ಮಂಗಳೂರು ; ಎಲ್ಲಾ ಸರಿ ಅನ್ನೋ ರಾಜೇಂದ್ರ ಕುಮಾರ್ ಬ್ಯಾಂಕ್ ಗೆ RBI ದಂಡ ವಿಧಿಸಿದೆ. ಅದೂ ಕೂಡ ಕಾನೂನು ಉಲ್ಲಂಘಿಸಿ ನಿರ್ದೇಶಕರುಗಳಿಗೆ ಸಾಲ ನೀಡಿದ ವಿಚಾರವಾಗ ಈ ದಂಡ ವಿಧಿಸಲಾಗಿದೆ. ಹಾಗಿದ್ರೆ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಸಣ್ಣದೊಂದು ಅವ್ಯವಹಾರ ನಡೆದಿದೆ ಅನ್ನೋದನ್ನು RBI ಗಮನಕ್ಕೆ ಬಂದಿದೆ ಅಂತಾಯ್ತು. ಇನ್ನು ,RBI ಗಮನಕ್ಕೆ ಬಾರದ ಅದೆಷ್ಟು ಅವ್ಯವಹಾರಗಳು ಇದೆಯೋ ಗೊತ್ತಿಲ್ಲ.
ಸದ್ಯಕ್ಕೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಚ್ 26, 2025ರಂದು ಹೊರಡಿಸಿದ ಆದೇಶದ ಮೂಲಕ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ (The South Canara District Central Co-operative Bank Ltd.), ಕರ್ನಾಟಕದ ಮೇಲೆ ₹5.00 ಲಕ್ಷದ ದಂಡವನ್ನು ವಿಧಿಸಿದೆ. ಈ ದಂಡವನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 (Banking Regulation Act, 1949) ನ ಪ್ರಸ್ತಾಪಿತ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಿಧಿಸಲಾಗಿದೆ.
RBI ದಂಡ ವಿಧಿಸಲು ಕಾರಣಗಳು..?
RBI ನ ಪ್ರಕಾರ, ಈ ಬ್ಯಾಂಕ್ ನಿಯಮಿತ ನಿಯಮಗಳನ್ನು ಮೀರಿ ತನ್ನ ನಿರ್ದೇಶಕರಿಗೆ ಸಂಬಂಧಿಸಿದ ಸಾಲಗಳನ್ನು ಮಂಜೂರು ಮಾಡಿದೆ. ಈ ಪ್ರಕ್ರಿಯೆಯು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ರ ಸೆಕ್ಷನ್ 20 ಮತ್ತು 56ನ ನಿಯಮಗಳನ್ನು ಉಲ್ಲಂಘಿಸುತ್ತದೆ. ಹೀಗಾಗಿ RBI ಸೆಕ್ಷನ್ 47A(1)(c), 46(4)(i), ಮತ್ತು 56 ಅನುಸಾರ ಈ ದಂಡವನ್ನು ವಿಧಿಸಿದೆ.
ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ (NABARD) ಮಾರ್ಚ್ 31, 2023 ರಂದು ಈ ಬ್ಯಾಂಕಿನ ಹಣಕಾಸು ಸ್ಥಿತಿಯ ಪರಿಶೀಲನೆ ನಡೆಸಿತು. ಈ ಪರಿಶೀಲನೆಯ ಸಂದರ್ಭದಲ್ಲಿ ನಿಯಮ ಉಲ್ಲಂಘನೆಯ ಬಗ್ಗೆ ಸಾಕ್ಷ್ಯಗಳು ಲಭಿಸಿದವು. ಬ್ಯಾಂಕ್ ನ ಪ್ರತಿಕ್ರಿಯೆಗಳನ್ನು ಪರಿಶೀಲಿಸಿದ ನಂತರ RBI ಬ್ಯಾಂಕ್ ನ ಮೇಲೆ ದಂಡ ವಿಧಿಸುವ ನಿರ್ಧಾರಕ್ಕೆ ಬಂದಿದೆ RBI ಈ ದಂಡ ಹೊರತುಪಡಿಸಿ, ಬ್ಯಾಂಕ್ ಮೇಲಿನ ಇತರ ಕಾನೂನು ಕ್ರಮಗಳಿಗೂ ಅವಕಾಶ ಇರುತ್ತದೆ. ಬ್ಯಾಂಕ್ ನಿಯಮಾನುಸಾರ ಕೆಲಸ ಮಾಡದೇ ಇದ್ದರೆ, RBI ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು.
ಬ್ಯಾಂಕ್ ತನ್ನ ನಿರ್ದೇಶಕರಿಗೆ ಸಂಬಂಧಿತ ಸಾಲಗಳನ್ನು ನೀಡಿದ ಕಾರಣ ಇದು ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದೆ. NABARD ನ ಪರಿಶೀಲನೆಯ ಆಧಾರದ ಮೇಲೆ RBI ಈ ಕ್ರಮ ಕೈಗೊಂಡಿದೆ
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ರ ಸೆಕ್ಷನ್ 20 ಮತ್ತು 56 ಪ್ರಕಾರ
ಯಾವುದೇ ವಾಣಿಜ್ಯ ಬ್ಯಾಂಕ್ ತನ್ನ ನಿರ್ದೇಶಕರಿಗೆ ಅಥವಾ ಅವರ ಸಂಬಂಧಿತ ಸಂಸ್ಥೆಗಳಿಗೆ ಯಾವುದೇ ರೀತಿಯ ಸಾಲ ಅಥವಾ ಹಣಕಾಸು ಸಹಾಯವನ್ನು ನೀಡಲು ಸಾಧ್ಯವಿಲ್ಲ. ಇದು ಬ್ಯಾಂಕ್ ನ ಆಡಳಿತ ಮಂಡಳಿಯ ಮೇಲೆ ಆರ್ಥಿಕ ಪ್ರಭಾವ ಬೀರುವ ಸಾಧ್ಯತೆ ಇರುವ ವ್ಯಕ್ತಿಗಳು ತಮ್ಮ ಹಿತಾಸಕ್ತಿಗೆ ಬ್ಯಾಂಕನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಮಾಡಲಾಗಿದೆ ಈ ನಿಯಮವು ಪರಸ್ಪರ ಹಿತಾಸಕ್ತಿಯ ಮುನ್ಸೂಚನೆ (Conflict of Interest) ನಿವಾರಿಸಲು ಮತ್ತು ಗ್ರಾಹಕರ ಠೇವಣಿಗಳ ಸುರಕ್ಷತೆ ಕಾಪಾಡಲು ರೂಪಿಸಲಾಗಿದೆ.
ಸೆಕ್ಷನ್ 56 – ಸಹಕಾರಿ ಬ್ಯಾಂಕ್ ಗಳಿಗೆ ಅನ್ವಯಿಸುವ ವಿಶೇಷ ನಿಯಮಗಳು (Special provisions for co-operative banks) ಆಗಿದ್ದು ಇದರ ಪ್ರಕಾರ ಸಹಕಾರಿ ಬ್ಯಾಂಕ್‌ಗಳಿಗಾಗಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಕೆಲವು ನಿರ್ದಿಷ್ಟ ನಿಯಮಗಳನ್ನು ಬದಲಾಯಿಸಿ ಅಳವಡಿಸಲಾಗಿದೆ.
ಸಹಕಾರಿ ಬ್ಯಾಂಕ್‌ಗಳು ಸಹ ವಾಣಿಜ್ಯ ಬ್ಯಾಂಕ್‌ಗಳಂತೆ ನಿರ್ವಹಿಸಬೇಕು, ಆದರೆ ಸಹಕಾರಿ ಮೂಲಭೂತ ತತ್ವಗಳನ್ನೂ ಅನುಸರಿಸಬೇಕು ಎಂಬ ದೃಷ್ಟಿಯಿಂದ ರೂಪಿಸಲಾಗಿದೆ.ಈ ವಿಭಾಗದಲ್ಲಿ ಸೆಕ್ಷನ್ 20 ಕೂಡ ಅನ್ವಯವಾಗುತ್ತದೆ, ಅಂದರೆ ಸಹಕಾರಿ ಬ್ಯಾಂಕ್‌ಗಳು ತಮ್ಮ ನಿರ್ದೇಶಕರಿಗೆ ಅಥವಾ ಅವರ ಸಂಬಂಧಿತ ವ್ಯಕ್ತಿಗಳಿಗೆ ಸಾಲ ನೀಡಬಾರದು.
RBI ಯು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮೇಲೆ ದಂಡ ವಿಧಿಸಿರುವುದು ಸೆಕ್ಷನ್ 20 ಮತ್ತು 56 ನ ಉಲ್ಲಂಘನೆಯ ಕಾರಣದಿಂದಾಗಿದೆ.ಬ್ಯಾಂಕ್ ನಿಯಮ ವಿರೋಧವಾಗಿ ತನ್ನ ನಿರ್ದೇಶಕರಿಗೆ ಸಂಬಂಧಿಸಿದ ಸಾಲಗಳನ್ನು ಮಂಜೂರು ಮಾಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸೆಕ್ಷನ್ 20 ಯನ್ನು ಸಹಕಾರಿ ಬ್ಯಾಂಕ್‌ಗಳಿಗೂ ಸೆಕ್ಷನ್ 56 ಮೂಲಕ ಅನ್ವಯಿಸಲಾಗಿರುವುದರಿಂದ, RBI ಈ ನಿರ್ಧಾರ ತೆಗೆದುಕೊಂಡಿದೆ.ಈ ನಿಯಮಗಳ ಉಲ್ಲಂಘನೆಯು ಬ್ಯಾಂಕಿನ ಭದ್ರತೆ ಮತ್ತು ಗ್ರಾಹಕರ ಠೇವಣಿಗಳ ಸುರಕ್ಷತೆಗೆ ಹಾನಿ ಮಾಡುವಂತಹದ್ದು ಎಂದು RBI ಪರಿಗಣಿಸಿದೆ ಸದ್ಯ SCDCC ಬ್ಯಾಂಕ್ ನಲ್ಲಿ ನಿಯಮ ಉಲ್ಲಂಘನೆಗೆ RBI 5 ಲಕ್ಷ ಪೆನಾಲ್ಟಿ ಹಾಕಿದೆ. ಆದರೆ ದುರುಪಯೋಗ ಮಾಡಿದ ಸಾಲದ ಮೊತ್ತ ಎಷ್ಟು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಾಗಿದೆ.
ಹಣ ಕೊಟ್ಟು ಡಾಕ್ಟರೇಟ್ ಪಡೆದ ಆರೋಪ ಎದುರಿಸುತ್ತಿರುವ ಹಿನ್ನೆಲೆ ದೃಶ್ಯ ಮಾಧ್ಯಮ ದಲ್ಲಿ ಸುದ್ದಿ ಪ್ರಸಾರ ಮಾಡದಕ್ಕೆ ಪ್ರೆಸ್ ಮೀಟ್ ನಲ್ಲಿ ಮಾಧ್ಯಮ ದ ವಿರುದ್ದ ಹರಿಹಾಯ್ದ ದುರ್ಹಹಂಕಾರಿ SCDCC ಬ್ಯಾಂಕ್ ನ ಅಧ್ಯಕ್ಷ ರಾಜೇಂದ್ರ ಕುಮಾರ್…!
“ಒಂರು ಸಣ್ಣ ಸುದ್ದಿಯೂ ನಿಮ್ಮ ಚಾನಲ್ ನಲ್ಲಿ ಬರುವುದಿಲ್ಲ, ಮತ್ತೆ ಎಂತಕ್ಕೆ ನೀವು ಬರುವುದು ನನ್ನ ಪಟ ತೆಗೀಲಿಕ್ಕ ? ಅದಕ್ಕೆ ನನ್ನಲ್ಲಿ ಜನ ಉಂಟು, ನೀವು ಬರಬೇಕಿಲ್ಲ. ದಿನ ಪತ್ರಿಕೆಗಳು ಮಾತ್ರ ಪತ್ರಿಕಾಗೋಷ್ಟಿಗೆ ಬಂರು ವರದಿ ಮಾಡುತ್ತಾರೆ. ಅವರು ಸಾಕು ನನಗೆ. ಯಾವತ್ತಾದರು ನನ್ನ ಒಂರು ಸುದ್ದಿ ನಿಮ್ಮ ಚಾನಲ್ ಗಳಲ್ಲಿ ಬಂದಿದೆಯಾ ? ಮತ್ತೆ ಯಾಕೆ ಈ ದೊಣ್ಣೆ (ಮೈಕ್) ನನ್ನ ಮುಂದೆ ಇಡುವುದು. ನನ್ನನ್ನು ಖುಷಿ ಪಡಿಸಲಿಕ್ಕಾ ! ತೆಗೆದುಕೊಂಡು ಹೋಗಿ...ಎಂದು ಆಡಿದ ಮಾತು ಮಾಧ್ಯಮ ಪ್ರತಿನಿಧಿಗಳಿಗಳು ಅಕ್ರೋಶಗೊಂಡಿದ್ದಾರೆ.