Thursday, September 18, 2025
Flats for sale
Homeಜಿಲ್ಲೆಮಂಗಳೂರು : ಧರ್ಮಸ್ಥಳ ಬುರುಡೆ ಪ್ರಕರಣ : 'ಮಾಸ್ಕ್ ಮ್ಯಾನ್' ಚಿನ್ನಯ್ಯ 10 ದಿನ 'SIT'...

ಮಂಗಳೂರು : ಧರ್ಮಸ್ಥಳ ಬುರುಡೆ ಪ್ರಕರಣ : ‘ಮಾಸ್ಕ್ ಮ್ಯಾನ್’ ಚಿನ್ನಯ್ಯ 10 ದಿನ ‘SIT’ ಕಸ್ಟಡಿಗೆ, ಕೋರ್ಟ್ ಆದೇಶ,ನಾನು ಪಾತ್ರಧಾರಿ ಅಷ್ಟೇ , ಸೂತ್ರಧಾರಿಗಳು ಬೇರೆ ಎಂದ ಮಾಸ್ಕ್ ಮ್ಯಾನ್…!

ಮಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಇಂದು ದೂರುದಾರ ಮಾಸ್ಕ್ ಮ್ಯಾನ್ ಸಿ.ಎಸ್ ಚಿನ್ನಯ್ಯನನ್ನು ಬಂಧಿಸಿ ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿದೆ. ಇದೀಗ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು 10 ದಿನ ಎಸ್ ಐ ಟಿ (SIT) ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.ನಿನ್ನೆಯಿಂದ ಇಂದಿನವರೆಗೆ ಸುದೀರ್ಘ ವಿಚಾರಣೆ ನಡೆಸಿದ ಎಸ್ ಐ ಟಿ ಪೊಲೀಸರು ಇಂದು ಮಾಸ್ಕ್ ಮ್ಯಾನ್ ನನ್ನು ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಪೊಲೀಸರ ಮನವಿ ಸ್ವೀಕರಿಸಿದ ಕೋರ್ಟ್ ಮಾಸ್ಕ್ ಚಿನ್ನಯ್ಯನನ್ನು 10 ದಿನ ಎಸ್ ಐ ಟಿ ವಶಕ್ಕೆ ನೀಡಿ ಬೆಳ್ತಂಗಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ನಾನು ತೋರಿದ ಜಾಗದಲ್ಲಿ ಮಾತ್ರ ಶೋಧ ನಡೆಸಿ ಎಂದು ಚಿನ್ನಯ್ಯ ಪಟ್ಟು ಹಿಡಿದಿದ್ದನು. ಕೊನೆಗೆ ಅನುಮಾನಗೊಂಡು ಎಸ್ ಐ ಟಿ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ.ನಾನು ಪಾತ್ರಧಾರಿ ಅಷ್ಟೇ , ಸೂತ್ರಧಾರಿಗಳು ಬೇರೆ ಇದ್ದಾರೆ. ಅವರು ಹೇಳಿದಂತೆಯೇ ನಾನು ಕೇಳಿದೆ. ಕೋರ್ಟ್ ಗೆ ಹಾಜರುಪಡಿಸಿದ ಬುರುಡೆ ಎಲ್ಲಿಂದ ಬಂತು ಗೊತ್ತಿಲ್ಲ.. ಎಂದಿದ್ದಾನೆ. ಒಟ್ಟಿನಲ್ಲಿ ಧರ್ಮಸ್ಥಳದ ಬುರುಡೆ ಪ್ರಕರಣ ಟ್ವಿಸ್ಟ್ ಆಗಿದ್ದು ಕೊನೆಯ ಅಂತಕ್ಕೆ ತಲುಪಿರುವ ಸಾಧ್ಯತೆ ಕಂಡುಬರುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular