ಮಂಗಳೂರು : ಧರ್ಮಸ್ಥಳದಲ್ಲಿ ದಿನಕ್ಕೊಂದು ಘಟನೆಗಳು ನಡೆಯುತ್ತಿದ್ದು ಒಂದೊಂದು ತಿರುವು ಪಡೆಯುತ್ತಿದೆ. ದಿನಾಂಕ 06.08.2025 ರಂದು ಧರ್ಮಸ್ಥಳ ಪಾಂಗಳ ಕ್ರಾಸ್ ಬಳಿ ನಡೆದ ಅಹಿತಕರ ಘಟನೆಯ ವೇಳೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ:47/2025 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಿದ್ದಾರೆ.
ಬಂದಿಟರ್ನಂದು ಧರ್ಮಸ್ಥಳ ನಿವಾಸಿ ಪದ್ಮಪ್ರಸಾದ್ (32)) ಸುಹಾಸ್ (22) ಉಜಿರೆ ನಿವಾಸಿ ಖಲಂದರ್ ಪುತ್ತುಮೋನು (42) ಕಳೆಂಜ ನಿವಾಸಿ ಚೇತನ್ (21)ಧರ್ಮಸ್ಥಳ ನಿವಾಸಿ ಶಶಿಧರ್(30) ಕಳ್ಮಂಜ ನಿವಾಸಿ ಗುರುಪ್ರಸಾದ್ (19) ಎಂದು ತಿಳಿದುಬಂದಿದೆ.
ಈ ಆರೋಪಿಗಳನ್ನು ದಸ್ತಗಿರಿ ಮಾಡಿ ದಿನಾಂಕ 09 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಾಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿ ಬಿಡುಗಡೆಗೊಳಿಸಿರುತ್ತದೆ ಎಂಬ ಮಾಹಿತಿ ದೊರೆತಿದೆ.


