ಮಂಗಳೂರು ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ AI ಮೂಲಕ ಸೃಷ್ಟಿಸಿರುವ ವೀಡಿಯೊ ಸಮೀರ್ ಅಪ್‌ಲೋಡ್ ಮಾಡಿದ್ದು ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಲು ತಪ್ಪು ಹಾಗೂ ಸುಳ್ಳು ವಿಷಯಗಳನ್ನು ಉದ್ದೇಶಪೂರ್ವಕವಾಗಿ ವೈರಲ್ ಮಾಡಿದ್ದನು.ಇದಕ್ಕೆ ದೃಢೀಕರಿಸಲು ಪೊಲೀಸರು ದಾಖಲೆಗಳನ್ನು ಸಂಗ್ರಹಿಸಿದ್ದರು ಆದರೆ ಈ ಹಿಂದೆ ಸುಮಾರು 45 ನಿಮಿಷಗಳ ವಿಚಾರಣೆ ನಡೆದಿದ್ದು, ಅಗತ್ಯ ದಾಖಲಾತಿಗಳಲ್ಲಿ ಕೆಲವು ಸಲ್ಲಿಸಿದ ಬಳಿಕ ಸಮೀರ್ ಠಾಣೆಯಿಂದ ಹೊರಡಿದ್ದನು.
AI ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಪ್ರಕ್ರಿಯೆ ಅಪೂರ್ಣಗೊಂಡ ಹಿನ್ನೆಲೆ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಮನೆ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ.
ಈ ಹಿಂದೆ ವಿಚಾರಣೆ ನಡೆಸಿದರೂ ಸಹ ಸರಿಯಾದ ಮಾಹಿತಿ ಹಾಗೂ ಕಂಪ್ಯೂಟರ್ ಸೇರಿದಂತೆ ಇತರೆ ವಸ್ತುಗಳನ್ನು ತರದಿರುವ ಕಾರಣ ಪೊಲೀಸರು ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದುಕೊಂಡಿದ್ದು, ಇಂದು ಬೆಂಗಳೂರಿನ ಬನ್ನೇರುಘಟ್ಟ ಸಮೀಪವಿರುವ ಸಮೀರ್ ಮನೆ ಮೇಲೆ SOCO ತಂಡದ ಸಮೇತ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಒಟ್ಟಿನಲ್ಲಿ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಬುರುಡೆ ಗ್ಯಾಂಗ್ ಗೆ ಉಲ್ಟಾಹೊಡೆದಂತಾಗಿದೆ. ಸಮೀರ್ ನನ್ನ ಈ ಹಿಂದೆ ಅರೆಸ್ಟ್ ಮಾಡಲು ತೆರಳಿದ್ದಾಗ ಕಣ್ತಪ್ಪಿಸಿಕೊಂಡು ಮಂಗಳೂರು ಕೋರ್ಟ್ ನಿಂದ ಜಾಮೀನು ಪಡೆದುಕೊಂಡು ಬಂಧನದಿಂದ ಪಾರಾಗಿದ್ದನು . ಆದ್ರೆ, ಇದೀಗ ಪೊಲೀಸರು ಸರ್ಚ್ ವಾರೆಂಟ್ ಪಡೆದು ಜಮೀರ್ ಮನೆಯಲ್ಲಿ ಶೋಧ ನಡೆಸಿದ್ದಾರೆ.ಕೆಲವು ಮೌಲ್ಯದ ವಸ್ತುಗಳನ್ನು ವಶಪಡಿಸಿದ್ದಾರೆಂದು ಮಾಹಿತಿ ದೊರೆತಿದೆ.