ಮಂಗಳೂರು : ಪತ್ನಿ ಹಾಗೂ ಮಗಳಿಂದ ಬರ್ಭರವಾಗಿ ಕೊಲೆಯಾದ ಕರ್ನಾಟಕದ ನಿವೃತ್ತ ಡಿಜಿ ಐಜಿಪಿ ಪ್ರಕರಣವನ್ನು ಎನ್ ಐ ಎ ತನಿಖೆಗೆ ವಹಿಸಬೇಕು ಎಂದು ನಿವೃತ್ತ ಡಿವೈಎಸ್ ಪಿ ಅನುಪಮ ಶೆಣೈ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಕರಣದಲ್ಲಿ ಪಿಎಫ್ ಐ ಕೈವಾಡ ಇರುವುದಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಕೈವಾಡ ಕೂಡಾ ಇದ್ದು ಮೃತ ಪತ್ನಿಯನ್ನು ಇದರಲ್ಲಿ ಆರೋಪಿಯಾಗಿ ಸಿಕ್ಕಿ ಹಾಕಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಡಿಜಿ ಐಜಿಪಿಯಾಗಿದ್ದ ಓ ಪ್ರಕಾಶ್ ಅವರು ಪಿಎಫ್ ಐ ನಂಟು ಹೊಂದಿದ್ದು, ಇಲಾಖೆಯಲ್ಲಿ ಅವರನ್ನು ನೇಮಕ ಮಾಡಲು ಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.
ಪಲ್ಲವಿ ಮತ್ತು ಮಗಳು ಕೃತಿಯ ಮಾನಸಿಕ ಆರೋಗ್ಯದ ವಿಚಾರವಾಗಿಯೂ ಹಲವು ಚರ್ಚೆಗಳು ಆಗುತ್ತಿದ್ದು ಆದರೆ ಇದೆಲ್ಲವೂ ಸಿಎಂ ಮತ್ತು ಗೃಹ ಸಚಿವರ ಅಣತಿಯಂತೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಕೊಲೆ ನಡೆದ ಸಮಯದ ಯಾವುದೇ ಸಿಸಿ ಟಿವಿ ಪೂಟೇಜ್ ಆಗಲಿ ಪ್ರತ್ಯಕ್ಷ ಸಾಕ್ಷಿಗಳಾಗಲಿ ಇದರಲ್ಲಿ ಇಲ್ಲವಾಗಿದ್ದು , ಕೇವಲ ಪಲ್ಲವಿ ಅವರ ಹೇಳಿಕೆಯಲ್ಲೇ ಅವರನ್ನು ಕೊಲೆಗಾರ್ತಿಯನ್ನಾಗಿ ಮಾಡಲಾಗಿದೆ. ತನ್ನ ಮಗಳು ಭಾಗಿಯಾಗಿಲ್ಲ ಎಂದು ಅವರು ಹೇಳಿದರು ಮಗಳನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾನೇ ಕೊಲೆ ಮಾಡಿದ್ದಾಗಿ ಎಂಬ ಪಲ್ಲವಿಯವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಪೊಲೀಸರು ಅದೇ ಮಗಳು ಪ್ರಕರಣದಲ್ಲಿ ಇಲ್ಲ ಎಂಬುದನ್ನು ಪರಿಗಣಿಸುತ್ತಿಲ್ಲ. ಇದೆಲ್ಲವೂ ಕೂಡಾ ಅನುಮಾನಕ್ಕೆ ಕಾರಣವಾಗಿದ್ದು ಕೊಲೆಯ ಹಿಂದೆ ಸಿ.ಎಂ ಸಿದ್ದರಾಮಯ್ಯ,ಯು.ಟಿ ಖದರ್ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ರವರ ಕೈವಾಡ ಕೂಡಾ ಇದೆ ಎಂದು ಅನುಪಮ ಶೆಣೈ ಆರೋಪಿಸಿದ್ದಾರೆ.