ದಾರೆ.
ಮಂಗಳ ಅಲ್ಯುಮಿನೈ ಎಸೋಸಿಯೇಶನ್ ಈಗಾಗಲೇ ವಿಶ್ವವಿದ್ಯಾನಿಲಯದ ಕುಲಪತಿಗಳನ್ನು ಕರ್ನಾಟಕ ಸರಕಾರದ ಸಂಬಂಧಪಟ್ಟ ಇಲಾಖೆ,ಅಧಿಕರಿ ,ಸಚಿವರು ಹಾಗೂ ವಿಧಾನ ಸಭಾ ಅಧ್ಯಕ್ಷರನ್ನು ಸಂಪರ್ಕಿಸಿದ್ದು ಅಲ್ಲದೆ ರಾಜ್ಯದ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೂ ಮನವಿಯನ್ನು ಕಳುಹಿಸಿ ಭೇಟಿಗೆ ಸಮಯವನ್ನು ಕೋರಲಾಗಿದೆಂದು ತಿಳಿಸಿದ್ದಾರೆ.ಸುಮಾರು ೨೦ ಸಾವಿರಕ್ಕೂ ಅಧಿಕ ಸದಸ್ಯರನ್ನೊಳಗೊಂಡ ಸಂಘಟನೆಯಾಗಿದ್ದು ಕಾಲೇಜು ಪ್ರಾಧ್ಯಾಪಕರಿಗೆ ತರಬೇತಿ ,ವಿಧ್ಯರ್ಥಿಗಳಿಗೆ ಉದ್ಯೋಗಮೇಳ ,ಇಂಡಸ್ಟ್ರಿ -ಯೂನಿವರ್ಸಿಟಿ ಇಂಟರ್ಫೇಸ್ ಕಾರ್ಯಕರಮಗಳನ್ನು ಹಮ್ಮಿಕೊಳ್ಳುತಾ ಬಂದಿದೆ ಎಂದು ತಿಳಿಸಿದ್ದಾರೆ .ಒಟ್ಟಿನಲ್ಲಿ ಈ ಬಾಕಿಯಿರುವ ಮೊತ್ತವನ್ನು ಆದಷ್ಟು ಬೇಗ ಬಿಡುಗಡೆಮಾಡುವಂತೆ ಇಲ್ಲದಿದ್ದರೆ ಮುಂದೆ ಕಾನೂನು ಹೋರಾಟ ಮಾಡುತ್ತೇವೆಂದು ಮಾಧ್ಯಮದ ಮೂಲಕ ಮನವಿಮಾಡಿದ್ದಾರೆ .
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ,ಸಂಘಟನಾ ಕಾರ್ಯದರ್ಶಿ ಡಾ .ಉಮ್ಮಪ್ಪ ಪೂಜಾರಿ,ಆಡಳಿತ ಮಂಡಳಿ ಸದಸ್ಯ ವೇಣು ಶರ್ಮ ,ಪ್ರೊಫೆಸರ್ ಜಯಪ್ಪ ,ಡಾ.ಪ್ರಭಾಕರ್ ನೀರ್ಮಾರ್ಗ ಮತ್ತಿತರರು ಉಅಪಸ್ಥಿತರಿದ್ದರು.