Sunday, March 15, 2026
Flats for sale
Homeಜಿಲ್ಲೆಮಂಗಳೂರು : ನಾಯಿ ಕೊಡೆಯಂತೆ ತಲೆಎತ್ತಿದ ಲಕ್ಕಿ ಸ್ಕೀಮ್ ನಲ್ಲಿ 12 ತಿಂಗಳು ಹಣ ಪಾವತಿಸಿದ...

ಮಂಗಳೂರು : ನಾಯಿ ಕೊಡೆಯಂತೆ ತಲೆಎತ್ತಿದ ಲಕ್ಕಿ ಸ್ಕೀಮ್ ನಲ್ಲಿ 12 ತಿಂಗಳು ಹಣ ಪಾವತಿಸಿದ ಗ್ರಾಹಕರಿಗೆ ಪಂಗನಾಮ,ಸ್ಕೀಮ್ ಆಯೋಜಕರು ಮಳಿಗೆ ಬಂದ್ ಮಾಡಿ ಪರಾರಿ,ಸಂಬಂಧ ಪಟ್ಟ ಇಲಾಖೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದೆ ಮತ್ತಷ್ಟು ಜನ ಮೊಸದ ಜಾಲಕ್ಕೆ…..!

ಮಂಗಳೂರು : ಮಂಗಳೂರಿನಲ್ಲಿ ನಾಯಿ ಕೊಡೆಯಂತೆ ತಲೆ ಎತ್ತಿದ ಮನೆ,ಕಾರು,ಬಂಗಾರ ಹಾಗೂ ಆಕರ್ಷಕ ಬಹುಮಾನ ಕೊಡುತ್ತೆವೆಂದು ಅಶ್ವಾಸನೆ ನೀಡಿದ ಲಕ್ಕಿ ಸ್ಕೀಮ್ ಗಳು ಇದೀಗ ಗ್ರಾಹಕರು ಕಟ್ಟಿದ ಹಣ ಹಾಗೂ ಬಹುಮಾನ ನೀಡದೆ ಪರಾರಿಯಾಗಿರುವ ಘಟನೆ ಮಂಗಳೂರಿನ ಸುರತ್ಕಲ್ ನಲ್ಲಿ ಮತ್ತೊಮ್ಮೆ ನಡೆದಿದೆ.

ಈ ಹಿಂದೆ ಶೈನ್,ನೀವ್ ಇಂಡಿಯಾ ಹಾಗೂ ಇನ್ನಿತರರು ಗ್ರಾಹಕರಿಗೆ ಐದು ಪೈಸೆ ನೀಡದೆ ಅಂಗಡಿ ಮುಂಗಟ್ಟುಗಳಿಗೆ ಬೀಗ ಜಡಿದು ಊರು ಬಿಟ್ಟು ಪರಾರಿಯಾಗಿದ್ದಾರೆ. ಈ ಸ್ಕೀಮ್ ಗಳಿಗೆ ಯಾವುದೇ ಮಾನ್ಯತೆ ಇಲ್ಲದಿರುವುದರಿಂದ ಸಂಬಂಧ ಪಟ್ಟ ಇಲಾಖೆಯು ಮೌನಕ್ಕೆ ಶರಣಾಗಿದೆ.

ಈ ಬಗ್ಗೆ ಪೋಲಿಸ್ ಇಲಾಖೆ ನಕಲಿ ಸ್ಕೀಮ್ ಜಾಲಗಳನ್ನು ಪತ್ತೆ ಹಚ್ಚಿ ಸರಿಯಾದ ಕ್ರಮ ಕೈಗೊಳ್ಳದೆ ಹೋದರೆ ಮುಂದೊಂದು ದಿನ ಮತ್ತಷ್ಟು ಜನಸಾಮಾನ್ಯರು ಈ ಮೊಸದ ಜಾಲದಲ್ಲಿ ಸಿಲುಕಿ ಪರಿತಪಿಸುವ ಕಾಲ ಸನಿಹದಲ್ಲಿದೆ.ಇದು ಸುರತ್ಕಲ್ ಭಾಗದಲ್ಲಿ ಪಂಗನಾಮ ಹಾಕಿದ 5 ನೇ ಸ್ಲೀಮ್ ಆಗಿದೆ.

ಈ ಬಗ್ಗೆ ತಮ್ಮ ಗ್ರಾಹಕರಿಗೆ ಅಪಪ್ರಚಾರ ದಿಂದ ಸ್ಕೀಮ್ ಮಾಲಕರು ಸಂದೇಶ ರವಾನಿಸಿದ್ದಾರೆ. ಎಲ್ಲರಿಗೂ ತೊಂದರೆ ಈಗಾಗಲೆ‌ ನಾವು ಒಂದು ವಾರದ Schedule ನಮ್ಮ‌ ಗ್ರೂಪನಲ್ಲಿ‌ ಅಪ್ಡೇಟ್ ಮಾಡಿದ್ದೆವೆ ಆದರೆ ಇವತ್ತು ಆದ ವೈರಲ್ ವಿಡಿಯೋದ ಮೂಲಕ ಕಾನೂನು ನಮ್ಮಗೆ ಜನ ಸೇರಿಸುವುದನ್ನು ನಿಷೇಧಿಸಿದೆ ಆದರಿಂದ‌ ಎಲ್ಲಾ ಗ್ರಾಹಕರ ಗಮನಕ್ಕೆ ‌ನಾಳೆಯ (Aug 19 2025 ) ಒಂದು ದಿನ ಯಾರೂ ಕೂಡ ನಮ್ಮ ಶೋರೂಂಗೆ ಬಾರದೆ ನಮ್ಮೊಂದಿಗೆ ಸಹಕರಿಸಿ‌ ಎಂದು ಮನವಿಮಾಡಿದ್ದಾರೆ.

ನೋಡಿ‌‌ ನಾವು ವ್ಯವಸ್ಥಿತವಾಗಿ ನೀಡುತ್ತಿದ್ದೆವೆ ಆದರೆ ಇಂತಹ ಕೀಡಿಗೇಡಿಯಿಂದ ಎಲ್ಲರಿಗೂ ತೊಂದರೆಯಾಗಿದೆ.ಒಬ್ಬ ಮಾಡಿದ ಕರ್ಮಕ್ಕೆ ಸುಮ್ಮನೆ ಎಲ್ಲರಿಗೂ ಕಷ್ಟ ಮುಂದಿನ ಅಪ್ಡೇಟ್ ಶೀಘ್ರವಾಗಿ ನೀಡಲ್ಲಿದೆವೆ ಎಂದು ತಿಳಿಸಿದ್ದಾರೆ.

So All Customers Please Cooperate Please Follow Our Instructions CareFully We Will Distibute Your Gold To Each and Everyone ಎಂದು Team Wafa Enterprises ಸಂದೇಶ ರವಾನಿಸಿದ್ದಾರೆ. ಮೂಲಗಳ ಪ್ರಕಾರ WAFA ಸ್ಕೀಮ್ ನ ಮಾಲಿಕ ಪರಾರಿಯಾಗಿದ್ದು ಕೇವಲ 1 ವರ್ಷದಲ್ಲಿ ಮನೆ,ಕಾರು,ಹಾಗೂ ಇನ್ನಿತರ ಆಕರ್ಷಕ ಬಹುಮಾನ ಗೆಲ್ಲುತ್ತೆವೆಂದು ಅತಿಯಾದ ಆಶೆಯಿಂದ್ದಿದ್ದ ಗ್ರಾಹಕರಿಗೆ ಚೊಂಬು ಸಿಕ್ಕಂತಾಗಿದೆ.

ವಫಾ ಹೆಸರಿನಲ್ಲಿ 30,000 ಜನರಿಂದ ಹಣ ಪಡೆದು ಕೃಷ್ಣಾಪುರದಲ್ಲಿ ಜುವೆಲ್ಲರಿ ಆರಂಭಿಸಿ, ಆ ನಂತರ ಜುವೆಲ್ಲರಿಯ ಬಾಗಿಲು ಕೂಡ ತೆರೆಯದೆ ಅವಧಿ ಮುಗಿದರೂ 12,000 ಜನರಿಗೆ ಸ್ಟ್ರೀಮ್ ನ ದುಡ್ಡು, ವಸ್ತುಗಳನ್ನು ನೀಡದೆ ದುಬೈಗೆ ಪರಾರಿಯಾದ ವಹಾಬ್ ನ ಕಚೇರಿಗೆ ಸಂತ್ರಸ್ತರು ಮುತ್ತಿಗೆ ಹಾಕಿರುವ ದೃಶ್ಯ ವೈರಲ್ ಆಗಿದೆ .ಆದರೆ WAFA Enterprises ನ ಮಾಲಕ ವಹಬ್ ಕುಲಾಯಿ ತಾನು ಎಲ್ಲಿಯೂ ಹೋಗಿಲ್ಲ ಕೆಲಸದ ನಿಮಿತ್ತ ದುಬೈಗೆ ಬಂದಿದ್ದೆನೆ ಗ್ರಾಹಕರು ನೀಡಿದ ಹಣ ಮರುಪಾವತಿಸುತ್ತೆನೆಂದು ವೀಡಿಯೋ ಕಾಲ್ ಮೂಲಕ ಸಂದೇಶ ರವಾನಿಸಿದ್ದು ಗ್ರಾಹಕರಿಗೆ ಕೊಂಚ ನಿರಾಳವಾದಂತಾಗಿದೆ. ಆದರೆ ಈ ಸಂಸ್ಥೆಯ ಮಾಲಕ ಗ್ರಾಹಕರ ಹಣ ಪಾವತಿಸಲು ಇನ್ನೆಷ್ಟು ದಿನ ತೆಗೆದುಕೊಳ್ಳುತ್ತಾರೆಂಬುದನ್ನು ಕಾದುನೋಡಬೇಕಾಗಿದೆ‌.

RELATED ARTICLES

LEAVE A REPLY

Please enter your comment!
Please enter your name here

Most Popular