ಮಂಗಳೂರು : ಧರ್ಮಸ್ಥಳ ಬುರುಡೆ ಪ್ರಕರಣ ಎಲ್ಲಿಂದಲೋ ಎಲ್ಲಿಗೆ ಹೋಗುತ್ತಲೇ ಇದೆ.S.I.T ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಬುರುಡೆ ಟೀಮ್ ಗೆ ಮತ್ತೊಂದು ಆಘಾತ ಉಂಟಾಗಿದೆ.
ಧರ್ಮಾಸ್ಥಳ ಬುರುಡೆಯ ಅತಿದೊಡ್ಡ ರಹಸ್ಯ ಬಯಲಾಗಿದ್ದು ಬುರುಡೆಯನ್ನು ಕೊಟ್ಟದ್ದೇ ಸೌಜನ್ಯ ಮಾವ ವಿಠ್ಠಲ ಗೌಡ ಎಂಬ ಮಾಹಿತಿ sit ತನಿಖೆ ವೇಳೆ ಬಯಲಾಗಿದೆ.ಸೌಜನ್ಯ ಮಾವ ವಿಠ್ಠಲ ಗೌಡರಿಗೆ ಧರ್ಮಸ್ಥಳ ಸ್ಥಾನ ಘಟ್ಟದ ಬಳಿ ಹೋಟೆಲ್ ಇದ್ದಿದ್ದು ಬುರುಡೆ ಮಾನ್ ಚೆನ್ನೈಯ್ಯ ಹಾಗೂ ವಿಠ್ಠಲ ಗೌಡ ಹಳೆಯ ಸ್ನೇಹಿತರೆಂದು ತಿಳಿದುಬಂದಿದೆ.
ಮಾಹಿತಿಯ ಪ್ರಕಾರ ಸೌಜನ್ಯ ಮಾವ ವಿಠ್ಠಲ ಗೌಡರ ಹೋಟೆಲ್ ನಲ್ಲಿ ಚಿನ್ನಯ್ಯ ನೆಲೆಸಿದ್ದು ಚಿನ್ನಯ್ಯನಿಗೆ ಸಾಥ್ ನೀಡಿದ್ದಾರೆಂದು ತಿಳಿದಿದೆ.ಈ ಹಿಂದೆ ಸೌಜನ್ಯ ಮೃತಪಟ್ಟ ವೇಳೆ ಸೌಜನ್ಯ ಮಾವ ವಿಠ್ಠಲ ಗೌಡರು ಹೆಗ್ಗಡೆ ಕುಟುಂಬ ವಿರುದ್ಧ ಆಕ್ರೋಶ ಹೊರಹಾಕಿದ್ದು ಹಣ ಹಾಗೂ ತೋಲ್ ಬಲದ ನಡುವೆ ನ್ಯಾಯ ಸಿಗುವುದಿಲ್ಲವೆಂದು ತಿಳಿದು ಈ ಕಾರ್ಯಕ್ಕೆ ತೊಡಗಿದ್ದರೆಂದು ತಿಳಿದುಬಂದಿದೆ .ಧರ್ಮಸ್ಥಳದಲ್ಲಿ ಈ ಹಿಂದೆ ನಡೆದಿರುವ ಪ್ರಕರಣದ ಸಾಕ್ಷ್ಯ ನಾಶವಾದ ಹಿನ್ನೆಲೆ ಸ್ಥಳೀಯರು ಈ ಕೃತ್ಯಕ್ಕೆ ಸಹಕರಿಸಿದ್ದಾರೆಂದು ತಿಳಿದು ಬಂದಿದೆ.ಒಟ್ಟಿನಲ್ಲಿ ನಾಶವಾದ ಸಾಕ್ಷ್ಯಕ್ಕೆ ತಲೆಕೆಡಿಸಿಕೊಂಡ ಊರಿನ ಕೆಲವರು ಈ ಕಾರ್ಯವನ್ನು ಎ.ಐ ಮೂಲಕ ಜನರನ್ನು ತಲುಪಿಸುವ ಕೆಲಸಕ್ಕೆ ಕೈಹಾಕಿದ್ದಾರೆಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.