ಮಂಗಳೂರು : ನಂತೂರಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಬಸ್ ಹರಿದು ಹಿಂಬದಿ ಸವಾರೆ ಸಾವನಪ್ಪಿದ ಘಟನೆ ನಡೆದಿದೆ.
ಮೃತ ಯುವತಿ ಬಲ್ಲಾಳ್ ಬಾಗ್ ನಿವಾಸಿ ದೀಪ್ತಿ ಎಂದು ತಿಳಿದುಬಂದಿದೆ.
ಯುವಕ ಹಾಗೂ ಯುವತಿ ವಾಮಂಜೂರ್ ಕಡೆಗೆ ಬರ್ತ್ ಡೇ ಪಾರ್ಟಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.೨೨ ನಂಬರಿನ ಬಸ್ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಸಮಯದಲ್ಲಿ ಬಸ್ ಆಕೆಯ ಹೊಟ್ಟೆಯ ಮೇಲೆ ಹರಿದಿದೆ.ಗಂಭೀರ ಗಾಯಗೊಂಡ ಯುವತಿಯನ್ನು ಎ.ಜೆ ಆಸ್ಪತ್ರೆಗೆ ದಾಖಲಿಸುವ ವೇಳೆ ದಾರಿ ಮದ್ಯೆ ಮೃತಪಟ್ಟಿರುವುದಾಗಿ ಮಾಹಿತಿ ದೊರೆತಿದೆ.


